ETV Bharat / sports

ಎಂ.ಎಸ್‌.ಧೋನಿ ಜಾರ್ಖಂಡ್‌ನ ಗರಿಷ್ಠ ವೈಯಕ್ತಿಕ ತೆರಿಗೆ ಪಾವತಿದಾರ! - ಜಾರ್ಖಂಡ್​ನ ಅತಿ ಹೆಚ್ಚು ತೆರಿಗೆ ಪಾವತಿದಾರ

ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನ ಪ್ರಾರಂಭಿಸಿದಾಗಿನಿಂದಲೂ ಜಾರ್ಖಂಡ್​ ರಾಜ್ಯದಲ್ಲಿ ಅತಿ ದೊಡ್ಡ ತೆರಿಗೆ ಪಾವತಿದಾರನಾಗಿದ್ದಾರೆ.

MS Dhoni has highest individual taxpayer in the Jharkhand
ರಾಜ್ಯದ ಅತಿ ಹೆಚ್ಚು ತೆರಿಗೆದಾರರಾದ ಧೋನಿ
author img

By

Published : Apr 4, 2023, 5:10 PM IST

ರಾಂಚಿ (ಜಾರ್ಖಂಡ್​): ಎಂ.ಎಸ್‌.ಧೋನಿ. ವಯಸ್ಸು 40 ದಾಟಿದರೂ ಈಗಲೂ ವಿಕೆಟ್​ ಕೀಪಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಅಪರೂಪದ ಕ್ರಿಕೆಟಿಗ. ಅಷ್ಟೇ ಏಕೆ? ದೇಶಕ್ಕೆ ತೆರಿಗೆ ಕಟ್ಟುವ ವಿಚಾರದಲ್ಲಿಯೂ ಇವರು ನಿರಂತರತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನ ಶುರು ಮಾಡಿದಾಗಿನಿಂದಲೂ ನಿರಂತರವಾಗಿ ರಾಜ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿದಾರನೂ ಹೌದು.

ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕವೂ ಹೆಚ್ಚು ವೈಯಕ್ತಿಕ ತೆರಿಗೆಯನ್ನು ಇವರು ಪಾವತಿಸುತ್ತಿದ್ದಾರೆ ಎಂದು ಜಾರ್ಖಂಡ್ ಆದಾಯ ತೆರಿಗೆ ಇಲಾಖೆ (ಐಟಿ) ದೃಢಪಡಿಸಿದೆ. 2022-23ರನೇ ಸಾಲಿನ ತೆರಿಗೆ ಪಾವತಿಯಲ್ಲೂ ಧೋನಿಯದ್ದೇ ಮೇಲುಗೈ. ಆಗಸ್ಟ್ 15, 2020 ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರೂ ಇವರ ಆದಾಯದಲ್ಲಿ ಇಳಿಕೆಯಾಗಿಲ್ಲ.

2022-23ರಲ್ಲಿ ಧೋನಿ ಆದಾಯವು ಅವರು ತೆರಿಗೆ ಇಲಾಖೆಗೆ ಮುಂಗಡ ತೆರಿಗೆ ಪಾವತಿಯ ಅಂಕಿ-ಅಂಶದಂತೆ ಹೇಳುವುದಾದರೆ ಕಳೆದ ವರ್ಷದ ಆದಾಯಕ್ಕೆ ಬಹುತೇಕ ಸಮನಾಗಿದೆ. ಈ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಧೋನಿ ಐಟಿ ಇಲಾಖೆಗೆ ಒಟ್ಟು 38 ಕೋಟಿ ರೂಪಾಯಿ ಮುಂಗಡ ತೆರಿಗೆ ಪಾವತಿಸಿದ್ದಾರೆ. ಕಳೆದ ವರ್ಷವೂ ಅಷ್ಟೇ ಮೊತ್ತವನ್ನು ಮುಂಗಡ ತೆರಿಗೆಯಾಗಿ ಠೇವಣಿ ಇಟ್ಟಿದ್ದರು.

₹130 ಕೋಟಿ ಆದಾಯ: ಐಟಿ ಇಲಾಖೆ ಪ್ರಕಾರ, ಧೋನಿ ಠೇವಣಿ ಮಾಡಿದ 38 ಕೋಟಿ ರೂ ಮುಂಗಡ ತೆರಿಗೆ ಆಧರಿಸಿ ಅವರ ಆದಾಯ ಸುಮಾರು 130 ಕೋಟಿ ರೂಪಾಯಿಗಳೆಂಬ ನಿರೀಕ್ಷೆಯಿದೆ. 2019-20 ರಲ್ಲಿ 28 ಕೋಟಿ ರೂ ಪಾವತಿಸಿದ್ದರು. 2018-2019 ರಲ್ಲಿಯೂ ಅಷ್ಟೇ ತೆರಿಗೆ ಕಟ್ಟಿದ್ದರು. ಈ ಹಿಂದೆ 2017-18ರಲ್ಲಿ 12.17 ಕೋಟಿ ರೂ ಹಾಗೂ 2016-17ರಲ್ಲಿ 10.93 ಕೋಟಿ ರೂ ಪಾವತಿಸಿದ್ದರು.

ಇದನ್ನೂ ಓದಿ: ಐಪಿಎಲ್​ನಲ್ಲಿ ಧೋನಿ 5000 ರನ್​: ಮೊಬೈಲ್​ ಟಾರ್ಚ್​ ಬೆಳಗಿ ನಾಯಕನಿಗೆ ವಿಶೇಷ ಗೌರವ

15 ಆಗಸ್ಟ್ 2020 ರಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ಗುಡ್‌ಬೈ ಹೇಳಿದ್ದರು. ಇದಾದ ನಂತರ ಐಪಿಎಲ್​ನಲ್ಲಿ ಚೆನ್ನೈ ತಂಡದ ನಾಯಕರಾಗಿ ಮುಂದುವರೆದರು. ಈ ವರ್ಷ ಕೊನೆಯ ಆವೃತ್ತಿ ಎಂದು ಹೇಳಲಾಗುತ್ತಿದೆ.

ಕ್ಯಾಪ್ಟನ್ ಕೂಲ್ ಹೂಡಿಕೆಗಳು..: ಕ್ಯಾಪ್ಟನ್ ಕೂಲ್ ಖ್ಯಾತಿಯ ಕ್ರಿಕೆಟಿಗ ಹಲವಾರು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸ್ಪೋರ್ಟ್ಸ್ ವೇರ್, ಹೋಮ್ ಇಂಟೀರಿಯರ್ ಕಂಪನಿಯಾದ ಹೋಮ್‌ಲೇನ್, ಉಪಯೋಗಿಸಿದ ಕಾರು ಖರೀದಿ ಮತ್ತು ಮಾರಾಟ ಕಂಪನಿ ಕಾರ್ಸ್ 24, ಸ್ಟಾರ್ಟಪ್ ಕಂಪನಿ ಖಾತಾ ಬುಕ್, ಸ್ಪೋರ್ಟ್ಸ್ ಕಂಪನಿ ರನ್ ಆಡಮ್, ಕ್ರಿಕೆಟ್ ಕೋಚಿಂಗ್ ಮಾಡುತ್ತಾರೆ. ರಾಂಚಿಯಲ್ಲಿ ಧೋನಿ ಸುಮಾರು 43 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ.

ಇದನ್ನೂ ಓದಿ: 2011ರ ವಿಶ್ವಕಪ್‌ ಪಂದ್ಯದಲ್ಲಿ ಧೋನಿ ಗೆಲುವಿನ ಸಿಕ್ಸರ್‌: ಚೆಂಡು ಬಿದ್ದ ಸ್ಥಳದಲ್ಲಿ ಸ್ಮಾರಕ ನಿರ್ಮಾಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.