ಹೈದರಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಿಗರು ಕೂಡ ಕೊಹ್ಲಿ ಅವರನ್ನು ತುಂಬಾನೇ ಇಷ್ಟ ಪಡುತ್ತಾರೆ. ಅದರಂತೆ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ಕೂಡ ಕಿಂಗ್ ಕೊಹ್ಲಿಯ ದೊಡ್ಡ ಫ್ಯಾನ್ ಅಂತೆ.
ಇನ್ಸ್ಟಾಗ್ರಾಂನಲ್ಲಿ ಲೈವ್ ಕಾರ್ಯಕ್ರಮದ ಪ್ರಶ್ನೋತ್ತರ ವೇಳೆ ಈ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದಾರೆ.
ನಿಮ್ಮ ಫೇವರೇಟ್ ಬ್ಯಾಟ್ಸ್‌ಮನ್ ಯಾರೆಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಕಿಂಗ್ ಕೊಹ್ಲಿ ಎಂದು ಮನಬಿಚ್ಚಿ ಹೇಳಿದ್ದಾರೆ.
ಹಸನ್ ಅಲಿ ಮತ್ತು ಶಾಮಿಯಾ ಅರ್ಜೂ ಅವರು 2019ರಲ್ಲಿ ದುಬೈನಲ್ಲಿ ವಿವಾಹವಾಗಿದ್ದರು. ಶಾಮಿಯಾ ಅರ್ಜೂ ಅವರು ಎಮಿರೇಟ್ಸ್ ಏರ್ಲೈನ್ಸ್ನಲ್ಲಿ ವಿಮಾನ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಕೆ ಮೂಲತಃ ಹರಿಯಾಣದವರಾಗಿದ್ದು, ಕುಟುಂಬ ದೆಹಲಿಯಲ್ಲಿ ನೆಲೆಸಿದೆ.
ಪಾಕಿಸ್ತಾನಿ ಮೂಲದ ರಿಜ್ಲಾ ರೆಹ್ಮನ್ ಕೂಡ 2019ರ ವಲ್ಡ್ ಕಪ್ ಸಮಯದಲ್ಲಿ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.