ETV Bharat / sports

'ಕೊಹ್ಲಿ ನೇತೃತ್ವದಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿದೆ, ಅವರೇ ನಾಯಕರಾಗಿ ಮುಂದುವರಿಯಲಿದ್ದಾರೆ' - ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ಯಾವುದೇ ಒಂದು ತಂಡ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದರೆ ನಾಯಕತ್ವದ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಶಾ ಸೋಮವಾರ ನಾಯಕತ್ವ ಬದಲಾವಣೆ ವಿಷಯವಾಗಿ ನಡೆಯುತ್ತಿರುವ ಚರ್ಚೆಗೆ ತೆರೆ ಎಳೆದಿದ್ದಾರೆ.

Virat Kohli
ವಿರಾಟ್ ಕೊಹ್ಲಿ -ರೋಹಿತ್ ಶರ್ಮಾ
author img

By

Published : Sep 14, 2021, 5:32 AM IST

ಮುಂಬೈ: ಕಳೆದೆರಡು ದಿನಗಳಿಂದ ಭಾರತ ಸೀಮಿತ ಓವರ್​ಗಳ ತಂಡದ ನಾಯಕತ್ವದಿಂದ ವಿರಾಟ್​ ಕೊಹ್ಲಿ ಕೆಳಗಿಳಿದು ಉಪನಾಯಕ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಬಿಟ್ಟುಕೊಡಲಿದ್ದಾರೆ ಎಂಬ ಊಹಾಪೋಹಾ ಕೇಳಿ ಬರುತ್ತಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೊನೆಗೂ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಪ್ರಸ್ತುತ ಭಾರತ ತಂಡ ಉತ್ತಮ ಪ್ರದರ್ಶನ ತೋರುತ್ತಿದ್ದು, ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

"ಯಾವುದೇ ಒಂದು ತಂಡ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದರೆ ನಾಯಕತ್ವದ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದು ಶಾ ಸೋಮವಾರ ನಾಯಕತ್ವ ಬದಲಾವಣೆ ವಿಷಯವಾಗಿ ನಡೆಯುತ್ತಿರುವ ಚರ್ಚೆಗೆ ತೆರೆ ಎಳೆದಿದ್ದಾರೆ.

ಕಳೆದ ಎರಡು ದಿನಗಳಿಂದ ಟಿ20 ವಿಶ್ವಕಪ್​ ನಂತರ ವಿರಾಟ್​ ಕೊಹ್ಲಿ ಸೀಮಿತ ಓವರ್​ಗಳ ನಾಯಕತ್ವವನ್ನು ಉಪನಾಯಕ ರೋಹಿತ್ ಶರ್ಮಾರಿಗೆ ಬಿಟ್ಟುಕೊಟ್ಟು ಕೇವಲ ಬ್ಯಾಟ್ಸ್​ಮನ್ ಆಗಿ ಮಾತ್ರ ಮುಂದುವರಿಯಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಇಂಗ್ಲೆಂಡ್​ ವಿರುದ್ಧ ಅಪೂರ್ಣವಾಗಿ ಅಂತ್ಯಗೊಂಡಿರುವ ಟೆಸ್ಟ್​ ಸರಣಿಯನ್ನು ಲಿಂಕ್ ಮಾಡಿರುವ ಶಾ, " ಭಾರತ 2-1ರಲ್ಲಿ ಸರಣಿ ಗೆಲ್ಲಲು ನಾಯಕತ್ವ ಮತ್ತು ಪ್ರದರ್ಶನ ಕಾರಣ ಎಂದು ಹೇಳಿದ್ದಾರೆ. ಜೊತೆಗೆ ಕೊಹ್ಲಿ ನಾಯಕತ್ವದಲ್ಲಿ ಭಾರತ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಿಟ್ಟರೆ ಉಳಿದೆಲ್ಲಾ ಸರಣಿಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಹಾಗಾಗಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ" ಎಂದು ಶಾ ತಿಳಿಸಿದ್ದಾರೆ.

ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಕೂಡ ಊಹಾಪೋಹಗಳ ವಿರುದ್ಧ ಕಿಡಿಕಾರಿದ್ದು, ಈ ವರದಿಗಳೆಲ್ಲಾ ಕೆಲಸಕ್ಕೆ ಬಾರದವು. ಕೇವಲ ಮಾಧ್ಯಮಗಳ ಸೃಷ್ಠಿಯಷ್ಟೇ. ಈ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ವಿರಾಟ್ ನಾಯಕನಾಗಿ ಉಳಿಯಲಿದ್ದಾರೆ" ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್​ ವಿರುದ್ಧದ ಫೈನಲ್ ಟೆಸ್ಟ್​ ರದ್ದು: ಹೆಚ್ಚುವರಿ ಎರಡು T20 ಪಂದ್ಯ ಆಡಲು ಬಿಸಿಸಿಐ ಆಫರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.