ಪಲ್ಲೆಕೆಲೆ: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಆತಿಥೇಯ ಶ್ರೀಲಂಕಾ ಪ್ರಾಬಲ್ಯ ಸಾಧಿಸಿದೆ. ಆರಂಭಿಕರಾದ ನಾಯಕ ಕರುಣರತ್ನೆ ಮತ್ತು ಲಹಿರು ತಿರಿಮನ್ನೆ ಶತಕ ಸಿಡಿಸಿ ಬಾಂಗ್ಲಾ ಬೌಲರ್ಗಳ ವಿರುದ್ಧ ಮೆರೆದಾಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡಕ್ಕೆ ನಾಯಕ ಕರುಣರತ್ನೆ ಮತ್ತು ಲಹಿರು ತಿರಿಮನ್ನೆ ಮೊದಲ ವಿಕೆಟ್ಗೆ 209 ರನ್ಗಳ ಬೃಹತ್ ಜೊತೆಯಾಟ ನೀಡಿದರು. ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ 244 ರನ್ ಸಿಡಿಸಿದ್ದ ಕರುಣರತ್ನೆ 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 19 ಎಸೆತಗಳಲ್ಲಿ 15 ಬೌಂಡರಿ ಸಹಿತ 118 ರನ್ಗಳಿಸಿದರು. ತಮ್ಮ 72ನೇ ಟೆಸ್ಟ್ನಲ್ಲಿ 12ನೇ ಶತಕ ಸಿಡಿಸಿದ ಅವರು ಶೊರಿಫೂಲ್ ಇಸ್ಲಾಮ್ ಬೌಲಿಂಗ್ನಲ್ಲಿ ಲಿಟನ್ ದಾಸ್ಗೆ ಕ್ಯಾಚ್ ನೀಡಿ ಔಟಾದರು.
-
🔸 A 209-run opening stand
— ICC (@ICC) April 29, 2021 " class="align-text-top noRightClick twitterSection" data="
🔸 Centuries from Dimuth Karunaratne and Lahiru Thirimanne
A dominating day one for Sri Lanka in the second Test!#SLvBAN | #WTC21 | https://t.co/gHzrfGN3qQ pic.twitter.com/5Kap1e0cKv
">🔸 A 209-run opening stand
— ICC (@ICC) April 29, 2021
🔸 Centuries from Dimuth Karunaratne and Lahiru Thirimanne
A dominating day one for Sri Lanka in the second Test!#SLvBAN | #WTC21 | https://t.co/gHzrfGN3qQ pic.twitter.com/5Kap1e0cKv🔸 A 209-run opening stand
— ICC (@ICC) April 29, 2021
🔸 Centuries from Dimuth Karunaratne and Lahiru Thirimanne
A dominating day one for Sri Lanka in the second Test!#SLvBAN | #WTC21 | https://t.co/gHzrfGN3qQ pic.twitter.com/5Kap1e0cKv
ನಾಯಕನ ವಿಕೆಟ್ ಪತನದ ನಂತರ ಒಸಾಢ ಫರ್ನಾಂಡೋ ಜೊತೆ ಸೇರಿದ ತಿರಿಮನ್ನೆ ತಮ್ಮ 3ನೇ ಶತಕ ಪೂರ್ಣಗೊಳಿಸಿದರು. ಜೊತೆಗೆ 3ನೇ ವಿಕೆಟ್ಗೆ ಮುರಿಯದ 82 ರನ್ಗಳ ಜೊತೆಯಾಟ ನಡೆಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
253 ಎಸೆತಗಳನ್ನೆದುರಿಸಿರುವ ತಿರಿಮನ್ನೆ 14 ಬೌಂಡರಿಗಳ ಸಹಿತ 131 ರನ್ಗಳಿಸಿದ್ದಾರರೆ, ಫರ್ನಾಂಡೋ 40 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಇದನ್ನು ಓದಿ: ನೆಟ್ಸ್ನಲ್ಲಿ ಆರ್ಸಿಬಿ ನಾಯಕ ಕೊಹ್ಲಿಗೆ ಬೌಲಿಂಗ್ ಮಾಡಲು ಒಪ್ಪದ ಕೈಲ್ ಜಮೀಸನ್! ಕಾರಣ?