ಅಹ್ಮದಾಬಾದ್: ಸತತ 4 ಪಂದ್ಯಗಳಿಂದ ಸೋತು ಕಂಗೆಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಣಿಸಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಟೂರ್ನಿಯ 3ನೇ ಲೆಗ್ ಅಹ್ಮದಾಬಾದ್ನಲ್ಲಿ ಇಂದಿನಿಂದ ಆರಂಭವಾಗುತ್ತಿದೆ. ಕೆಕೆಆರ್ ತನ್ನ ಕೊನೆಯ ಪಂದ್ಯದಲ್ಲಿ ಆಡಿಸಿದ್ದ ತಂಡವನ್ನೇ ಇಂದಿನ ಪಂದ್ಯದಲ್ಲೂ ಉಳಿಸಿಕೊಂಡಿದೆ. ಪಂಜಾಬ್ ಆಲ್ರೌಂಡರ್ ಫ್ಯಾಬಿಯನ್ ಅಲೆನ್ ಬದಲಿಗೆ ಕ್ರಿಸ್ ಜೋರ್ಡನ್ಗೆ ಅವಕಾಶ ನೀಡಿದೆ.
-
Toss Update: @KKRiders captain @Eoin16 wins the toss and opts to field first against @klrahul11's @PunjabKingsIPL. https://t.co/sBoaBIpF2J #PBKSvKKR #VIVOIPL pic.twitter.com/8ROKp824yI
— IndianPremierLeague (@IPL) April 26, 2021 " class="align-text-top noRightClick twitterSection" data="
">Toss Update: @KKRiders captain @Eoin16 wins the toss and opts to field first against @klrahul11's @PunjabKingsIPL. https://t.co/sBoaBIpF2J #PBKSvKKR #VIVOIPL pic.twitter.com/8ROKp824yI
— IndianPremierLeague (@IPL) April 26, 2021Toss Update: @KKRiders captain @Eoin16 wins the toss and opts to field first against @klrahul11's @PunjabKingsIPL. https://t.co/sBoaBIpF2J #PBKSvKKR #VIVOIPL pic.twitter.com/8ROKp824yI
— IndianPremierLeague (@IPL) April 26, 2021
ಮುಖಾಮುಖಿ
ಎರಡು ತಂಡಗಳು ಐಪಿಎಲ್ನಲ್ಲಿ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಕೆಕೆಆರ್ 18 ಮತ್ತು ಪಂಜಾಬ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ವರ್ಷ ಎರಡೂ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದವು.
ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ / ವಿಕೀ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಮೊಯಿಸಸ್ ಹೆನ್ರಿಕ್ಸ್, ಶಾರುಖ್ ಖಾನ್, ಜೇ ರಿಚರ್ಡ್ಸನ್ / ರಿಲೆ ಮೆರೆಡಿತ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್, ರವಿ ಬಿಷ್ಣೋಯ್
ಕೆಕೆಆರ್: ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್(ನಾಯಕ), ದಿನೇಶ್ ಕಾರ್ತಿಕ್ (ವಿಕೀ), ಸುನೀಲ್ ನರೈನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ವರುಣ್ ಚಕ್ರವರ್ತಿ, ಶಿವಂ ಮಾವಿ