ಆಲೂರು(ಬೆಂಗಳೂರು): 2022-23ನೇ ಸಾಲಿನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಮುಂಬೈ ತಂಡ ದಾಖಲೆಯ 725 ರನ್ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ಇದರ ಜೊತೆಗೆ ದೇಶಿ ಕ್ರಿಕೆಟ್ನಲ್ಲಿ ಮುಂಬೈ ತಂಡದಿಂದ ಹೊಸದೊಂದು ದಾಖಲೆ ನಿರ್ಮಾಣಗೊಂಡಿದೆ.
ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 8 ವಿಕೆಟ್ನಷ್ಟಕ್ಕೆ 647 ರನ್ಗಳಿಕೆ ಮಾಡಿ ಮುಂಬೈ ತಂಡ ಡಿಕ್ಲೇರ್ ಘೋಷಣೆ ಮಾಡಿಕೊಂಡಿತ್ತು. ಇದರ ಬೆನ್ನತ್ತಿದ್ದ ಉತ್ತರಾಖಂಡ ಕೇವಲ 114 ರನ್ಗಳಿಗೆ ಆಲೌಟ್ ಆಗಿತ್ತು. ಬರೋಬ್ಬರಿ 533 ರನ್ಗಳ ಮುನ್ನಡೆ ಪಡೆದುಕೊಂಡಿದ್ದ ಮುಂಬೈ ತಂಡ ಫಾಲೋ ಆನ್ ಹೇರುವ ಬದಲಿಗೆ ಮತ್ತೆ ಬ್ಯಾಟ್ ಬೀಸಿ 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಕೆ ಮಾಡಿತ್ತು. ಈ ಮೂಲಕ ಜಾರ್ಖಂಡ್ ತಂಡದ ಗೆಲುವಿಗೆ 794 ರನ್ಗಳ ಟಾರ್ಗೆಟ್ ನೀಡಿತ್ತು.
-
Mumbai Won by 725 Run(s) (Qualified) #MUMvCAU #RanjiTrophy #QF2 Scorecard:https://t.co/9IGODqlOPD
— BCCI Domestic (@BCCIdomestic) June 9, 2022 " class="align-text-top noRightClick twitterSection" data="
">Mumbai Won by 725 Run(s) (Qualified) #MUMvCAU #RanjiTrophy #QF2 Scorecard:https://t.co/9IGODqlOPD
— BCCI Domestic (@BCCIdomestic) June 9, 2022Mumbai Won by 725 Run(s) (Qualified) #MUMvCAU #RanjiTrophy #QF2 Scorecard:https://t.co/9IGODqlOPD
— BCCI Domestic (@BCCIdomestic) June 9, 2022
ಮುಂಬೈ ತಂಡದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ್ದ ಉತ್ತರಾಖಂಡ ತಂಡ ಕೇವಲ 69 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಕಾಣುವಂತಾಯಿತು. ಮುಂಬೈ ತಂಡದ ಪರ ಮೊದಲ ಇನ್ನಿಂಗ್ಸ್ನಲ್ಲಿ ಸುವೇದ್ 252 ರನ್, ಸರ್ಫರಾಜ್ ಖಾನ್ 153 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ ಪೃಥ್ವಿ ಶಾ 72 ರನ್ ಹಾಗೂ ಜೈಸ್ವಾಲ್ 103 ರನ್ಗಳಿಕೆ ಮಾಡಿದ್ದರು. ಬೌಲಿಂಗ್ನಲ್ಲಿ ಮುಂಬೈ ತಂಡದ ಧವಲ್ ಕುಲಕರ್ಣಿ,ತುಷಾರ್, ಮೂಲಾನಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿ, ಮಿಂಚು ಹರಿಸಿದರು.
ಇದನ್ನೂ ಓದಿ: 'ಒಪ್ಪಿಕೊಳ್ಳುವುದು ಕಷ್ಟ': ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ರಾಹುಲ್ ಬೇಸರ
ಮುಂಬೈ ತಂಡದ ದಾಖಲೆ: ದೇಶಿ ಕ್ರಿಕೆಟ್ನಲ್ಲಿ ವಿಶ್ವದ ಯಾವುದೇ ಕ್ರಿಕೆಟ್ ತಂಡ ಇಷ್ಟೊಂದು ಅಂತರದ ಗೆಲುವು ದಾಖಲು ಮಾಡಿಲ್ಲ. ಆದರೆ, ಇದೇ ಮೊದಲ ಸಲ ಪೃಥ್ವಿ ಶಾ ನಾಯಕತ್ವದ ಮುಂಬೈ ತಂಡ ಬರೋಬ್ಬರಿ 725 ರನ್ಗಳ ಗೆಲುವು ದಾಖಲಿಸಿ, ಹೊಸದೊಂದು ಇತಿಹಾಸ ಸೃಷ್ಟಿಸಿದೆ. ನಿನ್ನೆ ಮುಕ್ತಾಯಗೊಂಡ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಉತ್ತರ ಪ್ರದೇಶ ಸೆಮಿಫೈನಲ್ಗೆ ಲಗ್ಗೆ ಹಾಕಿದೆ.