ಮೆಲ್ಬೋರ್ನ್(ಆಸ್ಟ್ರೇಲಿಯಾ) : ಐಸಿಸಿ ಟಿ-20 ವಿಶ್ವಕಪ್ 2022ರ ವೇಳಾಪಟ್ಟಿ ರಿಲೀಸ್ ಆಗಿದೆ. ಕಾಂಗರೂಗಳ ನಾಡು ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ಚುಟುಕು ಕ್ರಿಕೆಟ್ ಟೂರ್ನಿ ಆರಂಭಗೊಳ್ಳಲಿದೆ.
ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 45 ಪಂದ್ಯ ನಡೆಯಲಿವೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡಗಳಾಗಿರುವ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ.
ಕಳೆದ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಇದೀಗ ಅದಕ್ಕೆ ತಿರುಗೇಟು ನೀಡುವ ತವಕದಲ್ಲಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್, ಸಿಡ್ನಿ, ಬ್ರಿಸ್ಬೇನ್, ಅಡಿಲೇಡ್, ಜಿಲಾಂಗ್,ಹೋಬರ್ಟ್ ಮತ್ತು ಪರ್ತ್ ಮೈದಾನಗಳಲ್ಲಿ ಪಂದ್ಯ ಆಯೋಜನೆಗೊಂಡಿದೆ. ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್ ಅಪ್ ನ್ಯೂಜಿಲ್ಯಾಂಡ್ ಜೊತೆಗೆ ಭಾರತ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳು ನೇರವಾಗಿ ಅರ್ಹತೆ ಪಡೆದಿವೆ. ಉಳಿದಂತೆ ಶ್ರೀಲಂಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಲಿವೆ.
-
ICC T20 World Cup full Fixtures Announced.#T20WorldCup #T20WorldCup2022 pic.twitter.com/IhSdWnI446
— The Cricket Followers (@cricfollowers_1) January 21, 2022 " class="align-text-top noRightClick twitterSection" data="
">ICC T20 World Cup full Fixtures Announced.#T20WorldCup #T20WorldCup2022 pic.twitter.com/IhSdWnI446
— The Cricket Followers (@cricfollowers_1) January 21, 2022ICC T20 World Cup full Fixtures Announced.#T20WorldCup #T20WorldCup2022 pic.twitter.com/IhSdWnI446
— The Cricket Followers (@cricfollowers_1) January 21, 2022
ಇದನ್ನೂ ಓದಿರಿ: T -20 World Cup: ಟಿ - 20 ವಿಶ್ವಕಪ್ನ ವೇಳಾಪಟ್ಟಿ ಬಹಿರಂಗ: ಟೀಂ ಇಂಡಿಯಾದ ಮೊದಲ ಪಂದ್ಯ..
ಟೀಂ ಇಂಡಿಯಾ ಅಕ್ಟೋಬರ್ 23ರಂದು ಪಾಕಿಸ್ತಾನ, ಅಕ್ಟೋಬರ್ 27ರಂದು ಅರ್ಹತೆ ಪಡೆದುಕೊಳ್ಳುವ ತಂಡ, ಅಕ್ಟೋಬರ್ 30ರಂದು ದಕ್ಷಿಣ ಆಫ್ರಿಕಾ ನವೆಂಬರ್ 2ರಂದು ಬಾಂಗ್ಲಾದೇಶ ಹಾಗೂ ನವೆಂಬರ್ 6ರಂದು ಅರ್ಹತೆ ಪಡೆದುಕೊಳ್ಳುವ ಎರಡನೇ ತಂಡದೊಂದಿಗೆ ಕಾದಾಟ ನಡೆಸಲಿವೆ. ಕಳೆದ ವರ್ಷದ ಟಿ-20 ವಿಶ್ವಕಪ್ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತ ಲೀಗ್ ಹಂತದಲ್ಲೇ ಹೊರಬಿದ್ದು ನಿರಾಶೆ ಅನುಭವಿಸಿದೆ.
ಬಿ ಗ್ರೂಪ್ನಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಈಗಾಗಲೇ ನೇರ ಅರ್ಹತೆ ಪಡೆದುಕೊಂಡಿವೆ. ಎ ಗ್ರೂಪ್ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಫ್ಘಾನಿಸ್ತಾನ ತಂಡಗಳಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ