ETV Bharat / sports

ಕೆಲವೇ ಕ್ರಿಕೆಟಿಗರು ಫ್ರಾಂಚೈಸಿಗೆ ನೀಡಲು ಸಾಧ್ಯವಾಗುವ ಕೊಡುಗೆಯನ್ನು ಕೊಹ್ಲಿ ಆರ್​ಸಿಬಿಗೆ ನೀಡಿದ್ದಾರೆ : ಗವಾಸ್ಕರ್​ - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಡಾನ್​ ಬ್ರಾಡ್ಮನ್ ನಿವೃತ್ತಿ ಇನ್ನಿಂಗ್ಸ್​ನಲ್ಲಿ​ ಕೇವಲ 4 ರನ್​ಗಳಿಸಿದ್ದರೆ ಅವರ ಸರಾಸರಿ 100 ಆಗಿರುತ್ತಿತ್ತು. ಆದರೆ, ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಸಚಿನ್ ತೆಂಡೂಲ್ಕರ್​ ಮುಂಬೈನಲ್ಲಿ ತಮ್ಮ 200ನೇ ಟೆಸ್ಟ್​ ಪಂದ್ಯದಲ್ಲಿ ಶತಕ ಬಾರಿಸಬೇಕೆಂದು ಬಯಸಿದ್ದರು. ಆದರೆ, 74 ರನ್​ ಬಾರಿಸಿದ್ದರು. 74 ರನ್​ ಕೂಡ ಕಡಿಮೆಯಲ್ಲ. ಆದರೆ, ಕೆಲವರು ಅದಕ್ಕೆ ಕೆಲವು 21 ರನ್​ ಸೇರಿಸಿದ್ದರೆ ಶತಕವಾಗುತ್ತಿತ್ತು ಎಂದು ಭಾವಿಸುತ್ತಾರೆ. ಅಂದು ಅವರ ವೃತ್ತಿ ಜೀವನ ಅಂತ್ಯವಾಗಿತ್ತು..

Kohli has given RCB a profile
ವಿರಾಟ್ ಕೊಹ್ಲಿ ಆರ್​ಸಿಬಿ
author img

By

Published : Oct 12, 2021, 8:38 PM IST

ದುಬೈ: ಕೊಹ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ನಾಯಕತ್ವದಲ್ಲಿ ತಮಗಿಷ್ಟವಾದದ್ದನ್ನು ನೀಡಲು ಸಾಧ್ಯವಾಗದಿದ್ದರೂ ಸಹ ಫ್ರಾಂಚೈಸಿಗೆ ಒಂದು ವಿಶಿಷ್ಟವಾದ ರೂಪುರೇಷೆ ನೀಡಿದ್ದಾರೆ. ಅದನ್ನು ಕೆಲವೇ ಕ್ರಿಕೆಟಿಗರಿಂದ ಮಾತ್ರ ನೀಡಲು ಸಾಧ್ಯ ಎಂದು ಲೆಜೆಂಡರಿ ಬ್ಯಾಟರ್​ ಸುನಿಲ್ ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ಸತತ 13 ವರ್ಷಗಳ ಕಾಲ ಆರ್​ಸಿಬಿಯಲ್ಲಿ ಆಡಿ, 9 ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ, ಈ ಬಾರಿ ಟ್ರೋಫಿ ಗೆಲ್ಲುವ ಕನಸನ್ನು ಸೋಮವಾರ ಎಲಿಮಿನೇಟರ್​ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲುವ ಮೂಲಕ ನುಚ್ಚುನೂರಾಯಿತು. ಆದರೆ, ಗವಾಸ್ಕರ್ ಮುಂದೆ ಹೀಗೆ ನಡೆಯುತ್ತದೆ ಎನ್ನುವುದನ್ನು ಯಾವುದೇ ಆಟಗಾರ ಬಯಸಿದ ರೀತಿಯಲ್ಲಿ ಬರೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.

ಅವರು(ಕೊಹ್ಲಿ) ಆರ್​ಸಿಬಿಗೆ ವಿಶೇಷವಾದ ಪ್ರೊಫೈಲ್ ನೀಡಿದ್ದಾರೆ. ಆ ರೀತಿ ಬ್ರ್ಯಾಂಡ್​ ಗುರುತಿಸುವಿಕೆಯನ್ನು ಕೆಲವೇ ಕ್ರಿಕೆಟಿಗರು ತಮ್ಮ ಫ್ರಾಂಚೈಸಿಗಳಿಗೆ ನೀಡಲು ಸಾಧ್ಯ ಎಂದು ಗವಾಸ್ಕರ್ ಹೇಳಿದ್ದಾರೆ.

ಗವಾಸ್ಕರ್​ ಆರ್​ಸಿಬಿ ನಾಯಕನನ್ನು ಕ್ರಿಕೆಟ್​ ಶ್ರೇಷ್ಠರಾದ ಬ್ರಾಡ್ಮನ್​ ಮತ್ತು ಸಚಿನ್ ತೆಂಡೂಲ್ಕರ್​ ಅವರಿಗೆ ಹೋಲಿಸಿದ್ದು, ಬೀಳ್ಕೊಡುಗೆ ಕೆಲವೊಮ್ಮೆ ನಾವಂದುಕೊಂಡ ಹಾಗೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಡಾನ್​ ಬ್ರಾಡ್ಮನ್ ನಿವೃತ್ತಿ ಇನ್ನಿಂಗ್ಸ್​ನಲ್ಲಿ​ ಕೇವಲ 4 ರನ್​ಗಳಿಸಿದ್ದರೆ ಅವರ ಸರಾಸರಿ 100 ಆಗಿರುತ್ತಿತ್ತು. ಆದರೆ, ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಸಚಿನ್ ತೆಂಡೂಲ್ಕರ್​ ಮುಂಬೈನಲ್ಲಿ ತಮ್ಮ 200ನೇ ಟೆಸ್ಟ್​ ಪಂದ್ಯದಲ್ಲಿ ಶತಕ ಬಾರಿಸಬೇಕೆಂದು ಬಯಸಿದ್ದರು. ಆದರೆ, 74 ರನ್​ ಬಾರಿಸಿದ್ದರು. 74 ರನ್​ ಕೂಡ ಕಡಿಮೆಯಲ್ಲ. ಆದರೆ, ಕೆಲವರು ಅದಕ್ಕೆ ಕೆಲವು 21 ರನ್​ ಸೇರಿಸಿದ್ದರೆ ಶತಕವಾಗುತ್ತಿತ್ತು ಎಂದು ಭಾವಿಸುತ್ತಾರೆ. ಅಂದು ಅವರ ವೃತ್ತಿ ಜೀವನ ಅಂತ್ಯವಾಗಿತ್ತು.

ಹಾಗಾಗಿ, ಯಾವಾಗಲೂ ನಾವಂದುಕೊಂಡ ಹಾಗೆ ಎಲ್ಲವೂ ನಡೆಯಲ್ಲ ಮತ್ತು ಉತ್ತುಂಗಕ್ಕೇರುವ ಮಹಾನ್ ಅದೃಷ್ಟವನ್ನು ಪ್ರತಿಯೊಬ್ಬರು ಹೊಂದಿರುವುದಿಲ್ಲ. ಆದರೆ, ಕೊಹ್ಲಿ ಆರ್​ಸಿಬಿಗೆ ಏನಾದರೂ ವಿವಾದ ಮಾಡಿದ್ದಾರೆ ಎಂದು ಹೇಳಬಹುದೇ? ಖಂಡಿತ ಅವರು ಫ್ರಾಂಚೈಸಿಗೆ ಅದ್ಭುತ ಕೊಡುಗೆ ನೀಡಿದ್ದಾರೆ.

ಅವರೂ ಒಂದು ವರ್ಷ 973 ರನ್​ಗಳಿಸಿದ್ದರು, 1000ಕ್ಕೆ ಕೇವಲ 27 ರನ್​ಗಳು ಕಡಿಮೆಯಾಗಿದ್ದವು. ಇದು ಯಾರಿಂದಲೂ ಇದು ಸಾಧ್ಯವಾಗಿಲ್ಲ. ಮುಂದೆಯೂ ಐಪಿಎಲ್​ನಲ್ಲಿ ಯಾರಿಂದಲೂ 1000 ರನ್​ಗಳಿಸಲು ಸಾಧ್ಯವಿಲ್ಲ ಎಂದು ಗವಾಸ್ಕರ್​ ಆರ್​ಸಿಬಿಗೆ ಕೊಹ್ಲಿ ನೀಡಿರುವ ಕೊಡುಗೆಯನ್ನು ತಿಳಿಸಿದ್ದಾರೆ.

ಇದನ್ನು ಓದಿ:ಮತ್ತೊಂದು ವೈಫಲ್ಯದೊಂದಿಗೆ ಕೊಹ್ಲಿ ನಾಯಕತ್ವ ಅಂತ್ಯ.. ಆರ್​ಸಿಬಿಯ ಮುಂದಿದೆ ಬಲಿಷ್ಠ ತಂಡ ಕಟ್ಟುವ ಸವಾಲು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.