ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಿವೀಸ್​ ಸ್ಟಾರ್​​ ರಾಸ್ ಟೇಲರ್ ವಿದಾಯ - ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ರಾಸ್ ಟೇಲರ್ ವಿದಾಯ

Ross Taylor retirement: ನ್ಯೂಜಿಲೆಂಡ್ ಕ್ರಿಕೆಟ್​​ ಸ್ಟಾರ್​​ ರಾಸ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮುಂಬರುವ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ನಡೆಯಲಿರುವ ಏಕದಿನ ಸರಣಿಗಳ ಮೂಲಕ ಅವರು ಎಲ್ಲ ಮಾದರಿಯ ಕ್ರಿಕೆಟ್​ನಿಂದ ದೂರ ಸರಿಯಲಿದ್ದಾರೆ.

Ross Taylor To Retire From International Cricket
ರಾಸ್ ಟೇಲರ್
author img

By

Published : Dec 30, 2021, 10:34 AM IST

Updated : Dec 30, 2021, 10:43 AM IST

ವೆಲ್ಲಿಂಗ್ಟನ್​: ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಅವರು ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಶನಿವಾರದಿಂದ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯು ಅವರಿಗೆ ವೈಟ್​ ಜೆರ್ಸಿಯಲ್ಲಿ ಕೊನೆಯ ಪಂದ್ಯವಾಗಲಿದೆ.

ಟ್ವೀಟ್ ಮೂಲಕ ಟೇಲರ್​ ಈ ಮಹತ್ವದ ಘೋಷಣೆ ಮಾಡಿದ್ದಾರೆ. ​'ಇದೊಂದು ಅದ್ಭುತವಾದ ಪ್ರಯಾಣವಾಗಿತ್ತು. ನನಗೆ ಸಾಧ್ಯವಿರುವವರೆಗೆ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ' ಎಂದು ಹೇಳಿಕೊಂಡಿದ್ದಾರೆ.

37 ವರ್ಷದ ಟೇಲರ್ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ನ್ಯೂಜಿಲೆಂಡ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಮುಖ್ಯ ಆಧಾರವಾಗಿದ್ದರು. ಹಲವು ದಾಖಲೆ ಮತ್ತು ಸಾಧನೆಗೆ ಪಾತ್ರರಾಗಿರುವ ರಾಸ್​, ವಿಶೇಷವಾಗಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ(445) ಆಡಿರುವುದಲ್ಲದೆ, ಅತ್ಯಧಿಕ ರನ್(18,074) ​ಪೇರಿಸಿದ್ದಾರೆ. ಹೀಗೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಕಿವೀಸ್ ಆಟಗಾರನಾಗಿ ರಾಸ್ ಟೇಲರ್ ನಿವೃತ್ತಿಯನ್ನು ಪಡೆದುಕೊಳ್ಳಲಿದ್ದಾರೆ.

  • Today I'm announcing my retirement from international cricket at the conclusion of the home summer, two more tests against Bangladesh, and six odi’s against Australia & the Netherlands. Thank you for 17 years of incredible support. It’s been an honour to represent my country #234 pic.twitter.com/OTy1rsxkYp

    — Ross Taylor (@RossLTaylor) December 29, 2021 " class="align-text-top noRightClick twitterSection" data=" ">

ರಾಸ್ ಟೇಲರ್ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈವರೆಗೆ 233 ಏಕದಿನ ಪಂದ್ಯಗಳನ್ನು ಆಡಿರುವ ಅವರು ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು 2006ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಕಣಕ್ಕಿಳಿದಿದ್ದರು. ಟೇಲರ್ ಟೆಸ್ಟ್ ಕ್ರಿಕೆಟ್‌ನಲ್ಲಿ 19 ಶತಕಗಳೊಂದಿಗೆ 7584 ರನ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 8581 ರನ್‌ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 21 ಶತಕಗಳನ್ನು ಸಿಡಿಸಿರುವುದು ಕೂಡ ನ್ಯೂಜಿಲೆಂಡ್ ಪರ ದಾಖಲೆಯಾಗಿದೆ.

ಕಿವೀಸ್​ ಪರ 102 ಟಿ20 ಪಂದ್ಯಗಳನ್ನು ಆಡಿದ್ದು, ದೇಶಕ್ಕೆ ಎಲ್ಲಾ ಮಾದರಿಯಲ್ಲಿಯೂ 100ಕ್ಕೂ ಅಧಿಕ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ: Ind Vs Sa Test: ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಮೈಲುಗಲ್ಲು ತಲುಪಿದ ​ಜಸ್ಪ್ರೀತ್ ಬುಮ್ರಾ

Last Updated : Dec 30, 2021, 10:43 AM IST

For All Latest Updates

TAGGED:

New Zealand
ETV Bharat Logo

Copyright © 2025 Ushodaya Enterprises Pvt. Ltd., All Rights Reserved.