ETV Bharat / sports

ಕೋಲ್ಕತಾ ನೈಟ್​ ವಿರುದ್ಧ ಪ್ರಾಬಲ್ಯ ಮುಂದುವರಿಸುವುದೇ ಧೋನಿ ಬಳಗ - KKR Squad Today

ಐಪಿಎಲ್​ನಲ್ಲಿ ಎರಡೂ ತಂಡಗಳು 24 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್​ಕೆ 15 ಬಾರಿ ಗೆದ್ದಿದ್ದರೆ, ಕೋಲ್ಕತಾ ಕೇವಲ 9 ಪಂದ್ಯಗಳಲ್ಲಿ ಗೆದ್ದಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಮತ್ತು ಸಿಎಸ್‌ಕೆ ತಲಾ ಒಂದು ಜಯ ಸಾಧಿಸಿದ್ದವು. ಆದರೆ, ಎರಡೂ ತಂಡಗಳು ಪ್ಲೇಆಫ್ ತಲುಪುವಲ್ಲಿ ವಿಫಲರಾಗಿದ್ದವು. ಕೆಕೆಆರ್ 5 ಮತ್ತು ಸಿಎಸ್​ಕೆ 7ನೇ ಸ್ಥಾನ ಪಡೆದಿತ್ತು.​.

ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್​ ರೈಡರ್ಸ್

author img

By

Published : Apr 21, 2021, 4:14 PM IST

ಮುಂಬೈ : 14ನೇ ಐಪಿಎಲ್ ಅವೃತ್ತಿಯ 15ನೇ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ ತನ್ನ 4ನೇ ಪಂದ್ಯದಲ್ಲಿ ಕೋಲ್ಕತಾ ನೈಟ್​ ರೈಡರ್ಸ್​ ವಿರುದ್ಧ ಸೆಣಸಾಡಲಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಸತತ ಎರಡು ಪಂದ್ಯಗಳ ಗೆಲುವಿನ ವಿಶ್ವಾಸದಲ್ಲಿರುವ ಚೆನ್ನೈ ಸೂಪರ್​ ಕಿಂಗ್ಸ್​ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನ ಪಡೆಯುವ ಇರಾದೆಯಲ್ಲಿದೆ.

ತಂಡದಲ್ಲಿ ಫ್ಲೆಸಿಸ್​, ಮೊಯೀನ್ ಅಲಿ ಮತ್ತು ರಾಯುಡು ಉತ್ತಮ ಫಾರ್ಮ್​ನಲ್ಲಿದ್ದಾರೆ. ಎಲ್ಲದ್ದಕ್ಕಿಂತ ಕಳೆದ ಮೂರು ಪಂದ್ಯಗಳನ್ನು ಇದೇ ಸ್ಟೇಡಿಯಂನಲ್ಲಿ ಆಡಿರುವುದು ತಂಡಕ್ಕೆ ಪ್ಲಸ್​ ಪಾಯಿಂಟ್ ಆಗಿದೆ. ಸ್ಯಾಮ್​ ಕರ್ರನ್, ಜಡೇಜಾ ಬೌಲಿಂಗ್ ಜೊತೆಗೆ ಬ್ಯಾಟಿಂಗ್​​ನಲ್ಲೂ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ, ಆರಂಭಿಕ ರುತುರಾಜ್ ಗಾಯಕ್ವಾಡ್​ ಫಾರ್ಮ್​ ಕಳೆದುಕೊಂಡಿರುವುದು ತಂಡಕ್ಕೆ ಹಿನ್ನೆಡೆಯಾಗಿದೆ. ಇಂದಿನ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಕಣಕ್ಕಿಳಿಯುವ ಸಾಧ್ಯತೆಯಿದೆ.

ಇತ್ತ ಕೆಕೆಆರ್ ಆಡಿರುವ ಮೂರು ಪಂದ್ಯಗಳಲ್ಲಿ 2ರಲ್ಲಿ ಸೋಲು ಕಂಡಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಎಲ್ಲಾ ವಿಭಾಗದಲ್ಲೂ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಚೆನ್ನೈನಿಂದ ಮುಂಬೈಗೆ ಬಂದಿಳಿದಿರುವ ಕೆಕೆಆರ್ ಇಂದಿನ ಪಂದ್ಯದಲ್ಲಿ ಶಕೀಬ್ ಬದಲಿಗೆ ಸುನೀಲ್ ನರೈನ್​ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಮುಖಾಮುಖಿ : ಐಪಿಎಲ್​ನಲ್ಲಿ ಎರಡೂ ತಂಡಗಳು 24 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್​ಕೆ 15 ಬಾರಿ ಗೆದ್ದಿದ್ದರೆ, ಕೋಲ್ಕತಾ ಕೇವಲ 9 ಪಂದ್ಯಗಳಲ್ಲಿ ಗೆದ್ದಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಮತ್ತು ಸಿಎಸ್‌ಕೆ ತಲಾ ಒಂದು ಜಯ ಸಾಧಿಸಿದ್ದವು. ಆದರೆ, ಎರಡೂ ತಂಡಗಳು ಪ್ಲೇಆಫ್ ತಲುಪುವಲ್ಲಿ ವಿಫಲರಾಗಿದ್ದವು. ಕೆಕೆಆರ್ 5 ಮತ್ತು ಸಿಎಸ್​ಕೆ 7ನೇ ಸ್ಥಾನ ಪಡೆದಿತ್ತು.​

ಸಂಭವನೀಯ ತಂಡಗಳು

ಕೋಲ್ಕತಾ ನೈಟ್​ ರೈಡರ್ಸ್ : ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯೊನ್ ಮೋರ್ಗಾನ್ (ಸಿ), ಶಕೀಬ್ ಅಲ್ ಹಸನ್ / ಸುನಿಲ್ ನರೈನ್, ದಿನೇಶ್ ಕಾರ್ತಿಕ್ (ವಿಕೀ), ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ಪ್ರಸಿಧ್ ಕೃಷ್ಣ, ಶಿವಂ ಮಾವಿ, ವರುಣ್ ಚಕ್ರವರ್ತಿ

ಚೆನ್ನೈ ಸೂಪರ್ ಕಿಂಗ್ಸ್​ : ರುತುರಾಜ್ ಗೈಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್. ಧೋನಿ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ಡ್ವೇನ್ ಬ್ರಾವೋ, ದೀಪಕ್ ಚಹರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.