ETV Bharat / sports

ಬೆಂಗಳೂರು ಟಿ20 ಪಂದ್ಯದ ಶೇ.50ರಷ್ಟು ಟಿಕೆಟ್ ಹಣ ಮರಳಿಸಲಿದೆ ಕೆಎಸ್​ಸಿಎ

author img

By

Published : Jun 20, 2022, 6:12 PM IST

ಮಳೆಯಿಂದ ರದ್ದಾದ ಬೆಂಗಳೂರು ಟಿ20 ಪಂದ್ಯದ ಟಿಕೆಟ್ ಹಣದ ಶೇ.50ರಷ್ಟು ಮೊತ್ತವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮರುಪಾವತಿಸಲಿದೆ.

ಬೆಂಗಳೂರು: ಮಳೆಯಿಂದಾಗಿ ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯವು ಕೆಲ ಓವರ್​ಗಳ ಆಟದ ಬಳಿಕ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಹಣದ ಶೇ.50ರಷ್ಟು ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

5 ಪಂದ್ಯಗಳ ಸರಣಿಯ ಅಂತಿಮ ಪಂದ್ಯ ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 3.3 ಓವರ್​​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು. ಈ ಹಂತದಲ್ಲಿ ಮಳೆ ಅಬ್ಬರ ಜೋರಾಯಿತು. ಬಳಿಕ ವರುಣ ನಿಲ್ಲದ ಕಾರಣ ಅಂತಿಮವಾಗಿ ಪಂದ್ಯ ರದ್ದುಗೊಂಡಿತ್ತು.

ನಿಯಮಾವಳಿಗಳ ಪ್ರಕಾರ ಕೇವಲ ಒಂದೇ ಒಂದು ಬಾಲ್ ಎಸೆದಿದ್ದರೂ ಟಿಕೆಟ್ ಹಣ ಮರುಪಾವತಿ ಮಾಡುವುದಿಲ್ಲ. ಆದರೆ ಅಭಿಮಾನಿಗಳಿಗಾಗಿ ಈ ಸಲ ಟಿಕೆಟ್ ಹಣದ 50% ನೀಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಖಜಾಂಚಿ ವಿನಯ್ ಮೃತ್ಯುಂಜಯ ಹೇಳಿದ್ದಾರೆ.

ಟಿಕೆಟ್ ನೀಡಿ ಹಣ ಪಡೆಯಿರಿ: ರೀಫಂಡ್​ನ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಹಣ ನೀಡಿ ಖರೀದಿಸಿರುವ ಒರಿಜಿನಲ್ ಟಿಕೆಟ್​​ಗಳನ್ನು ಪ್ರೇಕ್ಷಕರು ಮರುಪಾವತಿ ವೇಳೆ ನೀಡಬೇಕಾಗುತ್ತದೆ ಎಂದು ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಲು ಬಂದ ಮೈದಾನ ಸಿಬ್ಬಂದಿ ದೂಡಿದ ಋತುರಾಜ್​ ಗಾಯಕ್ವಾಡ್​.. ವಿಡಿಯೋ ವೈರಲ್, ಭಾರಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.