ಮುಂಬೈ: ವುಮೆನ್ಸ್ ಪ್ರೀಮಿಯರ್ ಲೀಗ್ನ ಚೊಚ್ಚಲ ಲೀಗ್ನ ಫೈನಲ್ಗೆ ನೇರ ಪ್ರವೇಶ ಪಡೆಯಲು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಪಡೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುತ್ತಿದೆ. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ತೆಗೆದುಕೊಂಡಿದೆ. ಮುಂಬೈ ಇಂಡಿಯನ್ಸ್ನಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಧಾರಾ ಗುಜ್ಜಾರ್ ಬದಲಾಗಿ ಪೂಜಾ ವಸ್ತ್ರಾಕರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.
ಮುಂಬೈ ಇಂಡಿಯನ್ಸ್ ಆಡುವ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಡೆಲ್ಲಿ ಕ್ಯಾಪಿಟಲ್ಸ್ ಆಡುವ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೋನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪೂನಂ ಯಾದವ್
-
🚨 Toss Update 🚨@DelhiCapitals win the toss and elect to field first against @mipaltan.
— Women's Premier League (WPL) (@wplt20) March 20, 2023 " class="align-text-top noRightClick twitterSection" data="
Follow the match ▶️ https://t.co/Gcv5Cq4PYK#TATAWPL | #MIvDC pic.twitter.com/IeUc1vHcoO
">🚨 Toss Update 🚨@DelhiCapitals win the toss and elect to field first against @mipaltan.
— Women's Premier League (WPL) (@wplt20) March 20, 2023
Follow the match ▶️ https://t.co/Gcv5Cq4PYK#TATAWPL | #MIvDC pic.twitter.com/IeUc1vHcoO🚨 Toss Update 🚨@DelhiCapitals win the toss and elect to field first against @mipaltan.
— Women's Premier League (WPL) (@wplt20) March 20, 2023
Follow the match ▶️ https://t.co/Gcv5Cq4PYK#TATAWPL | #MIvDC pic.twitter.com/IeUc1vHcoO
ಟಾಸ್ ಗೆದ್ದ ನಂತರ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್,"ನಾವು ಮೊದಲು ಬೌಲ್ ಮಾಡುತ್ತೇವೆ. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ, ಅದೇ ತಂಡದಲ್ಲಿ ಮುಂದುವರೆಯುತ್ತಿದ್ದೇವೆ. ಟಾಸ್ ನಿರ್ಣಯಕ್ಕೆ ಕಾರಣ ಇಲ್ಲ. ತಂಡದಲ್ಲಿ ಸ್ಥಿರ ಪ್ರದರ್ಶನ ಇದ್ದು ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ" ಎಂದಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ಮಾತನಾಡಿ,"ಟಾಸ್ ನಮ್ಮ ನಿಯಂತ್ರಣದಲ್ಲಿಲ್ಲ, ನಾವು ಯಾವುದನ್ನಾದರೂ ಸ್ವೀಕರಿಸಬೇಕು. ನಾವು ಅತ್ಯಂತ ಸಮತೋಲಿತ ತಂಡವಾಗಿದೆ, ಆದ್ದರಿಂದ ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಯಾವುದೇ ಅವಕಾಶ ಸಿಕ್ಕರು ಸಮರ್ಥವಾಗಿ ಬಳಸಿ ಕೊಳ್ಳುತ್ತೇವೆ. ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯಕಂಡಿತ್ತು, ಇಲ್ಲಿ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಧಾರಾ ಗುಜ್ಜರ್ ಬದಲಿಗೆ ಪೂಜಾ ವಸ್ತ್ರಾಕರ್ ಕಣಕ್ಕಿಳಿಯಲಿದ್ದಾರೆ" ಎಂದರು.
ಇದನ್ನೂ ಓದಿ: ಮೂರು ವಿಕೆಟ್ಗಳ ರೋಚಕ ಜಯ: ಪ್ಲೇ-ಆಫ್ ಪ್ರವೇಶಿಸಿದ ಯುಪಿ ವಾರಿಯರ್ಸ್
ನೇರ ಫೈನಲ್ ಪ್ರವೇಶಕ್ಕೆ ಮುಂಬೈ ಪಣ: ಲೀಗ್ ಪಂದ್ಯದಲ್ಲಿ ಸತತ 5 ಪಂದ್ಯಗಳನ್ನು ಗೆದ್ದು 10 ಅಂಕದಿಂದ ಪ್ಲೇ-ಆಫ್ಗೆ ಪ್ರವೇಶ ಪಡೆದಿದ್ದ ಮುಂಬೈ ಕಳೆದ ಪಂದ್ಯದಲ್ಲಿ ಸೋತು ನೇರ ಫೈನಲ್ ಪ್ರವೇಶಿಸುವ ಅವಕಾಶದಿಂದ ವಂಚಿತವಾಯಿತು. ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ್ನು ಸೋಲಿಸಿದರೆ ಎಂಐ ನೇರ ಫೈನಲ್ ಫೈಟ್ ಎದುರಿಸಲಿದೆ.
ಪ್ಲೇ-ಆಫ್ ಪಟ್ಟಿ: ಸದ್ಯ 6 ಪಂದ್ಯದಲ್ಲಿ 5ನ್ನು ಗೆದ್ದು 10 ಅಂಕದಿಂದ ಮುಂಬೈ ಟಾಪ್ನಲ್ಲಿದ್ದು, ಪ್ಲೇ-ಆಫ್ಗೆ ಮೊದಲ ಪ್ರವೇಶ ಪಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ತಂಡವಾಗಿ ಪ್ಲೇ-ಆಫ್ ಅವಕಾಶ ಪಡೆಯಿತು. ಇಂದು ಗುಜರಾತ್ ಜೈಂಟ್ಸ್ನ್ನು ಸೋಲಿಸಿ ಯುಪಿ ವಾರಿಯರ್ಸ್ ಕ್ವಾಲಿಫೈ ಆಗಿದೆ. ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ನಿಂದ ಹೊರ ಬಿದ್ದಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಐಪಿಎಲ್ ಮಾದರಿಯ ಲೀಗ್: ಭಾರತೀಯ ಪ್ರಾಂಚೈಸಿಗಳದ್ದೇ ಕಾರುಬಾರು