ಡರ್ಹಮ್: ಸಣ್ಣ ಗಾಯದ ಕಾರಣ ಕೌಂಟಿ ಇಲೆವೆನ್ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗುರುವಾರ ನೆಟ್ಸ್ನಲ್ಲಿ ಮೀಸಲು ಬೌಲರ್ಗಳಾದ ಪ್ರಸಿದ್ ಕೃಷ್ಣ ಮತ್ತು ಅರ್ಜಾನ್ ನಾಗ್ವಾಸ್ವಲ್ಲಾ ಅವರ ಬೌಲಿಂಗ್ ಎದುರಿಸಿದ್ದಾರೆ.
ಮಂಗಳವಾರದಿಂದ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಭಾಗವಹಿಸಿರಲಿಲ್ಲ. ಇಬ್ಬರಿಗೂ ಸಣ್ಣ ಪ್ರಮಾಣದ ಗಾಯಗಳಾಗಿರುವುದರಿಂದ ವಿಶ್ರಾಂತಿಯಲ್ಲಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು. ಬುಧವಾರವೂ ಕೂಡ ಕೇವಲ 30 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ್ದರು. ಇದೀಗ ಇಂದು ಇಬ್ಬರು ಯುವ ಬೌಲರ್ಗಳಿಬ್ಬರ ಜೊತೆಗೆ ಅಭ್ಯಾಸ ಮಾಡುತ್ತಿರುವುದನ್ನು ಅಭ್ಯಾಸ ಪಂದ್ಯದ ನೇರ ಪ್ರಸಾರದ ವೇಳೆ ಕಂಡುಬಂದಿದೆ.
-
Captain @imVkohli batting = Pure bliss #TeamIndia pic.twitter.com/5EUDxhLwgJ
— BCCI (@BCCI) July 21, 2021 " class="align-text-top noRightClick twitterSection" data="
">Captain @imVkohli batting = Pure bliss #TeamIndia pic.twitter.com/5EUDxhLwgJ
— BCCI (@BCCI) July 21, 2021Captain @imVkohli batting = Pure bliss #TeamIndia pic.twitter.com/5EUDxhLwgJ
— BCCI (@BCCI) July 21, 2021
ಇನ್ನು ಅಬ್ಯಾಸ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ 93 ಓವರ್ಗಳಲ್ಲಿ 311 ರನ್ಗಳಿಸಿತ್ತು. ಕನ್ನಡಿಗ ಕೆಎಲ್ ರಾಹುಲ್ 101 ರನ್ಗಳಿಸಿದರೆ, ಜಡೇಜಾ 75 ರನ್ಗಳಿಸಿದ್ದರು. ಬೌಲಿಂಗ್ನಲ್ಲಿ ಮಿಂಚಿದ್ದ ಉಮೇಶ್ ಯಾದವ್ 22ಕ್ಕೆ 3, ಸಿರಾಹ್ 32ಕ್ಕೆ2 ವಿಕೆಟ್ ಪಡೆದರೆ, ಶಾರ್ದುಲ್ ಠಾಕೂರ್, ಜಡೇಜಾ, ಅಕ್ಷರ್ ಮತ್ತು ಬುಮ್ರಾ ತಲಾ ಒಂದು ವಿಕೆಟ್ ಪಡೆದಿದ್ದರು.
ಕೊನೆಯ ದಿನವಾದ ಇಂದು 2ನೇ ಇನ್ನಿಂಗ್ಸ್ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ 47 ರನ್ಗಳಿಸಿದರೆ, ಪೂಜಾರ 38 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಭಾರತ 32 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 113 ರನ್ಗಳಿಸಿದೆ.
ಇದನ್ನೂ ಓದಿ:IND vs ENG ಗಾಯಗೊಂಡು ಇಂಗ್ಲೆಂಡ್ ಸರಣಿಯಿಂದಲೇ ಹೊರಬಿದ್ದ ವಾಷಿಂಗ್ಟನ್ ಸುಂದರ್