ಚಂಡೀಗಢ (ಪಂಜಾಬ್): ಇಂಗ್ಲೆಂಡ್ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್‌ನಿಂದ ಫಿಟ್‌ನೆಸ್ ಕ್ಲಿಯರೆನ್ಸ್‌ಗಾಗಿ ಕಾಯುತ್ತಿರುವ ಕಾರಣ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ವರದಿಯಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡ ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬುಧವಾರದ ವರೆಗೆ ಫಿಟ್‌ನೆಸ್ ಕ್ಲಿಯರೆನ್ಸ್ ನೀಡಿಲ್ಲ.
ಪಿಬಿಕೆಎಸ್ ತನ್ನ ಐಪಿಎಲ್ನ ಮೊದಲ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಏಪ್ರಿಲ್ 1 ರಿಂದ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನ ತವರು ಮೈದಾನದಲ್ಲಿ ಪ್ರಾರಂಭಿಸಲಿದೆ. ಲಿವಿಂಗ್‌ಸ್ಟೋನ್ ತನ್ನ ಆಲ್-ರೌಂಡ್ ಸಾಮರ್ಥ್ಯದಿಂದಾಗಿ ಪಂಜಾಬ್ ಕಿಂಗ್ಸ್ನ ಪ್ರಮುಖ ಭಾಗವಾಗಿದೆ. ಡಿಸೆಂಬರ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ನಂತರ ಅವರು ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಅನ್ನು ಆಡಿಲ್ಲ.
ಲಿವಿಂಗ್‌ಸ್ಟೋನ್ ಐಪಿಎಲ್ 2022ರಲ್ಲಿ ಪಂಜಾಬ್ ಕಿಂಗ್ಸ್ಗಾಗಿ ಪರ ಆಡಿದ ಲಿವಿಂಗ್‌ಸ್ಟೋನ್ 14 ಪಂದ್ಯಗಳಲ್ಲಿ 36.41ರ ಸರಾಸರಿಯಲ್ಲಿ 437 ರನ್ ಗಳಿಸಿದ್ದು, 182.08 ರ ಬೃಹತ್ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರ ವೈಯುಕ್ತಿಕ ಅತ್ಯುತ್ತಮ ಸ್ಕೋರ್ 70 ರನ್ ಆಗಿದೆ. ಕಳೆದ ವರ್ಷ ನಾಲ್ಕು ಅರ್ಧ ಶತಕಗಳನ್ನು ಗಳಿಸಿದ್ದರು. ಅವರು ಬೌಲಿಂಗ್‌ನಿಂದ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿವಿಂಗ್‌ಸ್ಟೋನ್ 12 ಏಕದಿನ ಪಂದ್ಯಗಳು ಮತ್ತು 29 ಟಿ20 ಅಂತರಾಷ್ಟ್ರೀಯ ಮ್ಯಾಚ್ಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಶತಕ ಗಳಿಸಿದ ದಾಖಲೆಯನ್ನೂ ಮಾಡಿದ್ದಾರೆ.
ಕಳೆದ ವರ್ಷ ಹರಾಜಿನಲ್ಲಿ 18.50 ಕೋಟಿ ರೂ.ಗೆ ಖರೀದಿಸಿದ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಸ್ಯಾಮ್ ಕುರ್ರಾನ್ ಪಿಬಿಕೆಎಸ್ ತಂಡವನ್ನು ಸೇರಿಕೊಂಡಿದ್ದಾರೆ ಮತ್ತು ತಂಡದಲ್ಲಿ ಉಳಿದಿರುವ ಏಕೈಕ ಇಂಗ್ಲಿಷ್ ಆಟಗಾರಾಗಿದ್ದಾರೆ. ಜಾನಿ ಬೈರ್‌ಸ್ಟೋವ್ ಅವರು ಗಾಯದ ಸಮಸ್ಯೆಯ ಕಾರಣ ಸ್ಪರ್ಧೆಯಿಂದ ಹೊರಗಿದ್ದಾರೆ. ಅವರ ಬದಲಿಯಾಗಿ ತಂಡಕ್ಕೆ ಆಸ್ಟ್ರೇಲಿಯಾದ ಮ್ಯಾಥ್ಯೂ ಶಾರ್ಟ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಮ್ಯಾಥ್ಯೂ ಶಾರ್ಟ್ ಅವರು ಬಿಗ್ ಬ್ಯಾಷ್ ಲೀಗ್ (BBL) 2022-23ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಅನ್ನು ಪ್ರತಿನಿಧಿಸಿದ್ದು, 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದರು. ಅವರು 14 ಪಂದ್ಯಗಳಲ್ಲಿ 35.23 ಸರಾಸರಿಯಲ್ಲಿ 458 ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಬಿಬಿಎಲ್ನಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕ ಗಳಿಸಿದ್ದು, ಅಜೇಯ 100 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ.
ಕಗಿಸೊ ರಬಾಡ ಕೂಡ ಮಿಸ್: ಲಿವಿಂಗ್‌ಸ್ಟೋನ್ ಜೊತೆಗೆ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ರಬಾಡ ಏಪ್ರಿಲ್ 3 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆಗೆ ಭಾರತಕ್ಕೆ ತಲುಪಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಡೆಲ್ಲಿಗೆ ರಿಷಬ್ ಪಂತ್ ಬದಲಿಗೆ ಇವರು.. ಬ್ಯಾಟಿಂಗ್, ಕೀಪಿಂಗ್ ಮಾಡಬಲ್ಲ ಮುಂದಿನ ಇಂಡಿಯನ್ ಸ್ಟಾರ್