ETV Bharat / sports

ಕ್ರಿಕೆಟ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೇತುವೆ : ಆಸೀಸ್ ವಿದೇಶಾಂಗ ಸಚಿವೆ ಪೆನ್ನಿ ವಾಂಗ್

ಡಿಸ್ನಿ + ಹಾಟ್​ ಸ್ಟಾರ್ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ಇನ್ನು ಆಸ್ಟ್ರೇಲಿಯಾದಲ್ಲಿ ನಡೆಯುವ ಹೆಚ್ಚಿನ ಕ್ರಿಕೆಟ್​​ ಪಂದ್ಯಗಳು ಭಾರತದಲ್ಲಿ ಪ್ರಸಾರ ಆಗಲಿವೆ.

PENNY WONG
PENNY WONG
author img

By PTI

Published : Nov 22, 2023, 11:46 AM IST

ಕ್ರಿಕೆಟ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೇತುವೆ - ಪೆನ್ನಿ ವಾಂಗ್

ನವದೆಹಲಿ: ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರು ಮಂಗಳವಾರ ಕ್ರಿಕೆಟ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೇತುವೆ ಎಂದು ಕರೆದಿದ್ದಾರೆ. ತಮ್ಮ ದೇಶದಲ್ಲಿ ಆಡುವ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗಳನ್ನು ಭಾರತದಲ್ಲಿ ಪ್ರಸಾರಕ್ಕೆ ಅನುಕೂಲ ಮಾಡಿಕೊಡುವ ಒಪ್ಪಂದವನ್ನು ಶ್ಲಾಘಿಸಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸ್ನಿ + ಹಾಟ್​ ಸ್ಟಾರ್ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಏಳು ವರ್ಷಗಳ ಒಪ್ಪಂದದಲ್ಲಿ ಆಸ್ಟ್ರೇಲಿಯಾದಲ್ಲಿ ಆಡುವ ಎಲ್ಲಾ ಪುರುಷ ಮತ್ತು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಭಾರತದಲ್ಲಿ ಪ್ರಸಾರ ಮಾಡುವ ವಿಶೇಷ ಹಕ್ಕುಗಳನ್ನು ಪಡೆದುಕೊಂಡಿರುವ ಒಪ್ಪಂದದ ಬಗ್ಗೆ ಪೆನ್ನಿ ವಾಂಗ್ ಘೋಷಿಸಿದ್ದಾರೆ.

"ಎರಡು ರಾಷ್ಟ್ರಗಳು ಕ್ರಿಕೆಟ್​ನ್ನು ಹೆಚ್ಚು ಪ್ರೀತಿಸುತ್ತವೆ, ಇದೇ ಉಭಯ ರಾಷ್ಟ್ರಗಳನ್ನು ಬೆಸೆಯುವ ಸೇತುವೆ ಅಗುತ್ತದೆ ಎಂದು ಆಶಿಸುತ್ತೇನೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಸ್ಟಾರ್ ಸ್ಪೋರ್ಟ್ಸ್ ನಡುವಿನ ಈ ಪ್ರಸಾರ ಒಪ್ಪಂದದ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಇದರ ಮೂಲಕ ಹೆಚ್ಚಿನ ಭಾರತೀಯರು ಆಸ್ಟ್ರೇಲಿಯಾದ ಮಹಿಳಾ ಮತ್ತು ಪುರುಷರ ಬಿಗ್ ಬ್ಯಾಷ್ ಲೀಗ್ ಪಂದ್ಯಾವಳಿಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ" ಎಂದು ವಾಂಗ್​ ಹೇಳಿದ್ದಾರೆ.

"ಈ ಒಪ್ಪಂದದ ಮೂಲಕ ನೂರಾರು ಮಿಲಿಯನ್ ಭಾರತೀಯ ಅಭಿಮಾನಿಗಳು ಆಸ್ಟ್ರೇಲಿಯಾದಲ್ಲಿ ನಮ್ಮ ಅದ್ಭುತ ನಗರ, ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳು ಮತ್ತು ಭಾರತೀಯ ಕ್ರಿಕೆಟಿಗರ ಅನೇಕ ಸ್ಮರಣೀಯ ಕ್ಷಣಗಳನ್ನು ಹೊಂದಿರುವ ಮೈದಾನದ ಕ್ರಿಕೆಟ್​ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ" ಎಂದಿದ್ದಾರೆ.

ಡಿಸ್ನಿ ಸ್ಟಾರ್ ಜೊತೆಗೆ ಆಸ್ಟ್ರೇಲಿಯಾ ಕ್ರಿಕೆಟ್​ ಒಪ್ಪಂದ ಮಾಡಿಕೊಂಡಿರುವುದರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಜೊತೆಗೆ ಕೆಎಫ್​ಸಿ ಬಿಗ್​ಬ್ಯಾಷ್​ಲೀಗ್ ಮತ್ತು ವುಮೆನ್​ ಬಿಗ್​ಬ್ಯಾಷ್​ ಲೀಗ್​ನ ಪ್ರಸಾರವೂ ಆಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ನ ವರದಿಯ ಅಂಕಿಅಂಶದ ಪ್ರಕಾರ ಕ್ರಿಕೆಟ್ ಸಂಸ್ಥೆಯ ಒಟ್ಟು ಪ್ರಸಾರ ಆದಾಯದಲ್ಲಿ ಭಾರತವು 85 ಪ್ರತಿಶತದಷ್ಟು ಹೊಂದಿದೆ. ಹೀಗಾಗಿ ಭಾರತದಲ್ಲಿ ಕ್ರಿಕೆಟ್​ ಪ್ರಸಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಪ್ರಾದೇಶಿಕ ಭಾಷೆಯಲ್ಲೂ ಬಿಗ್​ ಬ್ಯಾಷ್​ ಲೀಗ್​: ಕ್ರಿಕೆಟ್​ ವೀಕ್ಷಕ ವಿವರಣೆ ಈಗ ಎಲ್ಲಾ ಭಾಷೆಗಳಲ್ಲೂ ಲಭ್ಯವಾಗುತ್ತದೆ. ಆದರೆ ಭಾರತ ಆಡುವ ಪಂದ್ಯಗಳಿಗೆ ಮಾತ್ರ ಈ ರೀತಿ ಎಲ್ಲಾ ಭಾಷೆಗಳಲ್ಲಿ ಮಾಡಲಾಗುತ್ತಿತ್ತು. ಆದರೆ ಡಿಸ್ನಿ ಇದನ್ನು ಬಿಗ್​ ಬ್ಯಾಷ್ ಲೀಗ್​ಗೆ ವಿಸ್ತರಿಸುವ ಚಿಂತನೆ ಮಾಡಿದೆ, ಅದರಂತೆ ಹಿಂದಿ ಹಾಗೂ ಇತರ ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಕವಿವರಣೆ ಸಿಗಲಿದೆ.

ಪ್ರವಾಸೋದ್ಯಕ್ಕೆ ಆದ್ಯತೆ: ಆಸ್ಟ್ರೇಲಿಯಾ ತನ್ನ ಪ್ರವಾಸೋದ್ಯಮವನ್ನು ವಿಸ್ತರಿಸುವ ಉದ್ದೇಶದಿಂದ ಕ್ರಿಕೆಟ್​ ಜೊತೆಗೆ ಇದರ ಪ್ರಚಾರವನ್ನು ಮಾಡುತ್ತಿದೆ. 2024ರ ಬೇಸಿಗೆಯ ಸಮಯದಲ್ಲಿ ನಡೆಯುವ ಪಂದ್ಯಗಳ ಪ್ರಸಾರದ ಜೊತೆ ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಚಟುವಟಿಕೆಗಳನ್ನು ಯೋಜಿಸುತ್ತಿದೆ.

ಇದನ್ನೂ ಓದಿ:ಆಸ್ಟ್ರೇಲಿಯಾ​ ಕ್ರಿಕೆಟಿಗರು, ಕುಟುಂಬವನ್ನು ಟ್ರೋಲ್​ ಮಾಡುವುದು ಕೆಟ್ಟ ಅಭಿರುಚಿ: ಹರ್ಭಜನ್​ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.