ಮುಂಬೈ : ಸೌಮ್ಯ ಸ್ವಭಾವದ ರಾಹುಲ್ ದ್ರಾವಿಡ್ರ ಉಗ್ರ ರೂಪಗೊಂಡರೆ ಹೇಗಿರ್ತಾರೆ ಎಂಬುದನ್ನು ಜಾಹೀರಾತಿನಲ್ಲಿ ತೋರಿಸಿದ್ದ ಕ್ರೆಡ್, ಇದೀಗ ಭಾರತದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ರನ್ನು ಸಿಂಗರ್ ಆಗಿ ತೋರಿಸಿ ಮತ್ತೊಂದು ಅಚ್ಚರಿ ಮೂಡಿಸಿದೆ.
CRED ಬಿಡುಗಡೆಗೊಳಿಸಿರುವ ನೂತನ ಜಾಹೀರಾತಿನಲ್ಲಿ ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್ ಮತ್ತು ಸಬಾ ಕರೀಮ್ ಮತ್ತು ಮಣೀಂದರ್ ಸಿಂಗ್ ಅವರು ಕಾಣಿಸಿದ್ದಾರೆ.
-
From listening to you coach me on the field, to now listening to you sing while I am on my way to the stadium. Venky bhai....it's been a journey. pic.twitter.com/ubgORUe6Me
— Rohit Sharma (@ImRo45) May 1, 2021 " class="align-text-top noRightClick twitterSection" data="
">From listening to you coach me on the field, to now listening to you sing while I am on my way to the stadium. Venky bhai....it's been a journey. pic.twitter.com/ubgORUe6Me
— Rohit Sharma (@ImRo45) May 1, 2021From listening to you coach me on the field, to now listening to you sing while I am on my way to the stadium. Venky bhai....it's been a journey. pic.twitter.com/ubgORUe6Me
— Rohit Sharma (@ImRo45) May 1, 2021
ಈ ಜಾಹೀರಾತಿನಲ್ಲಿ ತಮ್ಮ 90ರ ದಶಕದ ಕ್ರಿಕೆಟ್ ಬಗ್ಗೆ ಇಂಗ್ಲಿಷ್ ಗೀತೆಯನ್ನ ಹಾಡಿದ್ದಾರೆ. ನೀವು ಈ ಜನರೇಷನ್ನಲ್ಲಿ ಒಬ್ಬರಾಗಿದ್ದೀರಿ, ನಿಮಗೆ ನಾನು ತಿಳಿದಿಲ್ಲದಿರಬಹುದು, ಸುಮ್ನೆ ಹೋಗಿ ನಿಮ್ಮ ಡ್ಯಾಡಿನ ಕೇಳಿ, ಟಿ20 ಕಾರಣದಿಂದ ನಮ್ಮನ್ನ ಮರೆಯಬೇಡಿ, ನಾವು ನಿಮ್ಮ ಕ್ರಿಕೆಟಿಗರ ಹಿಂದಿನ ಪೀಳಿಗೆಯವರಾಗಿದ್ದೀವೆ" ಎಂಬ ಗೀತೆಯನ್ನು ನೃತ್ಯದ ಮೂಲಕ ಹಾಡಿದ್ದಾರೆ.
ಈ ವಿಡಿಯೋವನ್ನು ವೆಂಕಟೇಶ್ ಪ್ರಸಾದ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನು, ರೋಹಿತ್ ಶರ್ಮಾ ಕೂಡ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಪ್ರಸಾದ್ರ ಪ್ರದರ್ಶನಕ್ಕೆ ಫಿದಾ ಆಗಿದ್ದಾರೆ.
ಕೋಚ್ ಆಗಿದ್ದಾಗ ಮೈದಾನದಲ್ಲಿ ನಿಮ್ಮ ಮಾತುಗಳನ್ನು ಕೇಳುತ್ತಿದ್ದೆ. ಇದೀಗ ಸ್ಟೇಡಿಯಂಗೆ ಹೋಗುವಾಗ ನೀವು ಹಾಡಿರುವ ಹಾಡನ್ನು ಕೇಳುತ್ತಿದ್ದೇನೆ. ವೆಂಕಿ ಭಾಯ್, ಇದೊಂದು ಪ್ರಾಯಾಣವಾಗಿದೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.