ETV Bharat / sports

ಪಾಕ್​ ಯುವ ವೇಗಿ ನಸೀಮ್​ಗೆ ವೈರಲ್​ ಫೀವರ್​.. ಇಂಗ್ಲೆಂಡ್​ ಸರಣಿಯಿಂದ ಔಟ್​ ಸಾಧ್ಯತೆ - ಈಟಿವಿ ಭಾರತ ಕನ್ನಡ ನ್ಯೂಸ್​

ಪಾಕಿಸ್ತಾನದ ಯುವ ವೇಗಿ ನಸೀಮ್​ ಶಾಗೆ ವೈರಲ್​ ಫೀವರ್​ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಸರಣಿಯಿಂದಲೂ ಹೊರಬೀಳುವ ಸಾಧ್ಯತೆ ಇದೆ.

naseem-shah-rushed
ಪಾಕ್​ ಯುವ ವೇಗಿ ನಸೀಮ್​ಗೆ ವೈರಲ್​ ಫೀವರ್
author img

By

Published : Sep 28, 2022, 5:25 PM IST

ಕರಾಚಿ: ಪಾಕಿಸ್ತಾನ ತಂಡದಲ್ಲಿ ಮಿಂಚು ಹರಿಸಿರುವ 21ವರ್ಷದ ವೇಗಿ ನಸೀಮ್​ ಶಾಗೆ ವೈರಲ್​ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಶಾ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಿಂದ ಹೊರಬೀಳುವ ಸಾಧ್ಯತೆ ಇದೆ.

7 ಪಂದ್ಯಗಳ ಟಿ20 ಸರಣಿಯಲ್ಲಿ ಸಮಬಲದ ಪೈಪೋಟಿ ನೀಡಿರುವ ಇಂಗ್ಲೆಂಡ್​- ಪಾಕಿಸ್ತಾನ ತಂಡಗಳು ಸರಣಿಯನ್ನು 2-2 ರಲ್ಲಿ ಸಮಬಲ ಸಾಧಿಸಿವೆ. ಇಂದು ರಾತ್ರಿ 5ನೇ ಪಂದ್ಯ ನಡೆಯಲಿದ್ದು, ಇದಕ್ಕೂ ಮೊದಲು ಪಾಕಿಸ್ತಾನ ತಂಡಕ್ಕೆ ಶಾಕ್​ ಉಂಟಾಗಿದೆ. ವೈರಲ್​ ಫೀವರ್​ಗೆ ತುತ್ತಾದ ನಸೀಮ್​ ಶಾ ಇಂದಿನ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

ವೈರಲ್​ ಸೋಂಕಿಗೀಡಾಗಿರುವ ಯುವ ವೇಗಿ ನಸೀಮ್​ನನ್ನು ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಉಳಿದ ಪಂದ್ಯಗಳಲ್ಲಿ ನಸೀಮ್​ ಭಾಗವಹಿಸುವ ಸಾಧ್ಯತೆ ಕಡಿಮೆ ಇದೆ ಎಂದು ಪಾಕಿಸ್ತಾನ ಕ್ರಿಕೆಟ್​​ ಮಂಡಳಿ ಹೇಳಿದೆ.

ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರುವ ನಸೀಮ್​ ಶಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಮೊಣಕಾಲಿನ ಗಾಯದಿಂದಾಗಿ ಏಷ್ಯಾಕಪ್​ನಿಂದ ದೂರ ಉಳಿದಿದ್ದ ಪಾಕ್​ ಪ್ರಮುಖ ವೇಗಿ ಶಾಹೀನ್ ಅಫ್ರಿದಿ ಅನುಪಸ್ಥಿತಿಯಲ್ಲಿ 21 ವರ್ಷದ ನಸೀಮ್​ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡರು. ಪಾಕಿಸ್ತಾನದ ಟಿ-20 ವಿಶ್ವಕಪ್ ತಂಡದಲ್ಲಿರುವ ಶಾಹೀನ್ ಮತ್ತು ನಸೀಮ್ ಕಮಾಲ್​ ಮಾಡಲಿದ್ದಾರಾ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ಪಾಕಿಸ್ತಾನದಲ್ಲಿ ಭಾರೀ ಪ್ರವಾಹ ಉಂಟಾದ ಬಳಿಕ ಸೊಳ್ಳೆಗಳ ತೀವ್ರತೆ ವ್ಯಾಪಕವಾಗಿದೆ. ಪ್ರತಿದಿನ ಸಾವಿರಾರು ಡೆಂಘೀ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಓದಿ: ಐಸಿಸಿ ಬ್ಯಾಟಿಂಗ್​ ಶ್ರೇಯಾಂಕ: 2ನೇ ಸ್ಥಾನಕ್ಕೇರಿ ಸೂರ್ಯಕುಮಾರ್​ ಯಾದವ್​ ಜೀವನಶ್ರೇಷ್ಠ ಸಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.