ಹೈದರಾಬಾದ್: ಡಿಸೆಂಬರ್ 30, 2022 ರಂದು ಮುಂಜಾನೆ 5:30 ರ ಸುಮಾರಿಗೆ ರಿಷಬ್ ಪಂತ್ ಅವರ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಗಂಭೀರ ಗಾಯಕ್ಕೆ ತುತ್ತಾದರು. ದೆಹಲಿಯಿಂದ ತಮ್ಮ ಹುಟ್ಟೂರಾದ ಉತ್ತರಾಖಂಡ್‌ನ ರೂರ್ಕಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಸ್ಥಳದಲ್ಲೇ ಕಾರು ಸಂಪೂರ್ಣ ಬೆಂಕಿಗೆ ಆಹುತಿ ಅದರೆ, ಪಂತ್ ಪವಾಡದಂತೆ ಬದುಕುಳಿದಿದ್ದರು. ಈ ಘಟನೆ ಆಗಿ 1 ವರ್ಷ ಕಳೆದಿದ್ದು, ಗಾಯದಿಂದ ಚೇತರಿಸಿಕೊಂಡಿರುವ ರಿಷಬ್ ತಂಡಕ್ಕೆ ಮರಳುವಿಯ ನಿರೀಕ್ಷೆ ಎಲ್ಲರಲ್ಲೂ ಇದೆ.
ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ 2023ರಲ್ಲಿ ಕ್ರಿಕೆಟ್ನಿಂದ ವಂಚಿತರಾದ ನಂತರ 2024ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಯಶಸ್ವಿಯಾಗಿ ಮರಳುತ್ತಾರೆ ಎಂದು ಹಾರೈಕೆ ವ್ಯಕ್ತಪಡಿಸಿದ್ದಾರೆ.
2024ರ 17ನೇ ಆವೃತ್ತಿಯ ಐಪಿಎಲ್ನಲ್ಲಿ ರಿಷಬ್ ಪಂತ್ ಆಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಪಂತ್ ದುಬೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದರು. ಆದರೆ ಈ ವರ್ಷ ಕ್ರಿಕೆಟ್‌ಗೆ ಮರಳುವ ನಿರೀಕ್ಷೆ ಅಂತೂ ಇದೆ. ಅವರು ಫಿಟ್ನೆಸ್ ಮತ್ತು ವರ್ಕೌಟ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ ಇನ್ನೂ ಕ್ರಿಕೆಟ್ ಬ್ಯಾಟ್ ಹಿಡಿದು ಅಭ್ಯಾಸ ಆರಂಭಿಸಿಲ್ಲ.
-
A big 2024 for the "box office" Rishabh Pant? Nasser Hussain hopes so 🏏
— ICC (@ICC) December 31, 2023 " class="align-text-top noRightClick twitterSection" data="
More from the Coke Believing is Magic series 👇https://t.co/ENlG96fOV1
">A big 2024 for the "box office" Rishabh Pant? Nasser Hussain hopes so 🏏
— ICC (@ICC) December 31, 2023
More from the Coke Believing is Magic series 👇https://t.co/ENlG96fOV1A big 2024 for the "box office" Rishabh Pant? Nasser Hussain hopes so 🏏
— ICC (@ICC) December 31, 2023
More from the Coke Believing is Magic series 👇https://t.co/ENlG96fOV1
ರಿಷಬ್ ಬಾಕ್ಸ್ ಆಫೀಸ್ ಕ್ರಿಕೆಟಿಗ: "ಅದೊಂದು ಗಂಭೀರ ಅಪಘಾತವಾಗಿತ್ತು. ಇಡೀ ಜಗತ್ತು ತನ್ನ ಉಸಿರನ್ನು ಹಿಡಿದಿಟ್ಟುಕೊಂಡಿತು. ನಂತರ ನಿಧಾನವಾಗಿ ಚೇತರಿಸಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ, ಫೋನ್‌ನಲ್ಲಿ ಮತ್ತು ಆರಂಭಿಕ ಮೊದಲ ನಡಿಗೆಯ ಹಂತಗಳನ್ನು ಅನುಸರಿಸಿ ನಂತರ ಜಿಮ್‌ನಲ್ಲಿನ ದೃಶ್ಯಗಳು ಮತ್ತು ನಂತರ ಅವರು ಆಡುವ ದೃಶ್ಯ ನಿರಾಳತೆ ತಂದವು. ರಿಕಿ ಪಾಂಟಿಂಗ್ ಜೊತೆಗಿನ ಫೋಟೋಗಳನ್ನು ನೋಡಿದ್ದೇನೆ. ನಾನು ಬೇಸಿಗೆಯಲ್ಲಿ ಆಶಸ್‌ನಲ್ಲಿ ರಿಕಿಯೊಂದಿಗೆ ಪ್ರಯಾಣಿಸಿದೆ. ಆಗ ರಿಷಬ್ ಚೇತರಿಕೆ ಬಗ್ಗೆ ಮಾಹಿತಿ ಸಿಕ್ಕಿತ್ತು. ರಿಷಬ್ ಬಾಕ್ಸ್ ಆಫೀಸ್ ಕ್ರಿಕೆಟಿಗರಾಗಿದ್ದಾರೆ" ಎಂದು ಹುಸೇನ್ ಹೇಳಿದ್ದಾರೆ.
ಪಂತ್ ಸ್ಥಾನ ರಾಹುಲ್ ಫೂಲ್ ಫಿಲ್ ಮಾಡಿದ್ದಾರೆ: ಪಂತ್ ಅನುಪಸ್ಥಿತಿಯಲ್ಲಿ ಆ ಸ್ಥಾನವನ್ನು ಕೆ ಎಲ್ ರಾಹುಲ್ ಯಶಸ್ವಿಯಾಗಿ ಭರ್ತಿ ಮಾಡಿದ್ದಾರೆ ಎಂದು ಹುಸೇನ್ ಹೇಳುತ್ತಾರೆ. ರಾಹುಲ್ ಭಾರತದ ಪ್ರಾಥಮಿಕ ವಿಕೆಟ್ ಕೀಪರ್-ಬ್ಯಾಟರ್ ಕಾರ್ಯನಿರ್ವಹಿಸಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 75.33 ಸರಾಸರಿಯಲ್ಲಿ 452 ರನ್ ಗಳಿಸುವ ಮೂಲಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ನ ಕಠಿಣ ಬ್ಯಾಟಿಂಗ್ ಪರಿಸ್ಥಿತಿಯಲ್ಲಿ 101 ರನ್ ಗಳಿಸುವ ಮೂಲಕ ರಾಹುಲ್ ಟೆಸ್ಟ್ ಕ್ರಿಕೆಟ್ನಲ್ಲೂ ಕಮ್ಬ್ಯಾಕ್ ಮಾಡಿದ್ದಾರೆ.
"ಪಂತ್ ಇಲ್ಲದೆ ಭಾರತ ಕೆ ಎಲ್ ರಾಹುಲ್ನಿಂದ ಉತ್ತಮ ಪ್ರದರ್ಶನ ನೀಡಿದೆ ಮತ್ತು ಎಲ್ಲಾ ಸ್ವರೂಪಗಳಲ್ಲಿ ರಾಹುಲ್ ಅದ್ಭುತವಾಗಿದ್ದಾರೆ. ಅವರಿಬ್ಬರನ್ನು ಹೊಂದಲು ಭಾರತ ಅದೃಷ್ಟ ಮಾಡಿದೆ. ಆದರೆ ರಿಷಬ್ ಪಂತ್ ಗಾಯದ ಮೊದಲು ತಂಡ ಹೇಗಿತ್ತೋ, ನಂತರವೂ ಹಾಗೇ ಇದೆ. ಪಂತ್ ಮರಳುವಿಕೆಗೆ ಇನ್ನಷ್ಟೂ ಬಲ ನೀಡಲಿದೆ" ಎಂದಿದ್ದಾರೆ.
ಗಿಲ್ ಅದ್ಭುತ ಟ್ಯಾಲೆಂಟ್: ಗಿಲ್ ಭಾರತದ ಭರವಸೆಯ ಬ್ಯಾಟರ್ ಎಂದಿದ್ದಾರೆ ನಾಸಿರ್, ಈ ವರ್ಷ ಮುಕ್ಕಾಲು ಪಾಲು ಗಿಲ್ ಯಶಸ್ಸು ಕಂಡಿದ್ದಾರೆ. ಕೊನೆಯಲ್ಲಿ ಸ್ವಲ್ಪ ಎಡವಿದ್ದಾರೆ ಅಷ್ಟೇ. ಅವರಿಗೆ ರೋಹಿತ್ ಶರ್ಮಾರಿಂದ ಕಲಿಯಲು ಬಹಳಷ್ಟು ಸಿಕ್ಕಿದೆ. ಕೊನೆಯಲ್ಲಿ ಅನಾರೋಗ್ಯದ ಕಾರಣ ಕುಸಿತ ಕಂಡಿರಬೇಕು. ಆದರೆ ಗಿಲ್ ಅತ್ಯುತ್ತಮ ಪ್ರತಿಭೆ, ಅವರು ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಮುಂದಿನ ಭರವಸೆಯ ಆಟಗಾರ. 2024ರಲ್ಲಿ ಅವರಿಂದ ಇನ್ನಷ್ಟೂ ಉತ್ತಮ ಇನ್ನಿಂಗ್ಸ್ಗಳು ಬರಲಿದೆ" ಎಂದು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ: ಶುಭಮನ್ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ತುಂಬಾ ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ: ಗವಾಸ್ಕರ್