ದಿ ಓವೆಲ್(ಇಂಗ್ಲೆಂಡ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಜೊತೆಗೆ ಮೊಹಮ್ಮದ್ ಶಮಿ ಕೂಡ ಮಿಂಚಿದ್ದಾರೆ. ತಾವು ಎಸೆದ 7 ಓವರ್ಗಳಲ್ಲಿ ಪ್ರಮುಖ 3 ವಿಕೆಟ್ ಪಡೆದುಕೊಳ್ಳುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಸಿದ್ದು, ಈ ದಾಖಲೆ ಬರೆದ ಮೊದಲ ಭಾರತೀಯ ವೇಗಿ ಎಂಬ ಸಾಧನೆ ಬರೆದಿದ್ದಾರೆ.
-
ICYMI!
— BCCI (@BCCI) July 12, 2022 " class="align-text-top noRightClick twitterSection" data="
A special landmark for @MdShami11 as he completes 1⃣5⃣0⃣ ODI wickets! 👏 👏
Follow the match ▶️ https://t.co/8E3nGmlNOh#TeamIndia | #ENGvIND pic.twitter.com/DAVpt6XqFh
">ICYMI!
— BCCI (@BCCI) July 12, 2022
A special landmark for @MdShami11 as he completes 1⃣5⃣0⃣ ODI wickets! 👏 👏
Follow the match ▶️ https://t.co/8E3nGmlNOh#TeamIndia | #ENGvIND pic.twitter.com/DAVpt6XqFhICYMI!
— BCCI (@BCCI) July 12, 2022
A special landmark for @MdShami11 as he completes 1⃣5⃣0⃣ ODI wickets! 👏 👏
Follow the match ▶️ https://t.co/8E3nGmlNOh#TeamIndia | #ENGvIND pic.twitter.com/DAVpt6XqFh
ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ವೇಗವಾಗಿ 150 ವಿಕೆಟ್ ಪಡೆದ ದಾಖಲೆ ಇದೀಗ ಮೊಹಮ್ಮದ್ ಶಮಿ ಪಾಲಾಗಿದೆ. ಕೇವಲ 80 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಜೊತೆಗೆ ವೇಗವಾಗಿ 150 ವಿಕೆಟ್ ಪಡೆದ ವಿಶ್ವದ 2ನೇ ವೇಗಿ ಎನಿಸಿಕೊಂಡಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಕೇವಲ 77 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿರಿ: ಬುಮ್ರಾ ಬೆಂಕಿ ದಾಳಿ, ಅಬ್ಬರಿಸಿದ ರೋಹಿತ್... 10 ವಿಕೆಟ್ಗಳ ಜಯ ದಾಖಲಿಸಿದ ಭಾರತ
ಈ ಹಿಂದೆ ಟೀಂ ಇಂಡಿಯಾದ ವೇಗಿ ಅಜಿತ್ ಅಗರ್ಕರ್ ಭಾರತದ ಪರ 97 ಪಂದ್ಯಗಳಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆದರೆ, ಇದೀಗ ಶಮಿ ಹೆಸರಿನಲ್ಲಿ ಈ ದಾಖಲೆ ನಿರ್ಮಾಣಗೊಂಡಿದೆ.
ಯಾರ್ಕರ್ ಕಿಂಗ್ ಬುಮ್ರಾ ರೆಕಾರ್ಡ್: ಆಂಗ್ಲರ ಪಾಲಿಗೆ ವಿಲನ್ ಆಗಿ ಕಾಡಿದ ಜಸ್ಪ್ರೀತ್ ಬುಮ್ರಾ ಕೂಡ ಇಂಗ್ಲೆಂಡ್ ನಾಡಿನಲ್ಲಿ ದಾಖಲೆ ಬರೆದರು. ತಾವು ಎಸೆದ 7 ಓವರ್ಗಳಲ್ಲಿ 6 ವಿಕೆಟ್ ಪಡೆದ ಬುಮ್ರಾ ಭಾರತೀಯ ಬೌಲರ್ಗಳು ನಿರ್ಮಿಸದ ರೆಕಾರ್ಡ್ ಬರೆದಿದ್ದಾರೆ. ಭಾರತದ ಯಾವುದೇ ಬೌಲರ್ಗಳು ಇಂಗ್ಲೆಂಡ್ನಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಇಷ್ಟೊಂದು ವಿಕೆಟ್ ಪಡೆದುಕೊಂಡಿಲ್ಲ.