ಮುಂಬೈ: ಉಮೇಶ್ ಯಾದವ್ರ ಬೆಂಕಿ ಉಗುಳುವಂತಹ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡ 18.2 ಓವರ್ಗಳಲ್ಲಿ 137 ರನ್ ಗಳಿಸಲು ಮಾತ್ರ ಶಕ್ತವಾಗಿ ಆಲೌಟ್ ಆಯಿತು. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಉಮೇಶ್ ಯಾದವ್ ತಮ್ಮ ತೋಳ್ಬಲ ಪ್ರದರ್ಶಿಸಿ ಕಿಂಗ್ಸ್ ಪತನಕ್ಕೆ ಕಾರಣವಾದರು. ಕೆಕೆಆರ್ನ ಯಾವೊಬ್ಬ ಬ್ಯಾಟ್ಸಮನ್ ಕೂಡ ಕನಿಷ್ಠ ಅರ್ಧಶತಕ ದಾಖಲಿಸಲಿಲ್ಲ.
ಆರಂಭಿಕನಾಗಿ ಕಣಕ್ಕಿಳಿದ ಪಂಜಾಬ್ ತಂಡದ ನಾಯಕ ಮಯಾಂಕ್ ಅಗರ್ವಾಲ್(1) ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದರು. ಶಿಖರ್ ಧವನ್(16), ಲೈಮ್ ಲಿವಿಂಗ್ಸ್ಟೋನ್(19), ರಾಜ್ ಬಾವಾ(11) ರನ್ ಗಳಿಸಲಷ್ಟೇ ಸಾಧ್ಯವಾಯಿತು.
-
Innings Break!@y_umesh leads the charge with the ball as #PBKS are bowled out for 137 in 18.2 overs 👏 👏#KKR chase to begin shortly.
— IndianPremierLeague (@IPL) April 1, 2022 " class="align-text-top noRightClick twitterSection" data="
Scorecard - https://t.co/lO2arKbxgf #KKRvPBKS #TATAIPL pic.twitter.com/tLLPAAKXKv
">Innings Break!@y_umesh leads the charge with the ball as #PBKS are bowled out for 137 in 18.2 overs 👏 👏#KKR chase to begin shortly.
— IndianPremierLeague (@IPL) April 1, 2022
Scorecard - https://t.co/lO2arKbxgf #KKRvPBKS #TATAIPL pic.twitter.com/tLLPAAKXKvInnings Break!@y_umesh leads the charge with the ball as #PBKS are bowled out for 137 in 18.2 overs 👏 👏#KKR chase to begin shortly.
— IndianPremierLeague (@IPL) April 1, 2022
Scorecard - https://t.co/lO2arKbxgf #KKRvPBKS #TATAIPL pic.twitter.com/tLLPAAKXKv
ರಾರಾಜಿಸಿದ ರಾಜಪಕ್ಸೆ: ಎಲ್ಲ ಬ್ಯಾಟ್ಸಮನ್ಗಳು ಪೆವಿಲಿಯನ್ ಪರೇಡ್ ಮಾಡುತ್ತಿದ್ದರೆ, ಇದೇ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಶ್ರೀಲಂಕಾದ ಭುನುಕಾ ರಾಜಪಕ್ಸೆ(31) 3 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೇ ತಂಡದ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು.
ರಬಾಡಾ ಮಿಂಚು: ಇನ್ನು ಒಂದರ ಹಿಂದೆ ಒಂದು ವಿಕೆಟ್ ಉರುಳುತ್ತಿದ್ದರೆ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಬಾಲಂಗೋಚಿ ಕಗಿಸೋ ರಬಾಡಾ 4 ಬೌಂಡರಿ, 1 ಭರ್ಜರಿ ಸಿಕ್ಸರ್ ಸಮೇತ 25 ರನ್ ಗಳಿಸಿದರು. ಕೆಕೆಆರ್ ಪರ ಉಮೇಶ್ ಯಾದವ್ 23 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಟಿಮ್ ಸೌಥಿ 2, ಸುನೀಲ್ ನರೈನ್ 1, ಶಿವಂ ಮಾವಿ 1, ರಸೆಲ್ 1 ವಿಕೆಟ್ ಪಡೆದು ಕೋಲ್ಕತ್ತಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಓದಿ: IPL 2022: ಪಂಜಾಬ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್