ETV Bharat / sports

ಟೆಸ್ಟ್​, ಏಕದಿನ, ಟಿ-20.. ಮೂರು ಮಾದರಿಯಲ್ಲೂ ಟೀಂ ಇಂಡಿಯಾಗೆ ನಂಬರ್​ ಒನ್​ ಪಟ್ಟ

author img

By

Published : Feb 15, 2023, 4:54 PM IST

ಐಸಿಸಿ ರ‍್ಯಾಂಕಿಂಗ್‌ ಹೊಸ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, ಟೆಸ್ಟ್​, ಏಕದಿನ ಹಾಗೂ ಟಿ-20ಯಲ್ಲಿ ಭಾರತ ತಂಡ ಮೊದಲ ಸ್ಥಾನ ಪಡೆದಿದೆ.

mrf-icc-ranking-team-india-no-1-t20-odi-test-ranking
ಟೆಸ್ಟ್​, ಏಕದಿನ, ಟಿ-20.. ಮೂರು ಮಾದರಿಯಲ್ಲೂ ಟೀಂ ಇಂಡಿಯಾಗೆ ನಂಬರ್​ ಒನ್​ ಪಟ್ಟ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಟೆಸ್ಟ್​, ಏಕದಿನ ಮತ್ತು ಟಿ-20 ಸೇರಿ ಮೂರು ಮಾದರಿಯಲ್ಲೂ ನಂಬರ್​ ಒನ್​ ಪಟ್ಟಕ್ಕೇರಿದೆ. ಟಿ-20ರಲ್ಲಿ 267 ಅಂಕ, ಏಕದಿನದಲ್ಲಿ 114 ಅಂಕ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ 115 ಅಂಕಗಳೊಂದಿಗೆ ಭಾರತ ಅಗ್ರಸ್ಥಾನ ಕೊಂಡೊಯ್ದುಕೊಂಡಿದೆ.

ಬುಧವಾರ ಐಸಿಸಿ ರ‍್ಯಾಂಕಿಂಗ್‌ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಟೆಸ್ಟ್​ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಟೀಂ ಇಂಡಿಯಾ ಮೊದಲ ಸ್ಥಾನಕ್ಕೆ ಏರಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧದ ಇನ್ನಿಂಗ್ಸ್​ ಗೆಲುವು ದಾಖಲಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಪ್ರಸ್ತುತ ಟೆಸ್ಟ್​ನಲ್ಲಿ ಟೀಂ ಇಂಡಿಯಾ 115 ರೇಟಿಂಗ್ ಅಂಕಗಳನ್ನು ಹೊಂದಿದೆ. 111 ಅಂಕಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದರೆ, 106 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ ಮೂರನೇ ಸ್ಥಾನ ಹಾಗೂ 100 ಅಂಕಗಳೊಂದಿಗೆ ನ್ಯೂಜಿಲೆಂಡ್ ನಾಲ್ಕನೇ ಸ್ಥಾನ ಪಡೆದಿದೆ. ಐದನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 85 ರೇಟಿಂಗ್ ಅಂಕಗಳನ್ನು ಹೊಂದಿದೆ.

ಇದನ್ನೂ ಓದಿ: ಚಾನಲ್​ವೊಂದರ ರಹಸ್ಯ ಕಾರ್ಯಾಚರಣೆ: ವಿವಾದದ ಸುಳಿಯಲ್ಲಿ ಚೇತನ್​ ಶರ್ಮಾ

ಮತ್ತೊಂದೆಡೆ, ರೋಹಿತ್ ಶರ್ಮಾ ಪಡೆದ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯಲು ಹಾಗೂ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಫೆಬ್ರವರಿ 17ರಂದು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯವನ್ನು ಗೆಲ್ಲಬೇಕಾಗಿದೆ. ಇನ್ನು, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಡಲು ಟೀಂ ಇಂಡಿಯಾ 3-1 ಅಥವಾ 3-0 ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ: ಸ್ಮಿತ್​ ಬಗೆಗಿನ ಬಾರ್ಡರ್​ ಟೀಕೆಗೆ ಕ್ಯಾರಿ ಪ್ರತಿಕ್ರಿಯೆ: "ದೆಹಲಿಯಲ್ಲಿ ಪುಟಿದೇಳುತ್ತೇವೆ"

ಏಕದಿನ ಅಗ್ರ ಶ್ರೇಯಾಂಕ: ಟೀಂ ಇಂಡಿಯಾ ಇತ್ತೀಚೆಗೆ ನ್ಯೂಜಿಲ್ಯಾಂಡ್​ ವಿರುದ್ಧ 3-0 ಅಂತರದಿಂದ ಗೆಲುವು ದಾಖಲಿಸಿದ ಏಕದಿನ ಕ್ರಿಕೆಟ್​ನಲ್ಲಿ ಅಗ್ರ ಶ್ರೇಯಾಂಕವನ್ನು ಪಡೆದಿದೆ. ಏಕದಿನದಲ್ಲಿ 114 ರೇಟಿಂಗ್ ಅಂಕಗಳನ್ನು ಭಾರತ ತಂಡ ಹೊಂದಿದೆ. ಆಸ್ಟ್ರೇಲಿಯಾ 112 ಅಂಕಗಳೊಂದಿಗೆ ಎರಡನೇ ಸ್ಥಾನ, ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್ ತಂಡವು ತಲಾ 111 ರೇಟಿಂಗ್ ಅಂಕಗಳೊಂದಿಗೆ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದಿದೆ. 106 ಅಂಕಗಳೊಂದಿಗೆ ಪಾಕಿಸ್ತಾನ ಐದನೇ ಸ್ಥಾನ ಹೊಂದಿದೆ.

ಟಿ-20 ರ‍್ಯಾಂಕಿಂಗ್‌: ಟಿ-20 ಕ್ರಿಕೆಟ್​ ರ‍್ಯಾಂಕಿಂಗ್‌ನಲ್ಲಿ 267 ರೇಟಿಂಗ್ ಅಂಕಗಳೊಂದಿಗೆ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ಭಾರತಕ್ಕಿಂತ ಕೇವಲ ಒಂದು ಅಂಕ ಕಡಿಮೆ ಹೊಂದಿರುವ ಇಂಗ್ಲೆಂಡ್ (266) ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ (258) ಮತ್ತು ದಕ್ಷಿಣ ಆಫ್ರಿಕಾ (256) ಹಾಗೂ ನ್ಯೂಜಿಲೆಂಡ್ ತಂಡಗಳು (252) ಕ್ರಮವಾಗಿ ಮೂರನೇ, ನಾಲ್ಕನೇ ಹಾಗೂ ಐದನೇ ಸ್ಥಾನವನ್ನು ಹೊಂದಿವೆ.

ಇದನ್ನೂ ಓದಿ: ಬಾರ್ಡರ್​ ಗವಾಸ್ಕರ್​ ಟ್ರೋಫಿ: ಅಯ್ಯರ್​ ತಂಡಕ್ಕೆ ಸೇರ್ಪಡೆ, ಆಸಿಸ್​ಗೆ ಮತ್ತೊಂದು ಸಂಕಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.