ಲಂಡನ್: ತಮ್ಮ ವಿರುದ್ಧ ಕೇಳಿ ಬಂದಿರುವ ವರ್ಣಭೇದ ನೀತಿಯ ಆರೋಪವನ್ನು ತಳ್ಳಿಹಾಕಿರುವ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್, ತಮ್ಮ ಹಳೆಯ ಟ್ವೀಟ್ಗಳನ್ನು ಭಾರತೀಯರನ್ನು ಅಪಹಾಸ್ಯ ಮಾಡಿಲ್ಲ, ನನ್ನ ಅಭಿಪ್ರಾಯವನ್ನು ಸಂದರ್ಭದಿಂದ ಹೊರತೆಗೆತಲಾಗಿದೆ ಎಂದು ಹೇಳಿದ್ದಾರೆ.
ಈ ವರ್ಷ ಆಲ್ಲಿ ರಾಬಿನ್ಸನ್ ಅವರನ್ನು 8 ವರ್ಷಗಳ ಹಿಂದೆ ಮಾಡಿದ್ದ ವರ್ಣಬೇಧ ಮತ್ತು ಮಹಿಳೆಯರ ಮೇಲಿನ ಅವಹೇಳನಕಾರಿ ಟ್ವೀಟ್ ಮಾಡಿದಕ್ಕಾಗಿ ಅವರು ಇಸಿಬಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅಮಾನತು ಮಾಡಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ನಾಯಕ ಮಾರ್ಗನ್ ಮತ್ತು ಜೋಸ್ ಬಟ್ಲರ್ ಭಾರತೀಯರು ಸಾಮಾನ್ಯವಾಗಿ ಬಳಸುವ 'ಸರ್' ಪದವನ್ನು ಬಳಸಿ ಅವಹೇಳನ ಮಾಡಲಾಗಿದೆ ಎನ್ನಲಾದ ಸ್ಕ್ರೀನ್ಶಾಟ್ ವೈರಲ್ ಆಗಿದ್ದವು.
ಕಾರ್ಡಿಫ್‌ನಲ್ಲಿ ಬುಧವಾರ ಶ್ರೀಲಂಕಾ ವಿರುದ್ಧದ ಇಂಗ್ಲೆಂಡ್‌ನ ವೈಟ್-ಬಾಲ್ ಸರಣಿಗೆ ಮುಂಚಿತವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾರ್ಗನ್, " ನಾನು ಅದರ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ, ಒಂದು ವೇಳೆ ನಾನು ಯಾರನ್ನಾದರೂ ಸಾಮಾಜಿಕ ಜಾಲಾತಾಣದಲ್ಲಿ ಅಥವಾ ವಿಶ್ವದ ಯಾವುದೇ ಭಾಗದಲ್ಲಿ ಸರ್ ಎಂದು ಕರೆದರೆ ಅದು ಮೆಚ್ಚುಗೆ ಮತ್ತು ಗೌರವದ ಭಾವನೆಯಿಂದಷ್ಟೇ ಎಂದಿದ್ದಾರೆ.
"ಅದನ್ನು ಸಂದರ್ಭದಿಂದ ತೆಗೆದುಕೊಂಡರೆ ನಾನು ಅದನ್ನು ನಿಯಂತ್ರಿಸಲು ಅಥವಾ ಏನೂ ಮಾಡಲಾಗುವುದಿಲ್ಲ. ಹಾಗಾಗಿ ಅದನ್ನು ನಾನು ಹೆಚ್ಚು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ" ಎಂದು ಅವರು ಹೇಳಿದ್ದಾರೆ.
ಈ ಘಟನೆಗಳ ಬೆಳಕಿಗೆ ಬಂದ ಮೇಲೆ ಇಸಿಬಿ , ಇದಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಮೇಲೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದೆ.
ಇದನ್ನು ಓದಿ:ಟ್ವಿಟರ್ನಲ್ಲಿ ಭಾರತೀಯರ ಅಪಹಾಸ್ಯ : ಬಟ್ಲರ್-ಮಾರ್ಗನ್ ವಿರುದ್ಧ ತನಿಖೆಗೆ ಇಸಿಬಿ ಆದೇಶ