ETV Bharat / sports

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಮುನ್ನ ಟೀಂ ಇಂಡಿಯಾದ ಹೊಸ ಜೆರ್ಸಿ ಅನಾವರಣ - ಟೀಮ್ ಇಂಡಿಯಾದ ಹೊಸ ಜೆರ್ಸಿಯ ಫಸ್ಟ್ ಲುಕ್

ಭಾರತೀಯ ಕ್ರಿಕೆಟ್ ತಂಡದ ಹೊಸ ಕಿಟ್ ಪ್ರಾಯೋಜಕ ಅಡಿಡಾಸ್ ಕಂಪನಿ ಮೂರು ಮಾದರಿಯ ಕ್ರಿಕೆಟ್‌ಗಾಗಿ ಹೊಸ ಜೆರ್ಸಿ ಬಿಡುಗಡೆ ಮಾಡಿದೆ.

New Jerseys For Indian Cricket Team  New Jerseys For Indian Cricket Team Released  World Test Championship  World Test Championship 2023  ಮೂರು ಫಾರ್ಮ್ಯಾಟ್‌ಗಳಿಗೂ ಹೊಸ ಜೆರ್ಸಿ  ಟೀಂ ಇಂಡಿಯಾದ ಮೂರು ಫಾರ್ಮ್ಯಾಟ್‌ಗಳಿಗೂ ಹೊಸ ಜೆರ್ಸಿ  ಹೊಸ ಜೆರ್ಸಿ ಅನಾವರಣಗೊಳಿಸಿದ ಅಡಿಡಾಸ್​ ಭಾರತೀಯ ಕ್ರಿಕೆಟ್ ತಂಡದ ಹೊಸ ಕಿಟ್ ಪ್ರಾಯೋಜಕ  ಟೀಮ್ ಇಂಡಿಯಾದ ಹೊಸ ಜೆರ್ಸಿ  ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್  ಟೀಮ್ ಇಂಡಿಯಾದ ಹೊಸ ಜೆರ್ಸಿಯ ಫಸ್ಟ್ ಲುಕ್  ಭಾರತೀಯ ಕ್ರಿಕೆಟ್ ತಂಡ
ಮೂರು ಫಾರ್ಮ್ಯಾಟ್‌ಗಳಿಗೂ ಹೊಸ ಜೆರ್ಸಿ ಅನಾವರಣಗೊಳಿಸಿದ ಅಡಿಡಾಸ್​
author img

By

Published : Jun 2, 2023, 8:01 AM IST

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 ಕ್ಕೆ ಮುನ್ನ ಟೀಂ ಇಂಡಿಯಾದ ಹೊಸ ಜೆರ್ಸಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಭಾರತೀಯ ಕ್ರಿಕೆಟ್ ತಂಡದ ಹೊಸ ಕಿಟ್ ಪ್ರಾಯೋಜಕ ಅಡಿಡಾಸ್ ಸಂಸ್ಥೆ ಹೊಸ ಜೆರ್ಸಿಗಳನ್ನು ವಿನ್ಯಾಸಗೊಳಿಸಿದ್ದು, ಗುರುವಾರ ವಿಶಿಷ್ಟ ವಿಡಿಯೋ ಮೂಲಕ ಬಿಡುಗಡೆ ಮಾಡಿತು. ಜೂನ್ 7 ರಿಂದ ಇಂಗ್ಲೆಂಡ್‌ನ ಓವಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಈ ಹೊಸ ಜೆರ್ಸಿಗಳನ್ನು ಧರಿಸಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದಾರೆ. ಹೊಸ ಜೆರ್ಸಿಯ ಭುಜದ ಮೇಲಿರುವ ಮೂರು ಸಾಲುಗಳು ಅಡಿಡಾಸ್‌ನ ಪ್ರಸಿದ್ಧ ಮೂರು-ಪಟ್ಟಿಗಳ ಲೋಗೋವನ್ನು ಪ್ರತಿನಿಧಿಸುತ್ತವೆ.

ಮೂರು ಫಾರ್ಮ್ಯಾಟ್​ಗಳಿಗೂ ವಿಭಿನ್ನ ಜರ್ಸಿಗಳು: ಅಡಿಡಾಸ್ ಸಂಸ್ಥೆಯು ಟೀಂ ಇಂಡಿಯಾದ ನ್ಯೂ ಜೆರ್ಸಿಯನ್ನು ಪರಿಚಯಿಸಿದ ತಕ್ಷಣ ಮತ್ತೊಂದು ದೊಡ್ಡ ಸಂಗತಿಯನ್ನೂ ರಿವೀಲ್ ಮಾಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಕ್ರಿಕೆಟ್‌ನ ಎಲ್ಲ ಮೂರು ಮಾದರಿಗಳಲ್ಲಿ ವಿಭಿನ್ನ ಜೆರ್ಸಿಗಳನ್ನು ಧರಿಸಿ ಆಡಲಿದೆ. ತಂಡವು ಮೊದಲು ಎರಡು ರೀತಿಯ ಜೆರ್ಸಿಗಳನ್ನು ಹೊಂದಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಬಿಳಿ ಜೆರ್ಸಿಗಳನ್ನು ಧರಿಸಲಾಗುತ್ತಿತ್ತು. ಅದೇ ವಿನ್ಯಾಸದ ನೀಲಿ ಜೆರ್ಸಿಗಳನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಧರಿಸಲಾಗುತ್ತಿತ್ತು. ಅಂದರೆ ODI ಮತ್ತು T20ಗಳಲ್ಲಿ ಧರಿಸಲಾಗುತ್ತಿತ್ತು. ಆದರೆ ಈ ಬಾರಿ ODI ಮತ್ತು T20 ಗಳಿಗೂ ವಿವಿಧ ರೀತಿಯ ಜೆರ್ಸಿಗಳನ್ನು ಸಿದ್ಧಪಡಿಸಲಾಗಿದೆ.

ODI ಮತ್ತು T20 ಜೆರ್ಸಿ ಹೀಗಿದೆ ನೋಡಿ: ODI ಮತ್ತು T 20 ಜೆರ್ಸಿಗಳ ಬಣ್ಣವು ನೀಲಿ ಬಣ್ಣದ್ದಾಗಿದೆ. ODI ಜರ್ಸಿಯು ತಿಳಿ ನೀಲಿ ಬಣ್ಣ ಹೊಂದಿದ್ದು, 2011 ರ ODI ವಿಶ್ವಕಪ್‌ನ ತಂಡದ ಜರ್ಸಿಯನ್ನು ನೆನಪಿಸುತ್ತದೆ. ಮತ್ತೊಂದೆಡೆ, ಟಿ 20 ಜೆರ್ಸಿಯು ಕಡು ನೀಲಿ ಬಣ್ಣದ್ದಾಗಿದ್ದು, ಪೂರ್ಣ ಕಾಲರ್ ಬದಲಿಗೆ ಫುಟ್ಬಾಲ್ ಜೆರ್ಸಿ ಶೈಲಿಯ ವಿನ್ಯಾಸ ನೀಡಲಾಗಿದೆ. ಈ ಜೆರ್ಸಿಯನ್ನು ಧರಿಸಲಿರುವ ಭಾರತ ತಂಡ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ 20 ಸರಣಿಯಲ್ಲಿ ಆಡಲಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಹೊಸ ಜೆರ್ಸಿ ಅನಾವರಣ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಯಿತು. ಅಡಿಡಾಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಬಿಡುಗಡೆಯ ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಡುಗಡೆಯ ವಿಡಿಯೋವನ್ನು ಹಂಚಿಕೊಳ್ಳುತ್ತಾ, ಟೀಂ ಇಂಡಿಯಾದ ಹೊಸ ಜೆರ್ಸಿಯನ್ನು ಪ್ರಸ್ತುತಪಡಿಸುವ ಐಕಾನಿಕ್ ಮೂವ್ಮೆಂಟ್, ಐಕಾನಿಕ್ ಸ್ಟೇಡಿಯಂ ಎಂಬ ಶೀರ್ಷಿಕೆ ಬರೆಯಲಾಗಿದೆ. ಸುಮಾರು 1 ಗಂಟೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಈ ವಿಡಿಯೋವನ್ನು ಲೈಕ್​ ಮಾಡಿದ್ದು, 34 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಇದನ್ನೂ ಓದಿ: ಬದ್ಧವೈರಿಗಳಾದ ಭಾರತ- ಪಾಕ್​ 'ವಿಶ್ವಕಪ್​ ಕಾದಾಟ'ಕ್ಕೆ ಲಖನೌ ಮೈದಾನ ಆತಿಥ್ಯ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.