ಕ್ರೈಸ್ಟ್ಚರ್ಚ್ : ಭಾರತ ವಿರುದ್ಧ 2-1ರಲ್ಲಿ ಸರಣಿ ಜಯಿಸಿದ್ದ ದಕ್ಷಿಣ ಆಫ್ರಿಕಾ ತಂಡ ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಪ್ರತಿರೋಧವಿಲ್ಲದೆ ಹೀನಾಯ ಸೋಲುಂಡಿದೆ.
ಇನ್ನು ಇನ್ನಿಂಗ್ಸ್ ಮತ್ತು 276 ರನ್ಗಳ ಜಯದೊಂದಿಗೆ ಹರಿಣಗಳ ವಿರುದ್ಧ ನ್ಯೂಜಿಲ್ಯಾಂಡ್ 18 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಜಯ ಕಂಡಿದೆ. ಒಟ್ಟಾರೆ 45 ಟೆಸ್ಟ್ಗಳ ಮುಖಾಮುಖಿಯಲ್ಲಿ ಕಿವೀಸ್ ಪಡೆಗೆ ಸಿಕ್ಕ 5ನೇ ಜಯವಾಗಿದೆ.
ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ಕೇವಲ 95 ರನ್ಗಳಿಗೆ ಆಲೌಟ್ ಆಗಿತ್ತು. ಮ್ಯಾಟ್ ಹೆನ್ರಿ 23 ರನ್ಗಳಿಗೆ 7 ವಿಕೆಟ್ ಪಡೆದು ಮಿಂಚಿದ್ದರು. ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್ನಲ್ಲಿ 482 ರನ್ಗಳಿಸಿತ್ತು.
ಹೆನ್ರಿ ನಿಕೋಲ್ಸ್ 105, ಟಾಮ್ ಬ್ಲಂಡೆಲ್ 96, ಮ್ಯಾಟ್ ಹೆನ್ರಿ ಅಜೇಯ 58, ಡಿ ಗ್ರ್ಯಾಂಡ್ಹೋಮ್ 45, ವ್ಯಾಗ್ನರ್ 49 ರನ್ಗಳಿಸಿ ಬೃಹತ್ ಮೊತ್ತ ದಾಖಲಿಸಲು ಕಿವೀಸ್ಗೆ ನೆರವಾಗಿದ್ದರು.
ದಕ್ಷಿಣ ಆಫ್ರಿಕಾ ಪರ ರಬಾಡ 113ಕ್ಕೆ 2, ಗ್ಲೆಂಟನ್ ಸ್ಟರ್ಮನ್ 124ಕ್ಕೆ1, ಮಾರ್ಕೊ ಜಾನ್ಸನ್ 96ಕ್ಕೆ 2, ಡುವಾನ್ನೆ ಒಲಿವಿಯರ್ 100ಕ್ಕೆ 3 ವಿಕೆಟ್ ಪಡೆದಿದ್ದರು.
-
New Zealand beat South Africa by an innings and 276 runs to go 1-0 up in the two-match Test series 💪#NZvSA | #WTC23 pic.twitter.com/SvmhtSDHNb
— ICC (@ICC) February 19, 2022 " class="align-text-top noRightClick twitterSection" data="
">New Zealand beat South Africa by an innings and 276 runs to go 1-0 up in the two-match Test series 💪#NZvSA | #WTC23 pic.twitter.com/SvmhtSDHNb
— ICC (@ICC) February 19, 2022New Zealand beat South Africa by an innings and 276 runs to go 1-0 up in the two-match Test series 💪#NZvSA | #WTC23 pic.twitter.com/SvmhtSDHNb
— ICC (@ICC) February 19, 2022
387ರನ್ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ, ಕೇವಲ 111 ರನ್ಗಳಿಗೆ ಸರ್ವಪತನ ಕಂಡು ಇನ್ನಿಂಗ್ಸ್ ಸೋಲಿಗೆ ತುತ್ತಾಯಿತು. ಟೆಂಬ ಬವುಮಾ 41,ಕೈಲ್ ವೀರೆನ್ನೆ 30 ಮಾತ್ರ 20ರ ಗಡಿ ದಾಟಿದರು.
ಸರೆಲ್ ಇರ್ವಿನ್ ಮತ್ತು ನಾಯಕ ಎಲ್ಗರ್ ಶೂನ್ಯ ಸುತ್ತಿದರೆ, ಮಾರ್ಕ್ರಮ್ 2, ಡಸೆನ್ 9, ಜುಬೇರ್ ಹಮ್ಜಾ 6, ಮಾರ್ಕೊ ಜಾನ್ಸನ್ 10, ರಬಾಡ 0, ಸ್ಟರ್ಮನ್ 11 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಕಿವೀಸ್ ಪರ ಅನುಭವಿ ಬೌಲರ್ ಟಿಮ್ ಸೌಥಿ 35ಕ್ಕೆ 5, ಮ್ಯಾಟ್ ಹೆನ್ರಿ 32ಕ್ಕೆ 2, ನೀಲ್ ವ್ಯಾಗ್ನರ್ 2 ಮತ್ತು ಜೇಮಿಸನ್ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
9 ವಿಕೆಟ್ ಮತ್ತು 58 ರನ್ಗಳಿಸಿ ಆಲ್ರೌಂಡ್ ಪ್ರದರ್ಶನ ತೋರಿದ ಮ್ಯಾಟ್ ಹೆನ್ರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಫೆಬ್ರವರಿ 25ರಿಂದ ಇದೇ ಮೈದಾನದಲ್ಲಿ 2ನೇ ಟೆಸ್ಟ್ ನಡೆಯಲಿದೆ.
ಇದನ್ನೂ ಓದಿ:ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ: ಪೂಜಾರ, ರಹಾನೆ ಸಹಿತ ನಾಲ್ವರನ್ನು ತಂಡದಿಂದ ಕೈಬಿಟ್ಟ ಆಯ್ಕೆ ಸಮಿತಿ