ಮುಂಬೈ : ವಿವಾಹದ ಕಾರಣ ಐಪಿಎಲ್ನ 15ನೇ ಆವೃತ್ತಿಯ ಮೊದಲ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದ ಆರ್ಸಿಬಿಯ ಗ್ಲೆನ್ ಮ್ಯಾಕ್ಸ್ವೆಲ್ ಈಗಾಗಲೇ ಮುಂಬೈಗೆ ಆಗಮಿಸಿದ್ದಾರೆ. ಆದರೆ, ಇಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯುತ್ತಿಲ್ಲ. ಕ್ವಾರಂಟೈನ್ ಮುಗಿಸಿದ್ದರೂ ಆಸೀಸ್ ಆಲ್ರೌಂಡರ್ ಏಕೆ ಕಣಕ್ಕಿಳಿಯುತ್ತಿಲ್ಲ ಎನ್ನುವುದನ್ನು ಆರ್ಸಿಬಿ ಮುಖ್ಯ ಕೋಚ್ ಮೈಕ್ ಹೆಸನ್ ವಿವರಿಸಿದ್ದಾರೆ.
ಸೋಮವಾರ ಆರ್ಸಿಬಿ ತಂಡದ ಅಭ್ಯಾಸ ಸೆಸನ್ನಲ್ಲಿ ಕಾಣಿಸಿಕೊಂಡಿದ್ದ ಕಾಣಿಸಿಕೊಂಡಿ ಮ್ಯಾಕ್ಸ್ವೆಲ್ ಇಂದು ನಡೆಯುವ ಪಂದ್ಯದಲ್ಲಿ ಆಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಪಂದ್ಯ ನಡೆಯುವಾಗ ಯಾವುದೇ ಆಟಗಾರರು ರಾಷ್ಟ್ರೀಯ ತಂಡ ತ್ಯಜಿಸಿ ಆಡುವುದಕ್ಕೆ ಅವಕಾಶ ನೀಡಿಲ್ಲದ ಕಾರಣ ಅವರು ಅನಿವಾರ್ಯವಾಗಿ ಇಂದು ಬೆಂಚ್ ಕಾಯಬೇಕಿದೆ.
-
Faf’s pep talk to the team, Mike’s assessment, Willey’s team song assignment, Harshal on facing old friend Yuzi, Maxi’s availability and much more, as we preview the #RRVRCB game on @kreditbee presents Game Day.#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/rRFAu5PGGn
— Royal Challengers Bangalore (@RCBTweets) April 5, 2022 " class="align-text-top noRightClick twitterSection" data="
">Faf’s pep talk to the team, Mike’s assessment, Willey’s team song assignment, Harshal on facing old friend Yuzi, Maxi’s availability and much more, as we preview the #RRVRCB game on @kreditbee presents Game Day.#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/rRFAu5PGGn
— Royal Challengers Bangalore (@RCBTweets) April 5, 2022Faf’s pep talk to the team, Mike’s assessment, Willey’s team song assignment, Harshal on facing old friend Yuzi, Maxi’s availability and much more, as we preview the #RRVRCB game on @kreditbee presents Game Day.#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/rRFAu5PGGn
— Royal Challengers Bangalore (@RCBTweets) April 5, 2022
ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಮಂಗಳವಾರ ಏಕೈಕ ಟಿ20 ಪಂದ್ಯವನ್ನಾಡಲಿದೆ. ಹಾಗಾಗಿ, ತಂಡದಿಂದ ಹೊರ ಬಂದಿರುವ ಆಟಗಾರರು ಕೂಡ ಏಪ್ರಿಲ್ 5ರನಂತರ ಮಾತ್ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲು ಸಿಎ ಸೂಚನೆ ನೀಡಿದೆ. "ಏಪ್ರಿಲ್ 6ಕ್ಕೂ ಮೊದಲು ಯಾವುದೇ ಗುತ್ತಿಗೆಯಲ್ಲಿರುವ ಆಟಗಾರರು ಐಪಿಎಲ್ಗೆ ಲಭ್ಯರಿರುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಈಗಾಗಲೇ ಖಚಿತಪಡಿಸಿದೆ.
ಆದ್ದರಿಂದ ಆಸೀಸ್ ಆಟಗಾರರು ಬಯೋಬಬಲ್ಗೆ ಯಾವಾಗ ಆಗಮಿಸಿದರೂ ಏಪ್ರಿಲ್ 6ರೊಳಗೆ ಆಡಲು ಸಾಧ್ಯವಿಲ್ಲ. ನಮಗೆ ಅದರ ಬಗ್ಗೆ ಜಾಗೃತಿ ಇರುವುದರಿಂದ ಬೇರೆ ಯೋಜನೆ ರೂಪಿಸಿಕೊಂಡಿದ್ದವೇವೆ. ಮ್ಯಾಕ್ಸಿ ಏಪ್ರಿಲ್ 9ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೆಸನ್ ಆರ್ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಕಳೆದ ಆವೃತ್ತಿಯಲ್ಲಿ ಮ್ಯಾಕ್ಸ್ವೆಲ್ ಅದ್ಭುತ ಪ್ರದರ್ಶನ ತೋರಿ ಆರ್ಸಿಬಿಗೆ ಆಪತ್ಪಾಂಧವ ಎನಿಸಿಕೊಂಡಿದ್ದರು. ಅವರು 42.75ರ ಸರಾಸರಿಯಲ್ಲಿ 513 ರನ್ ಗಳಿಸಿ ಆರ್ಸಿಬಿಯ ಗರಿಷ್ಠ ಸ್ಕೋರರ್ ಎನಿಸಿದ್ದರು. ಇದೀಗ ಎಬಿಡಿ ಅಂತಹ ವಿಶ್ವ ಶ್ರೇಷ್ಠ ಬ್ಯಾಟರ್ ಅನುಪಸ್ಥಿತಿಯಲ್ಲಿ ಬೆಂಗಳೂರು ಫ್ರಾಂಚೈಸಿಯ ಮಧ್ಯಮ ಕ್ರಮಾಂಕದ ಸಂಪೂರ್ಣ ಜವಾಬ್ದಾರಿ ಮ್ಯಾಕ್ಸ್ವೆಲ್ ಹೊರಬೇಕಿದೆ.
ಇದನ್ನೂ ಓದಿ:ಅಗ್ರಸ್ಥಾನಿ ರಾಯಲ್ಸ್ ಸವಾಲೊಡ್ಡಲು ಆರ್ಸಿಬಿ ರೆಡಿ.. ಮತ್ತೊಂದು ಹೈ ಸ್ಕೋರ್ ಪಂದ್ಯಕ್ಕೆ ವಾಂಖೆಡೆ ಸಿದ್ಧ