ಮುಂಬೈ (ಮಹಾರಾಷ್ಟ್ರ): ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ ಗಾಯದಿಂದ ಚೇತರಿಸಿಕೊಂಡು ತಂಡ ಸೇರಿದ್ದ ಶ್ರೇಯಸ್ ಅಯ್ಯರ್ ಮತ್ತೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿ ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಕಳೆದುಕೊಂಡಿದ್ದರು. ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದ ರಾಹುಲ್ ಫೀಲ್ಡಿಂಗ್ ವೇಳೆ ಬಿದ್ದು ಗಾಯಕ್ಕೆ ತುತ್ತಾಗಿದ್ದರು. ಈ ಇಬ್ಬರ ಅನುಪಸ್ಥಿತಿಯಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿ ಕಾಣಿಸಿಕೊಂಡಿತ್ತು.
ಇಬ್ಬರೂ ಶಸ್ತ್ರಚಿಕಿತ್ಸೆಗೆ ಒಳಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಚೇತರಿಸಿಕೊಂಡಿದ್ದು, ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದಾರೆ. ಇವರ ಚೇತರಿಕೆಯ ಕುರಿತು ಏಷ್ಯಾಕಪ್ನ ತಂಡ ಪ್ರಕಟಿಸುವ ಸಂದರ್ಭದಲ್ಲಿ ಅಜಿತ್ ಅಗರ್ಕರ್ ಮಾಹಿತಿ ನೀಡಿದರು. ಏಷ್ಯಾಕಪ್ ವೇಳೆಗೆ ಶ್ರೇಯಸ್ ಅಯ್ಯರ್ ಫಿಟ್ ಆಗಿದ್ದಾರೆ. ಆದರೆ ಕೆ.ಎಲ್. ರಾಹುಲ್ ಏಷ್ಯಾಕಪ್ನ ಎರಡು ಅಥವಾ ಮೂರು ಪಂದ್ಯಗಳ ನಂತರ ಫಿಟ್ ಆಗಲಿದ್ದಾರೆ ಎಂದು ಹೇಳಿದರು.
-
🗣️ "It's about the entire batting unit coming together and getting the job done."#TeamIndia captain @ImRo45#AsiaCup2023 pic.twitter.com/qZRv4za7k4
— BCCI (@BCCI) August 21, 2023 " class="align-text-top noRightClick twitterSection" data="
">🗣️ "It's about the entire batting unit coming together and getting the job done."#TeamIndia captain @ImRo45#AsiaCup2023 pic.twitter.com/qZRv4za7k4
— BCCI (@BCCI) August 21, 2023🗣️ "It's about the entire batting unit coming together and getting the job done."#TeamIndia captain @ImRo45#AsiaCup2023 pic.twitter.com/qZRv4za7k4
— BCCI (@BCCI) August 21, 2023
ಆಗಸ್ಟ್ 23ರಿಂದ ಏಷ್ಯಾಕಪ್ ತಯಾರಿ ಎನ್ಸಿಎಯಲ್ಲಿ ನಡೆಯಲಿದೆ. ಈ ವೇಳೆ ನಾಲ್ಕು ಮತ್ತು ಐದನೇ ಕ್ರಮಾಂಕದ ಬ್ಯಾಟರ್ಗೆ ಕೆಲ ಪ್ರಯೋಗಗಳನ್ನು ಮಾಡಿಸುವ ಸಾಧ್ಯತೆ ಇದೆ. ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಪೈಪೋಟಿಯಲ್ಲಿದ್ದಾರೆ. ಭಾರತದ ಪಂದ್ಯಗಳು ಲಂಕಾದಲ್ಲಿ ಇರುವುದರಿಂದ 27ರ ವೇಳೆಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
ಪಾಕ್ ವಿರುದ್ಧ ತಿಲಕ್ ಪಾದಾರ್ಪಣೆ?: ಆರಂಭಿಕ ಕೆಲವು ಪಂದ್ಯಗಳಿಗೆ ರಾಹುಲ್ ಲಭ್ಯತೆ ಅನುಮಾನ ಎಂದು ಅಗರ್ಕರ್ ಹೇಳಿರುವುದರಿಂದ ತಿಲಕ್ ವರ್ಮಾ ಪಾಕಿಸ್ತಾನದ ವಿರುದ್ಧ ಸಪ್ಟೆಂಬರ್ 2 ರಂದು ನಡೆಯುವ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆ ಇದೆ. ತಿಲಕ್ ಮೇಲೆ ತಂಡದಲ್ಲಿ ಹೆಚ್ಚಿನ ಭರವಸೆ ಇದೆ ಹೀಗಾಗಿ ಹೊಸ ಪ್ರಯೋಗ ಮಾಡುವ ನಿರೀಕ್ಷೆ ಇದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರೋಹಿತ್ ಶರ್ಮಾ 4 ಮತ್ತು 5ನೇ ಕ್ರಮಾಂಕದ ಬ್ಯಾಟರ್ಗಳಿಂದ ಮಾತ್ರ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಮೊದಲ ಮೂವರಿಂದ ಹಿಡಿದು ತಂಡ ಎಂಟನೇ ಬ್ಯಾಟರ್ವರೆಗೂ ರನ್ ಗಳಿಸಬೇಕು. ಬೌಲರ್ಗಳು ಅವರ ಪಾತ್ರ ನಿಭಾಯಿಸಿದಲ್ಲಿ ಗೆಲುವು ಸಾಧ್ಯ. ವಿಶ್ವಕಪ್ಗೂ ಮುನ್ನ ಭಾರತ ತಂಡ ಆರರಿಂದ ಏಳು ಏಕದಿನ ಪಂದ್ಯ ಆಡುವುದರಿಂದ ಮಧ್ಯಮ ಕ್ರಮಾಂಕದ ಜೋಡಿಯನ್ನು ಹುಡುಕಲು ಸಾಧ್ಯವಾಗುತ್ತದೆ. ಹೀಗಾಗಿ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಮಧ್ಯಮ ಕ್ರಮಾಂಕಕ್ಕೆ ಕೆಲ ಪ್ರಯೋಗಗಳು ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: India Asia Cup 2023 Squad: ತಂಡಕ್ಕೆ ಮರಳಿದ ರಾಹುಲ್, ಅಯ್ಯರ್.. ಏಷ್ಯಾಕಪ್ನಲ್ಲಿ ಏಕದಿನಕ್ಕೆ ತಿಲಕ್ ಪದಾರ್ಪಣೆ