ಯುಎಇ: ವಿಶ್ವ ಕ್ರಿಕೆಟ್ ದುನಿಯಾದಲ್ಲಿ ಪ್ರತಿದಿನ ಒಂದಿಲ್ಲೊಂದು ವಿಭಿನ್ನ, ವಿಚಿತ್ರ ದಾಖಲೆ ಮೂಡಿ ಬರುತ್ತಲೇ ಇರುತ್ತವೆ. ಇದೀಗ ನಂಬಲು ಸಾಧ್ಯವಿಲ್ಲದಂತಹ ಕಳಪೆ ರೆಕಾರ್ಡ್ವೊಂದು ಮೂಡಿ ಬಂದಿದೆ. ಐಸಿಸಿ ಅಂಡರ್-19 ಮಹಿಳೆಯರ ಟಿ-20 ವಿಶ್ವಕಪ್ನ ಅರ್ಹತಾ ಪಂದ್ಯದಲ್ಲಿ ನೇಪಾಳ ತಂಡ ಕೇವಲ 8ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಅತಿ ಕಡಿಮೆ ರನ್ಗಳಿಗೆ ಆಲೌಟ್ ಆಗಿರುವ ಮಹಿಳಾ ತಂಡವಾಗಿ ಹೊರಹೊಮ್ಮಿದೆ.
ಐಸಿಸಿ ಅಂಡರ್-19 ಟಿ20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ನೇಪಾಳ ಹಾಗೂ ಯುಎಇ ಮಹಿಳಾ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 8.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ. ಈ ಗುರಿ ಮುಟ್ಟಲು ಎದುರಾಳಿ ತಂಡ ಯುಎಇ ತೆಗೆದುಕೊಂಡಿದ್ದು ಮಾತ್ರ 1.1 ಓವರ್. ಶನಿವಾರ ಈ ಪಂದ್ಯ ನಡೆದಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ನೇಪಾಳ ಮಹಿಳಾ ಪಡೆ ಇಂತಹದೊಂದು ಕಳಪೆ ಸಾಧನೆಯನ್ನು ದಾಖಲಿಸಿದೆ.
-
🇳🇵| END OF INNINGS: Nepal 8 all out (8.1 overs)
— Malaysia Cricket (@MalaysiaCricket) June 4, 2022 " class="align-text-top noRightClick twitterSection" data="
🎳Nepal have been bowled out for a single digit score with only 5 batters getting off the mark.
🇦🇪Mahika Gaur with scarcely believable figures of 4-2-2-5 💥#AsiaQualifier #U19WC @icc
Scorecard: https://t.co/SMIMxklXzJ pic.twitter.com/qLWzuylaC9
">🇳🇵| END OF INNINGS: Nepal 8 all out (8.1 overs)
— Malaysia Cricket (@MalaysiaCricket) June 4, 2022
🎳Nepal have been bowled out for a single digit score with only 5 batters getting off the mark.
🇦🇪Mahika Gaur with scarcely believable figures of 4-2-2-5 💥#AsiaQualifier #U19WC @icc
Scorecard: https://t.co/SMIMxklXzJ pic.twitter.com/qLWzuylaC9🇳🇵| END OF INNINGS: Nepal 8 all out (8.1 overs)
— Malaysia Cricket (@MalaysiaCricket) June 4, 2022
🎳Nepal have been bowled out for a single digit score with only 5 batters getting off the mark.
🇦🇪Mahika Gaur with scarcely believable figures of 4-2-2-5 💥#AsiaQualifier #U19WC @icc
Scorecard: https://t.co/SMIMxklXzJ pic.twitter.com/qLWzuylaC9
ಇದನ್ನೂ ಓದಿ: 'ಸ್ಪೀಡ್ ಸೆ ಕುಚ್ ನಹೀ ಹೋತಾ'.. ಉಮ್ರಾನ್ ಮಲಿಕ್ ಬೌಲಿಂಗ್ ಬಗ್ಗೆ ಪಾಕ್ ವೇಗಿ ಹೀಗೆ ಹೇಳಿದ್ಯಾಕೆ?
ಅಂಡರ್ 19 ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ನೇಪಾಳ, ಯುಎಇ, ಥಾಯ್ಲೆಂಡ್, ಭೂತಾನ್ ಮತ್ತು ಕತಾರ್ ಭಾಗಿಯಾಗಿವೆ. ಇಲ್ಲಿ ಗೆಲುವು ಸಾಧಿಸುವ ತಂಡ ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಟೂರ್ನಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದೆ. ನೇಪಾಳ ತಂಡದ ಪರ ಆರು ಬ್ಯಾಟರ್ಗಳು ಯಾವುದೇ ಸ್ಕೋರ್ ಗಳಿಕೆ ಮಾಡದೇ ಔಟಾದರೆ, ಸ್ನೇಹ ಮಹಾರಾ ಮೂರು ರನ್ ಹಾಗೂ ಮನೀಶಾ ರಾಣಾ ಎರಡು ರನ್ಗಳಿಸಿದರು. ಯುಎಇ ಪರ ಬೌಲಿಂಗ್ ಮಾಡಿದ ಆಫ್ ಸ್ಪಿನ್ನರ್ ಮಹಿಕಾ ಗೌರ್ 5ವಿಕೆಟ್ ಪಡೆದು ಮಿಂಚಿದರು.