ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಸ್ಪರ್ಧೆಯಿಂದ ಬಾಂಗ್ಲಾದೇಶ ಈಗಾಗಲೇ ಎರಡು ಸೋಲು ಕಂಡು ಹೊರಬಿದ್ದಿದೆ. ಆದರೆ, 15 ರಂದು ಏಷ್ಯಾಕಪ್ನ ಸೂಪರ್ ಫೋರ್ ಹಂತದಲ್ಲಿ ಭಾರತದ ವಿರುದ್ಧ ಔಪಚಾರಿಕ ಪಂದ್ಯವನ್ನಾದರೂ ಆಡಬೇಕಿದೆ. ಈ ಪಂದ್ಯಕ್ಕೆ ಅನುಭವಿ ಆಟಗಾರ ವಿಕೆಟ್ ಕೀಪಿಂಗ್ ಬ್ಯಾಟರ್ ಮುಶ್ಫಿಕರ್ ರಹೀಮ್ ತಂಡದಲ್ಲಿರುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಿಳಿಸಿದೆ.
-
In the absence of Mushfiqur Rahim, Anamul Haque Bijoy may get a chance in the playing XI in Bangladesh's last match 🇧🇩#AsiaCup2023 #INDvBAN #MushfiqurRahim #Bangladesh #CricketTwitter pic.twitter.com/a1aLk5CXQJ
— InsideSport (@InsideSportIND) September 13, 2023 " class="align-text-top noRightClick twitterSection" data="
">In the absence of Mushfiqur Rahim, Anamul Haque Bijoy may get a chance in the playing XI in Bangladesh's last match 🇧🇩#AsiaCup2023 #INDvBAN #MushfiqurRahim #Bangladesh #CricketTwitter pic.twitter.com/a1aLk5CXQJ
— InsideSport (@InsideSportIND) September 13, 2023In the absence of Mushfiqur Rahim, Anamul Haque Bijoy may get a chance in the playing XI in Bangladesh's last match 🇧🇩#AsiaCup2023 #INDvBAN #MushfiqurRahim #Bangladesh #CricketTwitter pic.twitter.com/a1aLk5CXQJ
— InsideSport (@InsideSportIND) September 13, 2023
ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಸೂಪರ್ ಫೋರ್ಗೆ ಪ್ರವೇಶಿಸಿದ ಬಾಂಗ್ಲಾವನ್ನು ಪಾಕಿಸ್ತಾನ ತಂಡ ತವರು ಮೈದಾನದಲ್ಲಿ 193 ರನ್ಗೆ ಕಟ್ಟಿಹಾಕಿದರು. ಪಾಕಿಸ್ತಾನದ ವೇಗದ ದಾಳಿಗೆ ಬಾಂಗ್ಲಾ ಬ್ಯಾಟರ್ಗಳು ತತ್ತರಿಸಿದ್ದರು. ಶ್ರೀಲಂಕಾ ನೀಡಿದ್ದ 257 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ 236ಕ್ಕೆ ಸರ್ವಪತನ ಕಂಡು 21 ರನ್ಗಳ ಸೋಲು ಕಂಡಿತ್ತು. ಈ ಎರಡು ಸೋಲಿನಿಂದಾಗಿ ಏಷ್ಯಾಕಪ್ ಫೈನಲ್ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಬಾಂಗ್ಲಾದೇಶ ಕಳೆದುಕೊಂಡಿದೆ.
ಪಾಕಿಸ್ತಾನದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ 357 ರನ್ಗಳ ಗುರಿ ನೀಡಿದ ಭಾರತ, ಪಾಕ್ ಅನ್ನು 128ಕ್ಕೆ ಆಲ್ಔಟ್ ಮಾಡಿ ಪಂದ್ಯವನ್ನು ಗೆದ್ದಿತು. ನಿನ್ನೆ (ಮಂಗಳವಾರ) ಶ್ರೀಲಂಕಾ ವಿರುದ್ಧ 213 ರನ್ ಸಾಧಾರಣ ಗುರಿಯನ್ನು ನೀಡಿದರೂ, ಬಲಿಷ್ಠ ಬೌಲಿಂಗ್ ಪ್ರದರ್ಶಿಸಿ ಲಂಕಾವನ್ನು 172ಕ್ಕೆ ಆಲ್ಔಟ್ ಮಾಡಿ 41 ರನ್ಗಳ ಗೆಲುವು ಸಾಧಿಸಿತು. ಇದರಿಂದ ಭಾರತ ನೇರ ಫೈನಲ್ಗೆ ಪ್ರವೇಶ ಪಡೆದಿದೆ. ನಾಳೆ ಲಂಕಾ - ಪಾಕ್ ಪಂದ್ಯದ ಫಲಿತಾಂಶದಿಂದ ಭಾರತಕ್ಕೆ ಫೈನಲ್ ಎದುರಾಳಿ ಯಾರು ಎಂದು ತಿಳಿಯಲಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮುಶ್ಫಿಕರ್ ರಹೀಮ್ ಅವರ "ರಜಾ ವಿಸ್ತರಣೆ"ಯನ್ನು ಮಂಜೂರು ಮಾಡಿರುವುದಾಗಿ ಪ್ರಕಟಿಸಿದೆ."ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮುಶ್ಫಿಕರ್ ರಹೀಮ್ ಅವರು ಜನಿಸಿದ ಎರಡನೇ ಮಗು ಮತ್ತು ಕುಟುಂಬದೊಂದಿಗೆ ಇರಲು ಮಂಡಳಿಯು ರಜೆಯ ವಿಸ್ತರಣೆಯನ್ನು ನೀಡಿರುವುದರಿಂದ ಶುಕ್ರವಾರದ ಭಾರತ ವಿರುದ್ಧದ ಸೂಪರ್ ಫೋರ್ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ" ಎಂದು ತಿಳಿಸಿದೆ.
ರಹೀಮ್ ಅವರ ಅನುಪಸ್ಥಿತಿಯ ಕುರಿತು ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ಅಧ್ಯಕ್ಷ ಮೊಹಮ್ಮದ್ ಜಲಾಲ್ ಯೂನಸ್ ಮಾಹಿತಿ ನೀಡಿದ್ದು,"ತಮ್ಮ ಹೆಂಡತಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ, ಈ ಸಮಯದಲ್ಲಿ ಅವರ ಪಕ್ಕದಲ್ಲಿ ಮತ್ತು ಮಕ್ಕಳೊಂದಿಗೆ ಇರಬೇಕೆಂದು ಮುಶ್ಫಿಕರ್ ನಮಗೆ ತಿಳಿಸಿದ್ದಾರೆ. ನಾವು ಅವರ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಹೀಗಾಗಿ ರಜೆ ವಿಸ್ತರಣೆ ಮಾಡಿದ್ದೇವೆ" ಎಂದಿದ್ದಾರೆ. ತನ್ನ ಎರಡನೇ ಮಗುವಿನ ಜನನವನ್ನು ವೀಕ್ಷಿಸಲು ಬಾಂಗ್ಲಾದೇಶಕ್ಕೆ ಹಿಂದಿರುಗಿದ ಮುಶ್ಫಿಕರ್, ಭಾರತ ಪಂದ್ಯಕ್ಕಾಗಿ ಕೊಲಂಬೊದಲ್ಲಿ ತಂಡವನ್ನು ಮತ್ತೆ ಸೇರಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಪಾಕ್ನ ಇಬ್ಬರು ಸ್ಟಾರ್ ಬೌಲರ್ಗಳಿಗೆ ಗಾಯ.. ಏಷ್ಯಾಕಪ್ನಿಂದಲೇ ಹೊರಬಿದ್ದ ನಸೀಮ್ ಶಾ