ನವದೆಹಲಿ : ವಾರಗಳ ಅಂತರದಲ್ಲಿ ಕುಟುಂಬದಲ್ಲಿನ ಅವಳಿ ದುರಂತಗಳಿಂದ ನೊಂದಿರುವ ವೇದಾ ಕೃಷ್ಣಮೂರ್ತಿಯ ಬಗ್ಗೆ ವಿಚಾರಣೆ ಮಾಡದೆ ಮತ್ತು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಅವರನ್ನು ಪರಿಗಣಿಸದಿರುವ ನಿರ್ಧಾರವನ್ನು ಅವರಿಗೆ ತಿಳಿಸಿಲ್ಲ ಎಂದು ಬಿಸಿಸಿಐ ವಿರುದ್ಧ ಆಸ್ಟ್ರೇಲಿಯಾದ ಮಾಜಿ ನಾಯಕಿ ಲಿಸಾ ಸ್ಥಾಲೇಕರ್ ಕಿಡಿ ಕಾಡಿದ್ದಾರೆ.
ಕರ್ನಾಟಕದ ವೇದಾ ಕೃಷ್ಣಮೂರ್ತಿಯ ಅವರ ತಾಯಿ ಮತ್ತು ಸಹೋದರಿ ವತ್ಸಲ ಶಿವಕುಮಾರ್ ಅವರನ್ನು ಎರಡು ವಾರಗಳ ಅಂತರದಲ್ಲಿ ಕಳೆದುಕೊಂಡಿದ್ದರು. ಅವರು ಕೋವಿಡ್-19 ಕಾರಣದಿಂದ ಸಾವನ್ನಪ್ಪಿದ್ದರು.
ಇನ್ನು, ದುಃಖದ ಸಂದರ್ಭದಲ್ಲಿ ಅವರನ್ನು ಬಿಸಿಸಿಐ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಯಾವುದೇ ಮಾದರಿಯ ತಂಡಕ್ಕೆ ಆಯ್ಕೆ ಮಾಡಿಲ್ಲ. ಆದರೆ, ಭಾರತಕ್ಕಾಗಿ ಆಡುತ್ತಿರುವ ಕ್ರಿಕೆಟರ್ ಮನೆಯಲ್ಲಿ ಇಷ್ಟೆಲ್ಲಾ ಆದರೂ ಅವರ ಬಗ್ಗೆ ಬಿಸಿಸಿಐ ನಡೆದುಕೊಂಡ ರೀತಿಯನ್ನು ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿರುವ ಸ್ಥಾಲೇಕರ್ ಖಂಡಿಸಿದ್ದಾರೆ.
-
There is still time to fix this!! pic.twitter.com/LT3hApMioJ
— Lisa Sthalekar (@sthalekar93) May 15, 2021 " class="align-text-top noRightClick twitterSection" data="
">There is still time to fix this!! pic.twitter.com/LT3hApMioJ
— Lisa Sthalekar (@sthalekar93) May 15, 2021There is still time to fix this!! pic.twitter.com/LT3hApMioJ
— Lisa Sthalekar (@sthalekar93) May 15, 2021
" ಮುಂಬರುವ ಸರಣಿಗೆ ವೇದಾರನ್ನು ಆಯ್ಕೆ ಮಾಡದಿದ್ದನ್ನು ಅವರ ದೃಷ್ಟಿಕೋನದಿಂದ ಸಮರ್ಥಿಸಬಹುದಾಗಿದೆ. ಆದರೆ ಗುತ್ತಿಗೆ ಆಟಗಾರಳಾಗಿ ಅವಳು ಕಷ್ಟದಲ್ಲಿರುವಾಗ ಬಿಸಿಸಿಐನಿಂದ ಯಾವುದೇ ಸಂವಹನವನ್ನು ಸ್ವೀಕರಿಸಲಿಲ್ಲ.
ಅವಳು ತನ್ನ ಕುಟುಂಬದಲ್ಲಿ ಉಂಟಾಗಿರುವ ದುರಂತವನ್ನು ಹೇಗೆ ನಿಭಾಯಿಸುತ್ತಿದ್ದಾಳೆ ಎಂಬುದನ್ನು ಪರೀಕ್ಷಿಸಲು ಸಹ ಬಿಸಿಸಿಐ ಮುಂದಾಗದಿರುವುದು ನನಗೆ ಹೆಚ್ಚು ಕೋಪ ತಂದಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಿಜವಾದ ಅಸೋಸಿಯೇಷನ್ ತಮ್ಮ ಆಟಗಾರರ ಬಗ್ಗೆ ಆಳವಾಗಿ ಕಾಳಜಿ ವಹಿಸಬೇಕು, ಕೇವಲ ಯಾವುದೇ ಕೇವಲ ಆಟದ ಮೇಲೆ ಮಾತ್ರ ಗಮನಹರಿಸಬಾರದು. ಆದ್ದರಿಂದ ಬಿಸಿಸಿಐ ನಡೆಯಿಂದ ನಾನು ನಿರಾಶೆಗೊಂಡಿದ್ದೇನೆ " ಎಂದು ಅವರು ಬರೆದುಕೊಂಡಿದ್ದಾರೆ.
ನಾನೊಬ್ಬಳು ಎಸಿಎ (ಆಸ್ಟ್ರೇಲಿಯನ್ ಕ್ರಿಕೆಟಿಗರ ಸಂಘ) ದ ಮಾಜಿ ಆಟಗಾರ್ತಿಯಾಗಿರುವುದರಿಂದ, ಅಲ್ಲಿ ಆಟಗಾರರ ಹೇಗಿದ್ದಾರೆಂದು ಪ್ರತಿದಿನವೂ ಅಲೋಚಿಸಲಾಗುತ್ತದೆ ಮತ್ತು ಎಲ್ಲಾ ರೀತಿಯ ಸೇವೆಗಳನ್ನು ಒದಗಿಸಲಾಗುತ್ತದೆ. ಇದೀಗ ಖಂಡಿತ ಭಾರತದಲ್ಲೂ ಆಟಗಾರರ ಸಂಘದ ಅಗತ್ಯವಿದೆ ಎಂದು ಸ್ಥಾಲೇಕರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಕೋವಿಡ್ಗೆ ಬಲಿಯಾದ ತಾಯಿ-ಸಹೋದರಿ ಕುರಿತು ಭಾವನಾತ್ಮಕ ಪತ್ರ ಬರೆದ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ