ದುಬೈ : ಭಾರತ ಬ್ಯಾಟರ್ಗಳಾದ ಮಿಥಾಲಿ ರಾಜ್ ಮತ್ತು ಸ್ಮೃತಿ ಮಂದಾನ ಮಂಗಳವಾರ ಐಸಿಸಿ ಬಿಡುಗಡೆ ಮಾಡಿರುವ ನೂತನ ಮಹಿಳಾ ಏಕದಿನ ಶ್ರೇಯಾಂಕದಲ್ಲಿ ಕ್ರಮವಾಗಿ 3 ಮತ್ತು 6ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆಲ್ರೌಂಡರ್ ದೀಪ್ತಿ ಶರ್ಮಾ ಐಸಿಸಿ ಮಹಿಳಾ ಏಕದಿನ ಶ್ರೇಯಾಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮಿಥಾಲಿ 738 ಮತ್ತು ಸ್ಮೃತಿ 710 ಅಂಕಗಳನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ಲಿಜೆಲ್ ಲೀ 761 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆಸೀಸ್ ಬ್ಯಾಟರ್ ಅಲಿಸಾ ಹೀಲಿ(750) 2ನೇ ಸ್ಥಾನದಲ್ಲಿದ್ದಾರೆ.
-
A West Indies duo moving on up 📈
— ICC (@ICC) November 30, 2021 " class="align-text-top noRightClick twitterSection" data="
Stafanie Taylor and Hayley Matthews headline a range of changes in the @MRFWorldwide Women’s ODI rankings 👉 https://t.co/IhK7JX2BrV pic.twitter.com/fulyFMnrL0
">A West Indies duo moving on up 📈
— ICC (@ICC) November 30, 2021
Stafanie Taylor and Hayley Matthews headline a range of changes in the @MRFWorldwide Women’s ODI rankings 👉 https://t.co/IhK7JX2BrV pic.twitter.com/fulyFMnrL0A West Indies duo moving on up 📈
— ICC (@ICC) November 30, 2021
Stafanie Taylor and Hayley Matthews headline a range of changes in the @MRFWorldwide Women’s ODI rankings 👉 https://t.co/IhK7JX2BrV pic.twitter.com/fulyFMnrL0
ಇತ್ತೀಚಿಗೆ ಐಸಿಸಿ ಏಕದಿನ ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಉತ್ತಮ ಪ್ರದರ್ಶನ ತೋರಿದ ವೆಸ್ಟ್ ಇಂಡೀಸ್ ತಂಡದ ಸ್ಟೆಫನೀ ಟೇಲರ್ ಮತ್ತು ಹೇಲೀ ಮ್ಯಾಥ್ಯೂಸ್ ಆಲ್ರೌಂಡರ್ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ.
ಟೇಲರ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ 10ಕ್ಕೆ ಪ್ರವೇಶಿಸಿದರೆ, ಆಲ್ರೌಂಡರ್ ಶ್ರೇಯಾಂಕದಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಮ್ಯಾಥ್ಯೂಸ್ 8ಕ್ಕೆ ಬಡ್ತಿ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದ ಮರಿಝಾನ್ ಕಾಪ್(384), ಇಂಗ್ಲೆಂಡ್ನ ನಟಲೀ ಸೀವರ್(372), ಎಲಿಸ್ ಪೆರ್ರಿ(365) ಆಲ್ರೌಂಡರ್ ಶ್ರೇಯಾಂಕದಲ್ಲಿ ಅಗ್ರ 3 ಸ್ಥಾನಗಳನ್ನು ಆಕ್ರಮಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ ರಿಟೆನ್ಷನ್ 2022 : ಫ್ರಾಂಚೈಸಿಗಳು ಉಳಿಸಿಕೊಳ್ಳುವ ಸಾಧ್ಯತೆಯಿರುವ ಆಟಗಾರರು