ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಈಗಲೂ ಸಿಎಸ್ಕೆ ತಂಡದ ಅತ್ಯಮೂಲ್ಯ ಆಟಗಾರ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಬ್ಯಾಟರ್ ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
2020ರಲ್ಲಿ ಭಾರಿ ವೈಫಲ್ಯ ಅನುಭವಿಸಿದ್ದ ಸಿಎಸ್ಕೆ ಪ್ರಥಮ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫ್ಲೇ ಆಫ್ ತಲುಪುವಲ್ಲಿ ವಿಫಲವಾಗಿತ್ತು. ಆದರೆ ಬಹುತೇಕ ಅದೇ ತಂಡವನ್ನು ಹೊಂದಿರುವ ಸಿಎಸ್ಕೆ ಈ ಬಾರಿ ಭರ್ಜರಿ ಪ್ರದರ್ಶನ ತೋರಿ ಅಗ್ರ ತಂಡವಾಗಿ ಮುನ್ನುಗ್ಗುತ್ತಿದೆ. ವಿಶೇಷವೆಂದರೆ ಮುಂಬೈ ಮತ್ತು ಆರ್ಸಿಬಿ ಅಂತಹ ಬಲಿಷ್ಠ ತಂಡಗಳನ್ನು ಲೀಗ್ನ ಎರಡೂ ಪಂದ್ಯಗಳಲ್ಲೂ ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ.
-
"Chennai's most valuable player is still MS Dhoni." - @HaydosTweets
— Star Sports (@StarSportsIndia) September 30, 2021 " class="align-text-top noRightClick twitterSection" data="
Do you agree with him? Tell us 👇 & catch up with all things #CSK, on #TheSuperKingsShow.
Today, 8 AM & 11 AM | Star Sports Network pic.twitter.com/XXB1F7cCB2
">"Chennai's most valuable player is still MS Dhoni." - @HaydosTweets
— Star Sports (@StarSportsIndia) September 30, 2021
Do you agree with him? Tell us 👇 & catch up with all things #CSK, on #TheSuperKingsShow.
Today, 8 AM & 11 AM | Star Sports Network pic.twitter.com/XXB1F7cCB2"Chennai's most valuable player is still MS Dhoni." - @HaydosTweets
— Star Sports (@StarSportsIndia) September 30, 2021
Do you agree with him? Tell us 👇 & catch up with all things #CSK, on #TheSuperKingsShow.
Today, 8 AM & 11 AM | Star Sports Network pic.twitter.com/XXB1F7cCB2
ಎಂ.ಎಸ್.ಧೋನಿ ಬ್ಯಾಟ್ಸ್ಮನ್ ಆಗಿ ತಮ್ಮ ಹಿಂದಿನ ಚಾರ್ಮ್ ಕಳೆದುಕೊಂಡಿದ್ದಾರೆ. ಆದರೆ ನಾಯಕತ್ವದಲ್ಲಿ ಮಾತ್ರ ಮೂರು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಅವರು ತಂಡದಲ್ಲಿರುವ ಸಂಪನ್ಮೂಲಗಳನ್ನು ಸಮಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಅನುಭವಿ ಡ್ವೇನ್ ಬ್ರಾವೋ, ಪ್ಲೆಸಿಸ್ರನ್ನು ಉಪಯೋಗಿಸಿಕೊಳ್ಳುತ್ತಿರುವ ರೀತಿ ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
ತಂಡವನ್ನು ಆಯ್ಕೆ ಮಾಡುವುದರಲ್ಲಿ ಧೋನಿಯವರ ಸ್ಥಿರತೆ ಅದ್ಭುತವಾಗಿದೆ. ಯುವ ಆಟಗಾರರಾದ ದೀಪಕ್ ಚಹರ್, ಶಾರ್ದೂಲ್, ಗಾಯಕ್ವಾಡ್ ಧೋನಿ ನಾಯಕತ್ವದಲ್ಲಿ ಅರಳುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಇದೇ ಕಾರಣಕ್ಕೆ ಮಾಜಿ ಸಿಎಸ್ಕೆ ಆಟಗಾರ ಹಾಗೂ ಪ್ರಸ್ತುತ ಐಪಿಎಲ್ನಲ್ಲಿ ಕಾಮೆಂಟೇಟರ್ ಆಗಿರುವ ಹೇಡನ್ ಧೋನಿಯನ್ನು ಅತ್ಯಮೂಲ್ಯ ಆಟಗಾರ ಎಂದಿದ್ದಾರೆ.
"ಟೂರ್ನಮೆಂಟ್ನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರೂ, ಈಗಲೂ ಧೋನಿ ತಂಡದ ಅತ್ಯಮೂಲ್ಯ ಆಟಗಾರ. ತಂಡದ ನಾಯಕನಾಗಿ ಅವರು ಸಂಪೂರ್ಣವಾಗಿ ಸವಾಲನ್ನು ನೀಡುವವರಾಗಿದ್ದಾರೆ. ಅವರಿಗೆ ವಯಸ್ಸಾಗಿದೆ, ಆದರೆ ಎದುರಾಳಿಯ ತಂತ್ರಗಾರಿಕೆಯನ್ನು ಭೇದಿಸುವಲ್ಲಿ ನಿಯಂತ್ರಣವನ್ನು ಹೊಂದಿದ್ದಾರೆ. ಮತ್ತು ಇದಕ್ಕೆ ಅವರ ತಂಡದವರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ" ಎಂದು ಹೇಡನ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಐಪಿಎಲ್ ಶುರುವಾದಾಗ ಧೋನಿ ತುಂಬಾ ಬಲಿಷ್ಠ ತಂಡವನ್ನು ಹೊಂದಿದ್ದರು. ಆದರೆ ಈಗ ವಯಸ್ಸಾದ ಆಟಗಾರರನ್ನು ಹೊಂದಿದ್ದಾರೆ. ಆದರೂ ಧೋನಿ ಅವರ ಆಯ್ಕೆ ತಂತ್ರ ಅತ್ಯುತ್ತಮವಾಗಿದೆ. ಬ್ರಾವೋ, ಫಾಫ್ ಡು ಪ್ಲೆಸಿಸ್ ಅಂತಹ ಅತ್ಯುತ್ತಮ ಆಟಗಾರರನ್ನು ಈಗಲೂ ಪ್ರೋತ್ಸಾಹಿಸುತ್ತಿರುವುದು ಅವರ ನಾಯಕತ್ವದ ಶೈಲಿಯನ್ನು ಎತ್ತಿ ತೋರುತ್ತದೆ ಎಂದು ಹೇಡನ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿಯೊಬ್ಬರೂ ತಂಡಕ್ಕೆ ಕೊಡುಗೆ ನೀಡಿ ಎಬಿಡಿ ಮೇಲಿನ ಒತ್ತಡ ಕಡಿಮೆ ಮಾಡುತ್ತಿದ್ದಾರೆ: ಮ್ಯಾಕ್ಸ್ವೆಲ್