ಮೌಂಟ್ ಮಾಂಗನೂಯಿ(ನ್ಯೂಜಿಲ್ಯಾಂಡ್): 'ವಿಶ್ವ ಮಹಿಳಾ ಕ್ರಿಕೆಟ್ ಲೋಕದ ಸಚಿನ್' ಎಂದೇ ಖ್ಯಾತರಾದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಆರು ಏಕದಿನ ವಿಶ್ವಕಪ್‌ಗಳಲ್ಲಿ ಆಡಿದ 2ನೇ ಭಾರತೀಯೆ ಮತ್ತು ವಿಶ್ವದ ಮೂರನೇ ಕ್ರಿಕೆಟಿಗರೆನಿಸಿಕೊಂಡಿದ್ದಾರೆ.
ನ್ಯೂಜಿಲೆಂಡ್‌ನ ಮೌಂಟ್ ಮಾಂಗನೂಯಿಯಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಆಡುತ್ತಿದೆ. ಈ ಪಂದ್ಯದ ಮೂಲಕ ಮಿಥಾಲಿ ರಾಜ್ ಈ ದಾಖಲೆ ಬರೆದರು. ಮಿಥಾಲಿ ರಾಜ್ 2000ನೇ ಇಸವಿಯಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ್ದರು. ನಂತರ 2005, 2009, 2013, 2017 ಮತ್ತು ಪ್ರಸ್ತುತ 2022ರ ವಿಶ್ವಕಪ್ನಲ್ಲೂ ಆಡುತ್ತಿದ್ದಾರೆ.
ಮಿಥಾಲಿಗೂ ಮೊದಲು ಸಚಿನ್ ತೆಂಡೂಲ್ಕರ್ 1992, 1996, 1999, 2003, 2007, 2011 ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದರು. ಪಾಕಿಸ್ತಾನದ ಜಾವೇದ್ ಮಿಯಾಂದಾದ್ 1975, 1979, 1983, 1987, 1992 ಮತ್ತು 1996ರ ವಿಶ್ವಕಪ್‌ನಲ್ಲಿ ಆಡಿದ್ದರು.
ಇದನ್ನೂ ಓದಿ: ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್