ETV Bharat / sports

ಭಾರತ ಟೀಕಿಸಿ ಟ್ರೋಲ್​ ಆದ ಪಾಕ್​ನ ಮಹಮದ್​ ಹಫೀಜ್.. ಏನಂದ್ರು ಗೊತ್ತಾ? - ETV bharat kannada news

ಪಾಕಿಸ್ತಾನ - ಭಾರತ ಪಂದ್ಯವೆಂದರೆ ಅಲ್ಲಿ ವಾಕ್ಸಮರ, ಟೀಕೆ, ಟ್ರೋಲ್​ ಸಾಮಾನ್ಯ. ಇದು ಏಷ್ಯಾ ಕಪ್​ನಲ್ಲೂ ಮುಂದುವರಿದಿದೆ. ಭಾರತದ ಟೂರ್ನಿ ಆಯೋಜನೆಯ ಬಗ್ಗೆ ಮಾತನಾಡಿದ ಪಾಕ್​ ತಂಡದ ಮಾಜಿ ನಾಯಕ ಮಹಮದ್​ ಹಫೀಜ್​ರನ್ನು ಟ್ರೋಲಿಗರು ಹಿಗ್ಗಾಮುಗ್ಗಾ ಗುಮ್ಮಿದ್ದಾರೆ.

mohammad-hafeez-trolled
ಭಾರತ ಟೀಕಿಸಿ ಟ್ರೋಲ್​ ಆದ ಪಾಕ್​ನ ಮಹಮದ್​ ಹಫೀಜ್
author img

By

Published : Sep 3, 2022, 6:19 PM IST

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಮೈದಾನದ ಹೊರಗೆ ವಾಕ್ಸಮರ, ಟೀಕೆ ಸಹಜವಾಗಿರುತ್ತವೆ. ಏಷ್ಯಾ ಟೂರ್ನಿಯಲ್ಲಿ ನಾಳೆ ನಡೆಯುವ ಸೂಪರ್​ 4 ಹಂತದ ಪಂದ್ಯಕ್ಕೂ ಮೊದಲು ಪಾಕಿಸ್ತಾನದ ಮಾಜಿ ನಾಯಕ ಮಹಮದ್​ ಹಫೀಜ್​ ಭಾರತವನ್ನು ಕೆಣಕಿದ್ದಾರೆ. ಇದರಿಂದ ಹಫೀಜ್​ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್​ ಆಗಿದ್ದಾರೆ.

ಹಫೀಜ್​ ಭಾರತದ ಬಗ್ಗೆ ಏನಂದರು: ಏಷ್ಯಾ ಕಪ್​ನಲ್ಲಿ ಭಾರತದ ಎದುರು ಮೊದಲ ಪಂದ್ಯದಲ್ಲೇ ಸೋತು ಅವಮಾನಕ್ಕೀಡಾಗಿರುವ ಪಾಕಿಸ್ತಾನ ತಂಡ ಅವರ ದೇಶದಲ್ಲಿ ಟೀಕೆಗೂ ಒಳಗಾಗಿದೆ. ಈ ಬಗ್ಗೆ ಟೀವಿ ಚರ್ಚೆಯಲ್ಲಿ ಭಾಗವಹಿಸಿದ್ದ ತಂಡದ ಮಾಜಿ ನಾಯಕ ಮಹಮದ್​ ಹಫೀಜ್​ ಭಾರತದ ಕ್ರಿಕೆಟ್​ ಆಯೋಜನೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಹಲವು ಕ್ರಿಕೆಟ್​ ಟೂರ್ನಿಗಳನ್ನು ಆಯೋಜನೆ ಮಾಡುತ್ತಿರುವುದು ಭಾರತ ಕ್ರಿಕೆಟ್​ನ ಗುಣಮಟ್ಟದಿಂದಲೋ ಅಥವಾ ಹಣಕ್ಕಾಗಿಯೋ ಎಂದು ಟಿವಿ ನಿರೂಪಕ ಪ್ರಶ್ನಿಸುತ್ತಾನೆ. ಇದಕ್ಕುತ್ತರಿಸಿದ ಹಫೀಜ್​ "ಹಣಕ್ಕಾಗಿ ಮಾತ್ರ" ಎಂದಿದ್ದಾರೆ.

ಸಮಾಜದಲ್ಲಿ ಹೆಚ್ಚು ಗಳಿಸುವವನು ಮಾತ್ರ ಎಲ್ಲರ ಪ್ರೀತಿಪಾತ್ರನಾಗುತ್ತಾನೆ. ಹೆಚ್ಚು ಲಾಡ್ಲಾ (ಮುದ್ದು) ಪಡೆಯುತ್ತಾನೆ ಎಂಬುದು ನನಗೆ ಖಚಿತವಾಗಿ ತಿಳಿದಿದೆ. ಭಾರತ ಹಣ ಗಳಿಸುವ ದೇಶವಾಗಿದೆ. ಆದ್ದರಿಂದ ಬಿಸಿಸಿಐ ವಿಶ್ವಾದ್ಯಂತ ನಡೆಯುವ ದ್ವಿಪಕ್ಷೀಯ ಸರಣಿಗಳಲ್ಲಿ ಅವರು ಪ್ರಾಯೋಜಕತ್ವ ಪಡೆಯುತ್ತಾರೆ. ಇದರಿಂದ ಅದು ಜಾಕ್‌ಪಾಟ್ ಪಡೆಯುತ್ತದೆ. ಇದು ಸತ್ಯ ಎಂದು ಹಫೀಜ್ ಹೇಳಿದ್ದಾರೆ.

ಈ ಮೂಲಕ ಹಫೀಜ್​ ಭಾರತ ಕ್ರಿಕೆಟ್​​ ಆಟವನ್ನು ಮೂದಲಿಸಿದ್ದಾರೆ. ಭಾರತಕ್ಕೆ ಆಟಕ್ಕಿಂತಲೂ ಹಣವೇ ಮುಖ್ಯ ಎಂಬ ರೀತಿಯಲ್ಲಿ ಮಾತನ್ನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಫೀಜ್ ಅವ​ರನ್ನು ಟ್ರೋಲಿಗರು ಮತ್ತು ಭಾರತೀಯ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ರೋಹಿತ್​ ಶರ್ಮಾ ಹೆಚ್ಚು ದಿನ ನಾಯಕನಾಗಿರಲ್ಲ: ಇದಕ್ಕೂ ಮೊದಲು, ಪಾಕ್​ನ ಹಫೀಜ್ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿರುದ್ಧವೂ ಟೀಕೆ ಮಾಡಿದ್ದಾರೆ. ರೋಹಿತ್​ ದೇಹ ಭಾಷೆ(ಬಾಡಿ ಲಾಂಗ್ವೇಜ್​) ನೋಡಿದರೆ, ಅವರು ಹೆದರಿದಂತೆ ಕಾಣುತ್ತದೆ. ಆಡುವಾಗ ಗೊಂದಲಕ್ಕೀಡಾಗುತ್ತಾರೆ ಎಂಬುದು ಕಾಣುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಇಷ್ಟಲ್ಲದೇ, ರೋಹಿತ್​ ಶರ್ಮಾ ಭಾರತ ತಂಡದ ನಾಯಕನಾಗಿ ಹೆಚ್ಚು ದಿನ ಇರಲಾರರು. ತಂಡದ ಈಗಿನ ಪರಿಸ್ಥಿತಿಗೆ ಶರ್ಮಾ ದೇಹಭಾಷೆ ಹೊಂದಲಾರದು. ಇದರಿಂದ ಅವರು ದೀರ್ಘಕಾಲದವರೆಗೆ ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.

ಟಾಸ್ ಮಾಡಲು ಬಂದಾಗಲೂ ರೋಹಿತ್​ ದುರ್ಬಲವಾಗಿ ಕಾಣುತ್ತಾರೆ. ಭಯ, ಗೊಂದಲ ಇವರುವಂತೆ ಕಾಣುತ್ತಾರೆ. ಅವರು ಆಟಗಾರನಾಗಿದ್ದಾಗ ಅದ್ಭುತ ಇನ್ನಿಂಗ್ಸ್ ಆಡುವುದನ್ನು ನೋಡಿದ್ದೇನೆ. ನಾಯಕತ್ವದ ಜವಾಬ್ದಾರಿ ಅವರ ಮೇಲೆ ಒತ್ತಡ ಹೇರಿದಂತಿದೆ ಎಂದು ಹೇಳಿದ್ದಾರೆ.

ಓದಿ: ಏಷ್ಯಾ ಕಪ್​ ಟೂರ್ನಿ: ಎತ್ತರದ ಮಾಸ್ಕ್​ ಧರಿಸಿ ವಿರಾಟ್​ ಕೊಹ್ಲಿ ಅಭ್ಯಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.