ETV Bharat / sports

ಟಿ20ಯಲ್ಲಿ 600 ಪಂದ್ಯ ಆಡಿದ ಏಕೈಕ ಆಟಗಾರ: ಐತಿಹಾಸಿಕ ದಾಖಲೆ ಬರೆದ ಕಿರನ್ 'ಪೊ'ಲಾರ್ಡ್'

ಟಿ20 ಕ್ರಿಕೆಟ್​ನಲ್ಲಿ ವೆಸ್ಟ್​ ಇಂಡೀಸ್ ಕ್ರಿಕೆಟ್​ನ ದೈತ್ಯ ಆಟಗಾರ ಕೀರನ್​ ಪೊಲಾರ್ಡ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

Kieron Pollard
Kieron Pollard
author img

By

Published : Aug 9, 2022, 7:32 PM IST

ಹೈದರಾಬಾದ್​​: ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿರುವ ವೆಸ್ಟ್​ ಇಂಡೀಸ್​ ದೈತ್ಯ ಆಲ್​ರೌಂಡರ್ ಕೀರನ್ ಪೊಲಾರ್ಡ್ ಸದ್ಯ ವಿವಿಧ ಲೀಗ್​​ಗಳಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಈ ದಿಗ್ಗಜ ಆಟಗಾರ ಸದ್ಯ ಚುಟುಕು ಕ್ರಿಕೆಟ್​ನಲ್ಲಿ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ ಏಕೈಕ ಕ್ರಿಕೆಟರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

2006ರಲ್ಲಿ ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕೀರನ್ ಪೊಲಾರ್ಡ್​, ಕಳೆದ ಕೆಲ ತಿಂಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಣೆ ಮಾಡಿದ್ದರು. ಸದ್ಯ ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ಮ್ಯಾಂಚೆಸ್ಟರ್​​ ಒರಿಜಿನಲ್ಸ್ ತಂಡದ ವಿರುದ್ಧ ಆಡುವ ಮೂಲಕ ಹೊಸ ರೆಕಾರ್ಡ್ ಸೃಷ್ಟಿಸಿದ್ದಾರೆ. ಲಂಡನ್ ಸ್ಪಿರಿಟ್ ತಂಡದ ಪರ ಕಣಕ್ಕಿಳಿದು, 600 ಟಿ20 ಪಂದ್ಯ ಆಡಿರುವ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ಪಂದ್ಯದಲ್ಲಿ ತಾವು ಎದುರಿಸಿದ 11 ಎಸೆತಗಳಲ್ಲಿ ಒಂದು ಬೌಂಡರಿ, ನಾಲ್ಕು ಸಿಕ್ಸರ್ ಸಮೇತವಾಗಿ ಅಜೇಯ 34ರನ್​​ಗಳಿಸಿದ ಪೊಲಾರ್ಡ್​ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.

  • 600 games! What a milestone 🙌 Amazing achievement for an amazing player! Congratulations Polly 👏 @KieronPollard55

    — Jasprit Bumrah (@Jaspritbumrah93) August 9, 2022 " class="align-text-top noRightClick twitterSection" data=" ">

ವಿಶ್ ಮಾಡಿದ ಬುಮ್ರಾ: ಐತಿಹಾಸಿಕ ಮೈಲುಗಲ್ಲು ತಲುಪಿರುವ ಪೊಲಾರ್ಡ್​ಗೆ ಟ್ವಿಟರ್​ನಲ್ಲಿ ವಿಶ್ ಮಾಡಿರುವ ಬುಮ್ರಾ, 600 ಪಂದ್ಯಗಳು, ಐತಿಹಾಸಿಕ ಮೂಲಿಗಲ್ಲು. ಅಭಿನಂದನೆಗಳು ಪೊಲ್ಲಿ ಎಂದು ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಪೊಲಾರ್ಡ್ ಕಳೆದ ಒಂದು ದಶಕದಿಂದಲೂ ಆಡುತ್ತಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿರುವ ಇವರು, ಮುಂಬೈ ಐದು ಸಲ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ: T20 ಕ್ರಿಕಟ್​ನಲ್ಲಿ 300 ವಿಕೆಟ್​,10 ಸಾವಿರ ರನ್​.. ಈ ದಾಖಲೆ ನಿರ್ಮಿಸಿದ ಏಕೈಕ ಕ್ರಿಕೆಟಿಗ ಪೊ'ಲಾರ್ಡ್​'​!

ಪೊಲಾರ್ಡ್​ ತಮ್ಮ ಟಿ20 ಕೆರಿಯರ್​ನಲ್ಲಿ 600 ಪಂದ್ಯಗಳಿಂದ ದಾಖಲೆಯ 11,723 ರನ್​​ಗಳಿಕೆ ಮಾಡಿದ್ದು, 309 ವಿಕೆಟ್ ಪಡೆದುಕೊಂಡಿದ್ದಾರೆ. ಇದರಲ್ಲಿ 104 ವೈಯಕ್ತಿಕ ಗರಿಷ್ಠ ಸ್ಕೋರ್​ ಆಗಿದ್ದು, 55 ಅರ್ಧಶತಕ ಸೇರಿವೆ. ಪೊಲಾರ್ಡ್ ನಂತರ ವೆಸ್ಟ್​ ಇಂಡೀಸ್​ನ ಡ್ವೇನ್​ ಬ್ರಾವೋ ಹೆಚ್ಚಿನ ಟಿ20 ಪಂದ್ಯಗಳನ್ನಾಡಿದ್ದು, ಇವರು 453 ಚುಟುಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಉಳಿದಂತೆ ಪಾಕಿಸ್ತಾನದ ಶೊಯೆಬ್ ಮಲ್ಲಿಕ್​ 472, ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್​ 463 ಪಂದ್ಯ ಆಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.