ETV Bharat / sports

ಅಂದು ಕೋಚ್​ ಮಿಕ್ಕಿ ಆರ್ಥರ್​ಗೆ ಹೋಮ್​ವರ್ಕ್​ಗೇಟ್​ ಹೆಚ್ಚು ಮುಖ್ಯವಾಗಿತ್ತು : 2013ರ ಆ ದಿನಗಳನ್ನ ನೆನಪಿಸಿಕೊಂಡ ಖವಾಜಾ

author img

By

Published : Feb 8, 2023, 7:48 PM IST

ನಾಗ್ಪುರ ಟೆಸ್ಟ್​ಗೂ ಮುನ್ನ 2013ರ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ದಿನಗಳ ಬಗ್ಗೆ ಮೆಲುಕು ಹಾಕುವ ಮೂಲಕ ಹೋಮ್​ವರ್ಕ್​ಗೇಟ್​ನ ಬಗ್ಗೆ ಬೇಸರ ಹೊರ ಹಾಕಿದರು.

Khawaja
ಖವಾಜಾ

ನಾಗ್ಪುರ(ಮಹಾರಾಷ್ಟ್ರ): ಹತ್ತು ವರ್ಷಗಳ ಹಿಂದೆ ಅಂದರೆ 2013ರಲ್ಲಿ 'ಹೋಮ್​ವರ್ಕ್​ಗೇಟ್'​​ನಿಂದಾಗಿ ಆಟದಿಂದ ಹೊರಗುಳಿಯಬೇಕಾದ ಪರಿಸ್ಥಿತಿಯನ್ನು ಉಸ್ಮಾನ್ ಖವಾಜಾ ನೆನಪಿಸಿಕೊಂಡಿದ್ದಾರೆ. ಅಂದಿನ ಕೋಚ್​ನ ಆದ್ಯತೆಗಳು ಸ್ವಲ್ಪ ತಪ್ಪಾಗಿದ್ದವು. ಅಂದು ಉತ್ತಮವಾಗಿ ಆಡುವ ಬಗ್ಗೆ ಚಿಂತಿಸದೇ ಪ್ರಶ್ನೆಗಳಿಗೆ ಉತ್ತರ ಬರೆಯದೇ ಇದ್ದುದ್ದೇ ಗಭೀರವಾದ ಸಮಸ್ಯೆ ಆಗಿ ಕಾಡಿತ್ತು ಎಂದುು ಹೇಳಿದರು.

ಏನಿದು ಹೋಮ್​ ವರ್ಕ್​​ಗೇಟ್​: ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಭಾರತದ ಎದುರಿನ ಸೋಲಿನ ನಂತರ ಖವಾಜಾ ಅವರು ಮೊಹಾಲಿಯಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯಕ್ಕೆ ಅವಕಾಶ ಎದುರು ನೋಡುತ್ತಿದ್ದರು. ಆಗಿನ ಆಸ್ಟ್ರೇಲಿಯಾದ ಕೋಚ್​ ಮಿಕ್ಕಿ ಆರ್ಥರ್, ತಂಡದ ಮ್ಯಾನೇಜರ್ ಗೇವಿನ್ ಡೋವಿ ಮತ್ತು ನಾಯಕ ಮೈಕೆಲ್ ಕ್ಲಾರ್ಕ್ ಅವರು ಹೋಮ್‌ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ನಾಲ್ಕು ಆಟಗಾರರನ್ನು ಒಂದು ಪಂದ್ಯದಿಂದ ಹೊರಗಿಟ್ಟಿದ್ದರು.( ಅಂದರೆ ತಂಡದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಆಟಗಾರರನ್ನು ಅಮಾನತು ಮಾಡಲಾಗಿತ್ತು)

ಜೇಮ್ಸ್ ಪ್ಯಾಟಿನ್ಸನ್, ಮಿಚೆಲ್ ಜಾನ್ಸನ್, ಶೇನ್ ವ್ಯಾಟ್ಸನ್ ಮತ್ತು ಉಸ್ಮಾನ್ ಖವಾಜಾ ಮೂರನೇ ಪಂದ್ಯದಿಂದ ಅಮಾನತಾಗಿದ್ದ ನಾಲ್ವರು ಆಟಗಾರರಾಗಿದ್ದರು. ತಂಡದ ಪ್ರದರ್ಶನವನ್ನು ಸುಧಾರಿಸುವ ಮಾರ್ಗಗಳ ಕುರಿತು ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ನೀಡಲು ಆಟಗಾರರನ್ನು ನಿಯೋಜಿಸಲಾಯಿತು. ಈ ನಾಲ್ವರು ಆಟಗಾರರು ತಮ್ಮ ಉತ್ತರಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲಿಲ್ಲ ಎಂಬ ಕಾರಣಕ್ಕೆ ಒಂದು ಪಂದ್ಯದಿಂದ ಹೊರಗಿಟ್ಟಿದ್ದರು.

ನಾಗ್ಪುರದಲ್ಲಿ ಮೊದಲ ಟೆಸ್ಟ್‌ನ ಒಂದು ದಿನ ಮೊದಲು,"ಆ ಸಮಯದಲ್ಲಿ ನಮ್ಮ ಆದ್ಯತೆಗಳು ಸ್ವಲ್ಪ ತಪ್ಪಾಗಿತ್ತು. ಆಟಗಾರರಿಗೆ ಬಾಕ್ಸ್ ಟಿಕ್ ಮಾಡುವ ವಿಷಯದ ಬಗ್ಗೆ ನಾವು ಹೆಚ್ಚು ಚಿಂತೆ ಮಾಡುತ್ತಿದ್ದೆವು. ಆಗ ನಮ್ಮ ತಂಡವೂ ಕೌಶಲ್ಯದಿಂದ ಕೂಡಿತ್ತು ಆದರೆ, ಭಾರತ ಹೆಚ್ಚು ಪ್ರಾಬಲ್ಯ ಮೆರೆದಿತ್ತು" ಎಂದು ಹತ್ತು ವರ್ಷಗಳ ಹಿಂದಿನ ಪಂದ್ಯದ ನೆನಪುಗಳನ್ನು ಖವಾಜಾ ಮೆಲುಕು ಹಾಕಿದರು.

ಅಂದು ಸೋಲಿಗೆ ಕಾರಣ ಏನೆಂದು ವಿವರಿಸಿದ ಖವಾಜಾ: "2013ರಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕಿಂತ ಹೆಚ್ಚು ಕೌಶಲ್ಯದಿಂದ ಕೂಡಿತ್ತು, ಅದಕ್ಕಾಗಿ ನಾವು ಸರಣಿಯಲ್ಲಿ ವೈಟ್​ವಾಶ್​ ಆಗಿ ದೇಶಕ್ಕೆ ಮರಳ ಬೇಕಾಯಿತು. ಭಾರತಕ್ಕಿಂತ ಪಿಟ್​ ಆಗಿ ನಮ್ಮ ತಂಡ ಇರಲಿಲ್ಲ ಹಾಗೂ ಆಸ್ಟ್ರೇಲಿಯಾದ ಫೀಲ್ಡಿಂಗ್​ ಆ ಸಂದರ್ಭದಲ್ಲಿ ತುಂಬಾ ಕಳಪೆಯಾಗಿತ್ತು. ಇದು ಕೂಡ ಸರಣಿ ಸೋಲಿಗೆ ಕಾರಣ" ಎಂದು ಖವಾಜಾ ಹೇಳಿದ್ದಾರೆ.

"ಒಬ್ಬ ಹೊಸ ಆಟಗಾರ ತಂಡದೊಂದಿಗೆ ಹೊಂದಿಕೊಳ್ಳಲು ಕೆಲವು ಸಮಯಾವಕಾಶ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ಆರಂಭದಲ್ಲಿ ಆದ ಕಹಿ ಕ್ಷಣಗಳು ತಂಡದಿಂದ ಹೊರಗಿನವನು ಎಂಬ ಭಾವನೆ ಬೆಳೆಸುತ್ತದೆ. ನಾನು ಆಸ್ಟ್ರೇಲಿಯಾಗೆ ಹಿಂತಿರುಗಿದಾಗ ಅದೇ ಭಾವನೆ ಉಳಿಯುತ್ತದೆ ಎಂದು ಭಾವಿಸಿದ್ದೆ. ಏಕೆಂದರೆ ನಾಲ್ಕು ಪಂದ್ಯಗಳನ್ನು ಸೋತಿದ್ದ ತಂಡದ ವಾತಾವರಣ ಆದೇ ರೀತಿ ಇತ್ತು. ಆದರೆ, ನಾನು ಅಂದೇ ನಿರ್ಧರಿಸಿ ನನ್ನ ದುರ್ಭಲತೆಯನ್ನು ಗುರುತಿಸಿಕೊಂಡು ಅದರ ಮೇಲೆ ಹೆಚ್ಚಿನ ಗಮನ ಹರಿಸಿದೆ. ಅದರಿಂದ ನಾನು ಹೆಚ್ಚು ಉತ್ತಮವಾಗಿ ಕಾಣುತ್ತೇನೆ" ಎಂದಿದ್ದಾರೆ.

"10 ವರ್ಷಗಳ ಹಿಂದೆಯೇ ನನ್ನ ಜೀವನದ ಸಂತೋಷವನ್ನು ಕ್ರಿಕೆಟ್‌ನ ಮೂಲಕ ನಿರ್ಧರಿಸಲು ನಾನು ಇಷ್ಟಪಡಲಿಲ್ಲ. ಜೀವನದಲ್ಲಿ ಕ್ರಿಕೆಟ್​ಗಿಂತ ಹೆಚ್ಚಿನದ್ದು ಬಹಳಷ್ಟಿದೆ ಎಂಬುದನ್ನು ನಾನು ಅರಿತಿದ್ದೇನೆ. ನಾನು ಈಗಲೂ ಕಲಿಯಲು ಇಚ್ಚೆ ಪಡುತ್ತೇನೆ. ಕ್ರಿಕೆಟ್​ ಆಟದ ಕೊನೆಯ ಫಲಿತಾಂಶ ಮುಖ್ಯ ಅಲ್ಲ. ನಾವು ಹೇಗೆ ಆಡಿದ್ದೇವೆ ಎಂಬುದು ಮುಖ್ಯ ಆಗುತ್ತದೆ" ಎಂದು ಖವಾಜಾ ಹೇಳಿದ್ದಾರೆ.

ಇದನ್ನೂ ಓದಿ: ರಿಷಭ್ ಪಂತ್​ಗೆ ಪರ್ಯಾಯ ಆಟಗಾರನನ್ನು ಹುಡುಕುವುದು ಕಷ್ಟ: ಕಿರಣ್​ ಮೋರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.