ದುಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್ ಅಲ್ಪಮೊತ್ತದ ಗುರಿಯನ್ನು ನೀಡಿ ಸೋಲನುಭವಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0ಯಿಂದ ಸೀರಿಸನ್ನು ವಶ ಪಡಿಸಿಕೊಂಡಿದೆ. ಈ ಮೂಲಕ ತವರಿನಲ್ಲಿ ಸತತ 6ನೇ ಸರಣಿಯನ್ನು ತನ್ನ ತೆಕ್ಕೆಗೆ ತೆಗೆದು ಕೊಂಡು ವಿಶ್ವಕಪ್ನ ಪ್ರಬಲ ತಂಡ ಎಂಬ ಸಂದೇಶವನ್ನು ನೀಡಿದೆ. ಭಾರತೀಯ ಬೌಲರ್ಗಳಿಗೆ ನಲುಗಿದ ಬ್ಲಾಕ್ಕ್ಯಾಪ್ಸ್ 108 ರನ್ಗೆ ಆಲ್ ಔಟ್ ಆದರು. ಭಾರತ ಈ ಗುರಿಯನ್ನು 20.1 ಓವರ್ನಲ್ಲಿ ಎರಡು ವಿಕೆಟ್ ನಷ್ಟದಲ್ಲಿ ಸಾಧಿಸಿತು.
ಭಾರತದ ಪರ ನಾಯಕ ರೋಹಿತ್ ಶರ್ಮಾ(51) ಅರ್ಧ ಶತಕಗಳಿಸಿದರೆ. ಪ್ರಥಮ ಪಂದ್ಯದ ದ್ವಿಶತಕ ವೀರ ಶುಭಮನ್ ಗಿಲ್ ಅಜೇಯರಾಗಿ 40 ರನ್ ಗಳಿಸಿದರು. ಉಳಿದಂತೆ ವಿರಾಟ್ 11 ಕ್ಕೆ ಔಟ್ ಆದರೆ ಕಿಶನ್ 8 ರನ್ಗಳಿಸಿ ಅಝೇಯರಾಗಿ ಉಳಿದಿದ್ದರು. 8 ವಿಕೆಟ್ಗಳ ಸುಲಭ ಜಯ ಭಾರತಕ್ಕೆ ಲಭಿಸಿತ್ತು. ಆದರೆ ಈ ಪಂದ್ಯದ ಸೋಲಿನಿಂದ ನ್ಯೂಜಿಲೆಂಡ್ ದೊಡ್ಡ ನಷ್ಟವನ್ನು ಅನುಭವಿಸಿದೆ.
ರ್‍ಯಾಕಿಂಗ್ ಕುಸಿತ ಕಂಡ ಬ್ಲಾಕ್ಕ್ಯಾಪ್ಸ್: ಇಂದು ರಾಯ್ಪುರದ ಪಂದ್ಯದಲ್ಲಿ ಹೀನಾಯವಾಗಿ ಸೋತ ನ್ಯೂಜಿಲೆಂಡ್ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ನಿಂದ ಕುಸಿತ ಕಂಡಿದೆ. ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದ ಕಿವೀಸ್ ಈಗ ಎರಡಕ್ಕೆ ಇಳಿದಿದೆ. ಇಂಗ್ಲೆಂಡ್ ಪ್ರಥಮ ಸ್ಥಾನ ಅಲಂಕರಿಸಿದೆ. ಇಂಗ್ಲೆಂಡ್ 30 ಪಂದ್ಯಗಳಿಂದ 3,400 ಅಂಕಗಳೊಂದಿಗೆ 113 ರೇಟಿಂಗ್ ಗಳಿಸಿದೆ. ನ್ಯೂಜಿಲೆಂಡ್ 20 ಪಂದ್ಯಗಳಿಂದ 3,166 ಅಂಕದಿಂದ 113 ರೇಟಿಂಗ್ನಿಂದ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನ ಭಾರತದ್ದಾಗಿದೆ.
-
There's some movement at the top of the @MRFWorldwide Men's ODI Team Rankings after India's win over New Zealand 👀
— ICC (@ICC) January 21, 2023 " class="align-text-top noRightClick twitterSection" data="
Details 👇https://t.co/uMdjXKupkc
">There's some movement at the top of the @MRFWorldwide Men's ODI Team Rankings after India's win over New Zealand 👀
— ICC (@ICC) January 21, 2023
Details 👇https://t.co/uMdjXKupkcThere's some movement at the top of the @MRFWorldwide Men's ODI Team Rankings after India's win over New Zealand 👀
— ICC (@ICC) January 21, 2023
Details 👇https://t.co/uMdjXKupkc
ಭಾರತ ತಂಡ ಅಭೂತ ಪೂರ್ವ ಪ್ರದರ್ಶನ: ಭಾರತ ಸತತವಾಗಿ ಏಕದಿನ ಕ್ರಿಕೆಟ್ ಆಡುತ್ತಿದ್ದು, ಕಳೆದ ನಾಲ್ಕು ಇನ್ನಿಂಗ್ಸ್ನಲ್ಲಿ ತಿಶತಕ ರನ್ಗಳ ಗುರಿಯನ್ನು ಎದುರಾಳಿಗೆ ನೀಡುತ್ತಾ ಬಂದಿದೆ. ಬಾಂಗ್ಲಾ ಎದುರಿನ ಕೊನೆಯ ಪಂದ್ಯದಲ್ಲಿ 409 ರನ್ ಗುರಿ ನೀಡಿತ್ತು. ಈ ಪಂದ್ಯದಲ್ಲಿ ಇಶನ್ ಕಿಶನ್ ದ್ವಿಶತಕ ಗಳಿಸಿದ್ದರು. ಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ 373 ಮತ್ತು ಮೂರನೇ ಪಂದ್ಯದಲ್ಲಿ 390 ರನ್ ಗುರಿ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಗಿಲ್ ದ್ವಿಶತಕದ ಜೊತೆಗೆ 349ರನ್ ಗುರಿ ನೀಡಲಾಗಿತ್ತು. ಕಿವೀಸ್ ಎದುರಿನ ಮೊದಲ ಪಂದ್ಯ ಬಿಟ್ಟರೆ ಮತ್ತೆಲ್ಲಾ ಪಂದ್ಯಗಳಲ್ಲಿ 350 ಪ್ಲಸ್ ರನ್ಗಳಿಸಿತ್ತು.
ನಂಬರ್ 1 ಆಗಲಿದೆ ಭಾರತ: ರ್‍ಯಾಕಿಂಗ್ ಭಾರತ ಮತ್ತೆ ನಂಬರ್ 1 ಆಗಲಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಗೆದ್ದರೆ ಭಾರತ ಇಂಗ್ಲೆಂಡ್ನ್ನೂ ಕೆಳಕ್ಕೆ ತಳ್ಳಿ ಮೊದಲ ಸ್ಥಾನಕ್ಕೆ ಏರಲಿದೆ. ಭಾರತ ರ್ಯಾಕಿಂಗ್ನಲ್ಲಿ 43 ಪಂದ್ಯಗಳಲ್ಲಿ 4,847 ಅಂಕ ಗಳಿಸಿದ್ದು 113 ರೇಟಿಂಗ್ ಗಳಿಸಿದೆ. ಮುಂದಿನ ಪಂದ್ಯದಲ್ಲಿ ಗೆದ್ದು ತವರಿನಲ್ಲಿ ಈ ವರ್ಷದ ಎರಡನೇ ಕ್ಲೀನ್ಸ್ವೀಪ್ ಸಾಧಿಸಿದರೆ ನಂ.1 ಪಟ್ಟ ಮುಡಿಗೇರಲಿದೆ.
ನಾಲ್ಕರಿಂದ ಮೂರಕ್ಕೆ ಜಿಗಿದ ಭಾರತ: ಇಂದಿನ ಪಂದ್ಯಕ್ಕೂ ಮೊದಲು ಭಾರತ 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿತ್ತು. ಈ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ 115 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಇಂಗ್ಲೆಂಡ್ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 112 ರೇಟಿಂಗ್‌ನೊಂದಿಗೆ ಆಸ್ಟ್ರೇಲಿಯಾ ಮೂರರಲ್ಲಿತ್ತು.
ರಾಯ್ಪುರದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ: ಚತ್ತೀಸ್ಗಡದ ರಾತ್ಪುರದಲ್ಲಿರುವ ವೀರ ನಾರಾಯಣ ಸಿಂಗ್ ಕ್ರೀಡಾಂಗಣ ಇಂದು ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸಿತು. ಈ ಕ್ರೀಡಾಂಗಣ ಭಾರತದ ಅತೀ ದೊಡ್ಡ ಸ್ಟೇಡಿಯಂನಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ದೇಶದ 50ನೇ ಕ್ರೀಡಾಂಗಣ ಇದಾಗಿದೆ.
ಇದನ್ನೂ ಓದಿ: 2028ರ ಒಲಿಂಪಿಕ್ಸ್ ಆರು ತಂಡಗಳನ್ನು ಶಿಫಾರಸು ಮಾಡಿದ ಐಸಿಸಿ: ಮುಂದಿನ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಇರಲಿದೆಯೇ?