ETV Bharat / sports

10ನೇ ತರಗತಿ 66%, 12ರಲ್ಲಿ 56%: 3 ICC ಟ್ರೋಫಿ ಗೆದ್ದ ಏಕೈಕ ನಾಯಕ! ಕ್ರಿಕೆಟ್‌ ಲೋಕದ ಕಣ್ಮಣಿ ಧೋನಿಗೆ 42ನೇ ಹುಟ್ಟುಹಬ್ಬ! - ಈಟಿವಿ ಭಾರತ ಕನ್ನಡ

ಮಹೇಂದ್ರ ಸಿಂಗ್​ ಧೋನಿ ಅವರಿಂದು ಬರ್ತ್‌ಡೇ ಸಂಭ್ರಮ. ಈ ಹಿನ್ನೆಲೆಯಲ್ಲಿ ಶ್ರೇಷ್ಠ ಕ್ರಿಕೆಟಿಗನ ಕುರಿತ ಕುತೂಹಲದ ಮಾಹಿತಿಗಳು ಇಲ್ಲಿವೆ.

ಎಮ್​ ಎಸ್​ ಧೋನಿ
ಎಮ್​ ಎಸ್​ ಧೋನಿ
author img

By

Published : Jul 7, 2023, 9:54 AM IST

Updated : Jul 7, 2023, 10:00 AM IST

ಭಾರತ ಕ್ರಿಕೆಟ್‌ ತಂಡದ ಯಶಸ್ವಿ ನಾಯಕ ಹಾಗೂ 'ಕ್ಯಾಪ್ಟನ್​ ಕೂಲ್' ಎಂದೇ ಜನಪ್ರಿಯರಾಗಿರುವ ಮಹೇಂದ್ರ ಸಿಂಗ್​ ಧೋನಿ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1981ರ ಜುಲೈ 7ರಂದು ಜನಿಸಿದ ಇವರು ಯಶಸ್ವಿ ನಾಯಕ ಮಾತ್ರವಲ್ಲದೇ ಯಶಸ್ವಿ ವಿಕೆಟ್​ ಕೀಪರ್​ ಕೂಡಾ ಆಗಿರುವುದು ಗೊತ್ತಿರುವ ಸಂಗತಿ. ಇದನ್ನು ಹೊರತುಪಡಿಸಿದಂತೆಯೂ ಅವರ ಕುರಿತು ಸಾಕಷ್ಟು ಕುತೂಹಲದ ವಿಚಾರಗಳಿವೆ..

ನಿಮಗಿದು ಗೊತ್ತೇ?

  • ಧೋನಿ ಕ್ರಿಕೆಟ್ ವೃತ್ತಿಜೀವನ ಡಕೌಟ್‌ನೊಂದಿಗೆ ಪ್ರಾರಂಭ!
  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಅತ್ಯಧಿಕ ಸ್ಕೋರ್ 224 ರನ್. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ.
  • 2009 ಸೆ.30 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೌಲಿಂಗ್​ ಮಾಡಿ ಮೊದಲ ವಿಕೆಟ್​ ಪಡೆದ ಧೋನಿ.
  • ಧೋನಿ ನಾಯಕನಾಗಿ ಹೆಚ್ಚಿನ ಪಂದ್ಯಗಳನ್ನು ಆಡಿದ ಏಕೈಕ ಆಟಗಾರ. ಒಟ್ಟು 331 ಪಂದ್ಯಗಳ ಪೈಕಿ 60 ಟೆಸ್ಟ್‌, 199 ಏಕದಿನ, 72 ಟಿ20.
  • 2011ರಲ್ಲಿ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ. 2019ರಲ್ಲಿ ಕಾಶ್ಮೀರದಲ್ಲಿ ತಮ್ಮ ಘಟಕದೊಂದಿಗೆ ಸೇವೆ ಸಲ್ಲಿಸಲು ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪ್ರವಾಸ ತೊರೆದರು.
  • ಐಸಿಸಿಯ ಎಲ್ಲ 3 ಟ್ರೋಫಿಗಳನ್ನು ಜಯಿಸಿದ ವಿಶ್ವದ ಏಕೈಕ ನಾಯಕ. (ಟಿ20 ವಿಶ್ವಕಪ್ 2007, ಏಕದಿನ ವಿಶ್ವಕಪ್ 2011, ICC​​ ಚಾಂಪಿಯನ್​ ಟ್ರೋಫಿ 2013)​
  • ವಿಕೆಟ್​ ಕೀಪರ್​ ಆಗಿ ಅತಿ ಹೆಚ್ಚು ಸ್ಕೋರ್​ ( ಶ್ರೀಲಂಕಾ ವಿರುದ್ಧ 183ರನ್) ಗಳಿಸಿದ ಏಕೈಕ ಆಟಗಾರ. ​
  • ಯಶಸ್ವಿ ನಾಯಕನ ಹತ್ತನೇ ತರಗತಿ ಅಂಕ 66%, 12ನೇ ತರಗತಿ ಅಂಕ 56%
  • ಧೋನಿ ಶ್ರೀಮಂತ ಭಾರತೀಯ ಕ್ರಿಕೆಟರ್​. ಫೋರ್ಬ್ಸ್ ಪ್ರಕಾರ, 2021ರ ಹೊತ್ತಿಗೆ ನಿವ್ವಳ ಆಸ್ತಿ ಮೌಲ್ಯ 111 ಮಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದ್ದು, 2023ರಲ್ಲಿ 120 ಮಿಲಿಯನ್‌ (1,040 ಕೋಟಿ) ಎಂದು ಹೇಳಲಾಗಿದೆ.
  • ಧೋನಿಗೆ 2009ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಪದ್ಮಶ್ರೀ' ನೀಡಿ ಗೌರವಿಸಲಾಯಿತು. 2007ರಲ್ಲಿ ಭಾರತದ ಅತ್ಯುನ್ನತ ಕ್ರೀಡಾ ಗೌರವ ಪ್ರಶಸ್ತಿಯಾದ 'ರಾಜೀವ್ ಗಾಂಧಿ ಖೇಲ್ ರತ್ನ' ನೀಡಿ ಪುರಸ್ಕರಿಸಲಾಯಿತು.
  • ಟೈಮ್ ಮ್ಯಾಗಜೀನ್‌ನ ವಿಶ್ವದ ಟಾಪ್ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಧೋನಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆಯಿಂದ ವಿಶ್ವದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಪಟ್ಟಿ ಮಾಡಲಾಗಿದೆ.​
  • ಎರಡು ಬಾರಿ ಐಸಿಸಿ, ODI ವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದ ಏಕೈಕ ಕ್ರಿಕೆಟರ್.​
  • ಆಗಸ್ಟ್ 2020ರಲ್ಲಿ, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರ. ಧೋನಿ ಕೊನೆಯ ಪಂದ್ಯ ನ್ಯೂಜಿಲೆಂಡ್ ವಿರುದ್ಧ 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡಿದ್ದರು.
  • ಧೋನಿ ಬೈಕ್​ ಪ್ರೇಮಿ. ಅವರ ಗ್ಯಾರೇಜ್‌ ಐಷಾರಾಮಿ ಬೈಕ್​ ಹಾಗೂ ವಿಂಟೇಜ್ ಕಾರುಗಳಿಂದ ತುಂಬಿದೆ.
  • ಕ್ರಿಕೆಟ್​ಗೂ ಮೊದಲು ಧೋನಿ 2001ರಿಂದ 2003 ರವರೆಗೆ ಖರಗ್‌ಪುರ ರೈಲು ನಿಲ್ದಾಣದಲ್ಲಿ ರೈಲು ಟಿಕೆಟ್ ಪರೀಕ್ಷಕರಾಗಿ (TTE) ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: MS Dhoni :ಹೈದರಾಬಾದ್​ನಲ್ಲಿ ಕ್ಯಾಪ್ಟನ್ ಕೂಲ್​ ಧೋನಿ ಹುಟ್ಟುಹಬ್ಬಕ್ಕೆ ​52 ಅಡಿ ಕಟೌಟ್.. ಮುಂಗಡ​ ಉಡುಗೊರೆ ನೀಡಿದ ಫ್ಯಾನ್ಸ್​

Last Updated : Jul 7, 2023, 10:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.