ದುಬೈ: ಪಾಕಿಸ್ತಾನ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 2021ರಲ್ಲಿ ಅದ್ಭುತ ಫಾರ್ಮ್ನಲ್ಲಿದ್ದು, ಟಿ20 ಕ್ರಿಕೆಟ್ನಲ್ಲಿ ಈ ವರ್ಷ 1000 ರನ್ಗಳ ಗಡಿ ದಾಟಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ಗಡಿದಾಟಿದ ವಿಶ್ವಕಪ್ ಮೊದಲ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
ಟಿ20 ವಿಶ್ವಕಪ್ನಲ್ಲಿ 6 ಪಂದ್ಯಗಳಿಂದ 3 ಅರ್ಧಶತಕ ಸಹಿತ 281 ರನ್ಗಳಿಸಿದ್ದಾರೆ. ಒಟ್ಟಾರೆ 2021ರಲ್ಲಿ ಅವರು 23 ಪಂದ್ಯಗಳಿಂದ 10 ಅರ್ಧಶತಕ ಮತ್ತು ಒಂದು ಶತಕದ ನೆರವಿನಿಂದ 1033 ರನ್ಗಳಿಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ಗಡಿದಾಟಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಇವರ ಜೊತೆಗಾರ ಬಾಬರ್ ಅಜಮ್ 2ನೇ ಸ್ಥಾನದಲ್ಲಿದ್ದು, 23 ಪಂದ್ಯಗಳಿಂದ 826 ರನ್ಗಳಿಸಿದ್ದಾರೆ. ಇವರೂ ಕೂಡ 1 ಶತಕ ಮತ್ತು 8 ಅರ್ಧಶತಕ ಸಿಡಿಸಿದ್ದಾರೆ. ಈ ಮೊದಲು ಈ ದಾಖಲೆ ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್(748) ಹೆಸರಿನಲ್ಲಿತ್ತು.
ಇದಕ್ಕು ಮೊದಲು ರಿಜ್ವಾನ್ ಕ್ರಿಸ್ ಗೇಲ್(1665) ಹೆಸರಿನಲ್ಲಿದ್ದ ವರ್ಷದಲ್ಲಿ ಟಿ20 ಪಂದ್ಯಗಳಲ್ಲಿ ಹೆಚ್ಚು ರನ್ಗಳಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಗೇಲ್ ವರ್ಷವೊಂದರಲ್ಲಿ 1665 ರನ್ಗಳಿಸಿದ ದಾಖಲೆ ಹೊಂದಿದ್ದರು. ರಿಜ್ವಾನ್ ಇದೀಗ 2021 ಮುಗಿಯುವ ಮುನ್ನವೇ 1743 ರನ್ಗಳಿಸಿದ್ದಾರೆ.
ಇದನ್ನು ಓದಿ: ಫೈನಲ್ಗೆ ಮುನ್ನ ಕಿವೀಸ್ಗೆ ಆಘಾತ; ಬ್ಯಾಟ್ಗೆ ಗುದ್ದಿ ಕೈಬೆರಳು ಮುರಿದಕೊಂಡ ಕಾನ್ವೆ ವಿಶ್ವಕಪ್ನಿಂದ ಔಟ್!