ನವದೆಹಲಿ: ಕೆ.ಎಲ್.ರಾಹುಲ್ ರನ್ ಬರ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಮುಂದುವರೆದಿದೆ. ಆದರೂ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಮೊದಲ ಟೆಸ್ಟ್ನಲ್ಲಿ ಕೆಎಲ್ಆರ್ ವೈಫಲ್ಯಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿ ಆಯ್ಕೆಗಾರರ ಮೇಲೆ ಅಸಮಾಧಾನ ಹೊರಹಾಕಿದ್ದರು. ಇದೀಗ ಎರಡನೇ ಟೆಸ್ಟ್ನಲ್ಲೂ ಮತ್ತೆ ಅವರು ಎಡವಿದ್ದಾರೆ. ಹೀಗಾಗಿ, "ರಾಹುಲ್ ತಂಡ ಸೇರ್ಪಡೆಯಿಂದ ಅನೇಕ ಯುವ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ" ಎಂದು ವೆಂಕಟೇಶ್ ಪ್ರಸಾದ್ ಕಿಡಿ ಕಾರಿದ್ದಾರೆ.
ಲೋಕೇಶ್ ರಾಹುಲ್ ಅವರು ಪ್ರಸಕ್ತ ಸಾಲಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ 71 ಎಸೆತಗಳನ್ನು ಎದುರಿಸಿ ಕೇವಲ 20 ರನ್ಗಳಿಸಿದ್ದರು. ಎರಡನೇ ಮ್ಯಾಚ್ನ ಮೊದಲ ಇನ್ನಿಂಗ್ಸ್ನಲ್ಲಿ 41 ಚೆಂಡುಗಳಲ್ಲಿ ಒಂದು ಸಿಕ್ಸ್ ಸಹಿತ 17 ರನ್ಗಳಿಸಿ ಔಟಾಗಿದ್ದರು. 2022 ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟೆಸ್ಟ್ನಲ್ಲಿ ಅರ್ಧಶತಕ ಗಳಿಸಿದ್ದರು. ಅದೇ ಸರಣಿಯಲ್ಲಿ ಶತಕ ದಾಖಲಿಸಿದ್ದರು. ಇದಾದ ನಂತರ ಅವರ ಬ್ಯಾಟ್‌ನಿಂದ ಹೆಚ್ಚು ರನ್ ಹರಿದುಬಂದಿಲ್ಲ. ಸುಮಾರು ಒಂದು ವರ್ಷದಿಂದೀಟೆಗೆ ಅವರು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವುತ್ತಿದ್ದಾರೆ.
ಹೀಗಾಗಿ, ರಾಹುಲ್‌ಗೆ ನೀಡಲಾಗುತ್ತಿರುವ ಅವಕಾಶಗಳಿಗೆ ಟೀಕೆಗಳು ಹೆಚ್ಚಾಗುತ್ತಿವೆ. ಫಾರ್ಮ್ನಲ್ಲಿರುವ ಬ್ಯಾಟರ್ಗಳಿಗೆ ಟೀಂನಲ್ಲಿ ಸ್ಥಾನವೇ ಸಿಗುತ್ತಿಲ್ಲ ಎಂದು ಆಯ್ಕೆಗಾರರ ನಡೆಯನ್ನು ಟೀಕಿಸಲಾಗುತ್ತಿದೆ. 47 ಟೆಸ್ಟ್ ಆಡಿರುವ ರಾಹುಲ್ 2,641 ರನ್ಗಳಿಸಿದ್ದು, 33.08 ರ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. 51 ಸ್ಟ್ರೈಕ್ ರೇಟ್ನಲ್ಲಿ 7 ಶತಕ ಮತ್ತು 13 ಅರ್ಧಶತಕ ದಾಖಲಿಸಿದ್ದಾರೆ.
-
And the torrid run continues. More to do with rigidity of the management to persist with a player who just hasn’t looked the part. No top order batsman in atleast last 20 years of Indian cricket has played these many tests with such a low average. His inclusion is …. https://t.co/WLe720nYNJ
— Venkatesh Prasad (@venkateshprasad) February 18, 2023 " class="align-text-top noRightClick twitterSection" data="
">And the torrid run continues. More to do with rigidity of the management to persist with a player who just hasn’t looked the part. No top order batsman in atleast last 20 years of Indian cricket has played these many tests with such a low average. His inclusion is …. https://t.co/WLe720nYNJ
— Venkatesh Prasad (@venkateshprasad) February 18, 2023And the torrid run continues. More to do with rigidity of the management to persist with a player who just hasn’t looked the part. No top order batsman in atleast last 20 years of Indian cricket has played these many tests with such a low average. His inclusion is …. https://t.co/WLe720nYNJ
— Venkatesh Prasad (@venkateshprasad) February 18, 2023
ಟೆಸ್ಟ್ನಲ್ಲಿ ರನ್ಗಳಿಸಲು ವಿಫಲವಾಗಿರುವ ಕ್ರಿಕೆಟಿಗನ ಬಗ್ಗೆ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿ,"ಮತ್ತೆ ರನ್ ಬರ ಮುಂದುವರಿದಿದೆ. ಕಳೆದ 20 ವರ್ಷಗಳ ಭಾರತೀಯ ಕ್ರಿಕೆಟ್‌ನಲ್ಲಿ ಯಾವುದೇ ಅಗ್ರ ಕ್ರಮಾಂಕದ ಬ್ಯಾಟರ್ ಇಷ್ಟು ಕಳಪೆ ಆಟ ಆಡಿಲ್ಲ. ತಂಡಕ್ಕೆ ಇವರ ಸೇರ್ಪಡೆಯಿಂದಾಗಿ ಬೇರೆ ಪ್ರತಿಭಾವಂತ ಆರಂಭಿಕ ಬ್ಯಾಟರ್ಗಳಿಗೆ ಅವಕಾಶವೇ ದೊರೆಯುತ್ತಿಲ್ಲ" ಎಂದಿದ್ದಾರೆ.
"ಶಿಖರ್ ಧವನ್ ಟೆಸ್ಟ್ ಸರಾಸರಿ 40+ ಇದೆ, ಮಯಾಂಕ್ ಅಗರ್ವಾಲ್ 2 ದ್ವಿಶತಕಗಳೊಂದಿಗೆ 41+ ಸರಾಸರಿ ಕಾಯ್ದುಕೊಂಡಿದ್ದಾರೆ. ಉತ್ತಮ ಫಾರ್ಮ್ನಲ್ಲಿ ಶುಭ್‌ಮನ್ ಗಿಲ್, ಸರ್ಫರಾಜ್ ಇದ್ದಾರೆ. ಇವರಲ್ಲದೇ ಅನೇಕ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಆರಂಭಿಕರಿದ್ದಾರೆ. ಅವರ (ರಾಹುಲ್) ಸೇರ್ಪಡೆಯು ನ್ಯಾಯದ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ"
"ನನ್ನ ಪ್ರಕಾರ, ಅವರು (ರಾಹುಲ್) ಪ್ರಸ್ತುತ ಭಾರತದಲ್ಲಿನ 10 ಅತ್ಯುತ್ತಮ ಓಪನರ್‌ಗಳ ಸ್ಥಾನದಲ್ಲಿಲ್ಲ. ಆದರೂ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ. ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರದರ್ಶನಗಳನ್ನು ನೀಡಿದರೂ ಮುಂದಿನ ಪಂದ್ಯಕ್ಕೆ ಆಯ್ಕೆ ಮಾಡಿರಲಿಲ್ಲ" ಎಂದು ವೆಂಕಟೇಶ್ ಪ್ರಸಾದ್ ಸರಣಿ ಟ್ವೀಟ್‌ನಲ್ಲಿ ಆಯ್ಕೆಗಾರರಿಗೆ ಚಾಟಿ ಬೀಸಿದ್ದಾರೆ. ಮೊದಲ ಪಂದ್ಯದಲ್ಲಿ ರಾಹುಲ್ ಕಡಿಮೆ ಮೊತ್ತಕ್ಕೆ ಔಟಾದಾಗಲೇ ವೆಂಕಟೇಶ್ ಪ್ರಸಾದ್ ಟ್ಟೀಟ್ ಮಾಡಿ ಟೆಸ್ಟ್ಗೆ ಪಾದಾರ್ಪಣೆ ಮಾಡಿ 8 ವರ್ಷ ಆದ ನಂತರ 33 ರ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ ಎಂದು ಗರಂ ಆಗಿದ್ದರು.
ಇದನ್ನೂ ಓದಿ: ಆರಂಭಿಕರ ಸ್ಥಾನಕ್ಕೆ ಬೇರೆ ಉತ್ತಮ ಆಟಗಾರಿದ್ದಾರೆ: ರಾಹುಲ್ ಬಗ್ಗೆ ವೆಂಕಟೇಶ್ ಪ್ರಸಾದ್ ಹೀಗೆ ಹೇಳಿದ್ದು ಯಾಕೆ?