ETV Bharat / sports

ಭಾರತ vs ನ್ಯೂಜಿಲ್ಯಾಂಡ್ ಸರಣಿ ಅರ್ಥಹೀನ : ಮಿಚೆಲ್​ ಮೆಕ್‌ಕ್ಲೆನಾಘನ್ ಕಿಡಿ - ಭಾರತ vs ನ್ಯೂಜಿಲ್ಯಾಂಡ್ ಟಿ20 ಸರಣಿ

ವಿಶ್ವಕಪ್​ನಲ್ಲಿ ನವೆಂಬರ್​ 3 ರಿಂದ 14ರವರೆಗೆ 5 ಪಂದ್ಯಗಳನ್ನಾಡಿದ್ದ ಕಿವೀಸ್​, ವಿಶ್ವಕಪ್​ ಮುಗಿದ ಮೂರೇ ದಿನದಲ್ಲಿ ಭಾರತಕ್ಕೆ ಆಗಮಿಸಿ 5 ದಿನಗಳಲ್ಲಿ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಂಡಿದೆ. ಇದೇ ಕಾರಣಕ್ಕೆ ಕೇನ್​ ವಿಲಿಯಮ್ಸನ್​ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ..

ಮಿಚೆಲ್ ಮೆಕ್​​ಕ್ಲೆನಾಘನ್
ಮಿಚೆಲ್ ಮೆಕ್​​ಕ್ಲೆನಾಘನ್
author img

By

Published : Nov 20, 2021, 10:13 PM IST

ಆಕ್ಲೆಂಡ್​ : ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಪ್ರಸ್ತುತ ನಡೆಯುತ್ತಿರುವ ಟಿ20(ind vs nz t20 series) ಸರಣಿ ಅರ್ಥಹೀನವಾಗಿದೆ ಎಂದು ಕಿವೀಸ್​ ತಂಡದ ವೇಗಿ ಮಿಚೆಲ್ ಮೆಕ್​​ಕ್ಲೆನಾಘನ್(mitchell mcclenaghan)​ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ ಈಗಾಗಲೇ ನ್ಯೂಜಿಲ್ಯಾಂಡ್​ ವಿರುದ್ಧ ಸತತ ಎರಡು ಪಂದ್ಯಗಳನ್ನು ಗೆದ್ದು ಇನ್ನೊಂದು ಪಂದ್ಯ ಉಳಿದಿರುವಂತೆ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.

ಶುಕ್ರವಾರ ಎಬಿಡಿ ವಿಲಿಯರ್ಸ್(Ab ab de villiers)​ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಮಾಡಿದ್ದ ಟ್ವೀಟ್​ಗೆ ಮೆಕ್​ಕ್ಲೆನಾಘನ್ "ನಿಮ್ಮದು ಅದ್ಭುತವಾದ ವೃತ್ತಿ ಜೀವನ, 360 ಆಟದ ಮೂಲಕ ಬೌಲರ್​ಗಳಿಗೆ ಭಯ ತರುತ್ತಿದ್ದ ನಾಯಕ, ನೈಜ ಚಾಂಪಿಯನ್"​ ಎಂದು ಕಮೆಂಟ್​ ಮಾಡಿದ್ದರು.

ಈ ಟ್ವೀಟ್​ಗೆ ಅಭಿಮಾನಿಯೊಬ್ಬ ನ್ಯೂಜಿಲ್ಯಾಂಡ್​ ಸರಣಿಯನ್ನು ಕಳೆದುಕೊಂಡಿದೆ ಎಂದು ನಗುವಿನ ಇಮೋಜಿ ಮೂಲಕ ಕಮೆಂಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಮಿಚ್, "ಇದು ಅವರು ಮಾಡಿದ್ರ?ವಿಶ್ವಕಪ್ ಫೈನಲ್​ ಸೋಲಿನ ನಂತರ 72 ಗಂಟೆಗಳ ನಂತರ ಕೇವಲ 5 ದಿನಗಳಲ್ಲಿ 3 ಪಂದ್ಯಗಳ ಈ ಅರ್ಥಹೀನ ಸರಣಿ ಆಡಿದೆ. ಭಾರತ ತಂಡ 10 ದಿನಗಳ ವಿಶ್ರಾಂತಿ ಪಡೆದು ತವರಿನ ಪರಿಸ್ಥಿತಿಯಲ್ಲಿ ಆಡುವ ನೋವು ಅರ್ಥಮಾಡಿಕೊಂಡಿದ್ದೀರಾ?" ಎಂದು ಕಿಡಿ ಕಾರಿದ್ದಾರೆ.

ನ್ಯೂಜಿಲ್ಯಾಂಡ್​ ಕಳೆದ 21 ದಿನಗಳಲ್ಲಿ 8 ಪಂದ್ಯಗಳನ್ನಾಡಿದೆ. ವಿಶ್ವಕಪ್​ನಲ್ಲಿ ನವೆಂಬರ್​ 3 ರಿಂದ 14ರವರೆಗೆ 5 ಪಂದ್ಯಗಳನ್ನಾಡಿದ್ದ ಕಿವೀಸ್​, ವಿಶ್ವಕಪ್​ ಮುಗಿದ ಮೂರೇ ದಿನದಲ್ಲಿ ಭಾರತಕ್ಕೆ ಆಗಮಿಸಿ 5 ದಿನಗಳಲ್ಲಿ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಂಡಿದೆ. ಇದೇ ಕಾರಣಕ್ಕೆ ಕೇನ್​ ವಿಲಿಯಮ್ಸನ್​ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.

ಇದನ್ನು ಓದಿ:2022ರ ಐಪಿಎಲ್​ ನಡೆಯುವ ಸ್ಥಳ ಖಚಿತ ಪಡಿಸಿದ ಜಯ್ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.