ಮುಂಬೈ (ಮಹಾರಾಷ್ಟ್ರ): ಕ್ಯಾಚಿ ಟೈಟಲ್ನೊಂದಿಗೆ ದೊಡ್ಡ ಪರದೆ ಮೇಲೆ ಮೂಡಲು ಬರುತ್ತಿರುವ ಶ್ರೀಲಂಕಾದ ಖ್ಯಾತ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ '800' ಚಿತ್ರದ ಟ್ರೇಲರ್ ಮಂಗಳವಾರ ಬಿಡುಗಡೆಗೊಂಡಿತು. ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಮಾಜಿ ಆಲ್ ರೌಂಡರ್ ಸನತ್ ಜಯಸೂರ್ಯ ಮುಂಬೈನಲ್ಲಿ ಅಧಿಕೃತ ಟ್ರೇಲರ್ ಅನ್ನು ಅನಾವರಣಗೊಳಿಸಿದರು.
-
SACHIN TENDULKAR UNVEILS TRAILER OF MUTHIAH MURALIDARAN BIOPIC ‘800’... 6 OCT RELEASE… #SachinTendulkar unveiled the trailer of the #MuthiahMuralidaran biopic, titled 800 [#800TheMovie]… #SanathJayasuriya was also present at the event.
— taran adarsh (@taran_adarsh) September 5, 2023 " class="align-text-top noRightClick twitterSection" data="
Trailer 🔗: https://t.co/e21A4LjQH2… pic.twitter.com/0zDMU3N3UH
">SACHIN TENDULKAR UNVEILS TRAILER OF MUTHIAH MURALIDARAN BIOPIC ‘800’... 6 OCT RELEASE… #SachinTendulkar unveiled the trailer of the #MuthiahMuralidaran biopic, titled 800 [#800TheMovie]… #SanathJayasuriya was also present at the event.
— taran adarsh (@taran_adarsh) September 5, 2023
Trailer 🔗: https://t.co/e21A4LjQH2… pic.twitter.com/0zDMU3N3UHSACHIN TENDULKAR UNVEILS TRAILER OF MUTHIAH MURALIDARAN BIOPIC ‘800’... 6 OCT RELEASE… #SachinTendulkar unveiled the trailer of the #MuthiahMuralidaran biopic, titled 800 [#800TheMovie]… #SanathJayasuriya was also present at the event.
— taran adarsh (@taran_adarsh) September 5, 2023
Trailer 🔗: https://t.co/e21A4LjQH2… pic.twitter.com/0zDMU3N3UH
ಆಸ್ಕರ್ ಪ್ರಶಸ್ತಿ ಪಡೆದ 'ಸ್ಲಮ್‌ಡಾಗ್ ಮಿಲೇನಿಯರ್' ಚಿತ್ರದ ಖ್ಯಾತ ನಟ ಮಧುರ್ ಮಿತ್ತಲ್ ಶ್ರೀಲಂಕಾದ ದಂತಕಥೆ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಎಂ ಎಸ್ ಶ್ರೀಪತಿ ಬರೆದು ನಿರ್ದೇಶಿಸಿರುವ ಈ ಚಿತ್ರ ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಅವರು ಈ ಬಗ್ಗೆ ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಯೋಪಿಕ್ '800' ನ ಟ್ರೇಲರ್ ಅನ್ನು ಇಂದು ಅದ್ಧೂರಿಯಾಗಿ ಅನಾವರಣಗೊಳಿಸಿದರು. ಈವೆಂಟ್‌ನಲ್ಲಿ ಲಂಕಾದ ಮಾಜಿ ಆಲ್ ರೌಂಡರ್ ಸನತ್ ಜಯಸೂರ್ಯ ಕೂಡ ಉಪಸ್ಥಿತರಿದ್ದರು. 'ಸ್ಲಮ್‌ಡಾಗ್ ಮಿಲೇನಿಯರ್' ಖ್ಯಾತಿಯ ಮಧುರ್ ಮಿತ್ತಲ್ ಅವರು ಮುರಳೀಧರನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಮೂವಿ ಟ್ರೈನ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿರುವ ಈ ಚಿತ್ರವು 6 ಅಕ್ಟೋಬರ್ 2023 ರಂದು ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ತರಣ್ ಆದರ್ಶ್ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="">
1970ರ ದಶಕದಲ್ಲಿ ಶ್ರೀಲಂಕಾದಲ್ಲಿ ನಡೆದ ಘಟನೆಗಳ ಫ್ಲ್ಯಾಷ್‌ಬ್ಯಾಕ್‌ನೊಂದಿಗೆ ಪ್ರಾರಂಭವಾಗುವ ಟ್ರೇಲರ್, ಮುತ್ತಯ್ಯ ಮುರಳೀಧರನ್ ಅವರ ಹಲವು ಕುತೂಹಲಕರ ಘಟನೆಗಳನ್ನು ಬಿಚ್ಚಿಟ್ಟಿದೆ. ಮುರಳೀಧರನ್ ಅವರ ಬಾಲ್ಯ, ಕ್ರಿಕೆಟ್ಗಾಗಿ ಅವರು ಮಾಡಿದ ತ್ಯಾಗ, ಅನುಭವಿಸಿದ ಅವಮಾನ, ಹೋರಾಟದ ಹಾದಿಯನ್ನು ಕೇಂದ್ರೀಕರಿಸಿದೆ. ತನ್ನನ್ನು ತಾನು "ಕ್ರಿಕೆಟಿಗ" ಎಂದು ಹೆಮ್ಮೆಯಿಂದ ಕರೆದುಕೊಳ್ಳುವ ಮೂಲಕ ಈ ಟ್ರೇಲರ್ ಕೊನೆಗೊಳ್ಳುತ್ತದೆ. ಮೂರು ನಿಮಿಷಗಳ ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದ್ದು, ಕ್ರಿಕೆಟ್ ಅಭಿರುಚಿ ಉಳ್ಳವರು ಅಷ್ಟೇ ಅಲ್ಲದೇ ಉಳಿದ ಅಭಿಮಾನಿಗಳ ಮನಕ್ಕೂ ತಲುಪುವಂತಿದೆ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಮುತ್ತಯ್ಯ ಮುರಳೀಧರನ್, ''ಸಚಿನ್ ತೆಂಡೂಲ್ಕರ್ ಮತ್ತು ಸನತ್ ಜಯಸೂರ್ಯ ಆಗಮಿಸಿ '800' ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದರಿಂದ ನನಗೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ. ಕಳೆದ 5 ವರ್ಷಗಳಿಂದ ಈ ಬಗ್ಗೆ ತಯಾರಿ ನಡೆಸಿಕೊಂಡು ಬರಲಾಗುತ್ತಿತ್ತು. ಆ ಕನಸು ಇದೀಗ ನಿಜವಾಗಿದೆ'' ಎಂದು ತಮ್ಮ ಅನುಭವ ಹಂಚಿಕೊಂಡರು.
ICC ಕ್ರಿಕೆಟ್ ಹಾಲ್ ಆಫ್ ಫೇಮ್‌ನ ಸದಸ್ಯಯಾಗಿರುವ ಮುರಳೀಧರನ್ ಅವರು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್ನಲ್ಲಿ 800 ವಿಕೆಟ್ಗಳನ್ನು ಪಡೆದ ಏಕೈಕ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರಿಂದಲೇ ಈ ಸಿನಿಮಾಗೆ ‘800’ ಎಂದು ಶೀರ್ಷಿಕೆ ಇಡಲಾಗಿದೆ. ಮುರಳೀಧರನ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 13 ಬಾರಿ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದು ಇಲ್ಲಿ ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ಪ್ರೀತ್ಸಿದ್ ಹುಡ್ಗೀನೇ ಕಳ್ಕೊಂಡ್ರೆ ಬದ್ಕೋದ್ ಹೇಗೆ? ಅಂತಿದ್ದಾರೆ ಗೋಲ್ಡನ್ ಸ್ಟಾರ್: 'ಬಾನದಾರಿಯಲ್ಲಿ' ಟ್ರೇಲರ್ ರಿಲೀಸ್