ಮುಂಬೈ: ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅನಿರುದ್ಧ ಜೋಶಿಯನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ 3ರಿಂದ 4 ತಿಂಗಳು ವಿಶ್ರಾಂತಿಯಲ್ಲಿರಬೇಕಾಗಿದೆ. ಆದ್ದರಿಂದ ರಿಷಭ್ ಪಂತ್ ಅವರನ್ನು 2021ರ ಆವೃತ್ತಿಗೆ ನಾಯಕನನ್ನಾಗಿ ನೇಮಿಸಲಾಗಿದೆ. ಇದೀಗ ಅಯ್ಯರ್ ಬದಲಿಗೆ ಈ ಆವೃತ್ತಿಗೆ ಮಾತ್ರ ಅನಿರುದ್ಧ ಜೋಶಿಗೆ ಮಣೆ ಹಾಕಿದೆ.
-
NEWS: Shams Mulani joins @DelhiCapitals as short-term COVID-19 replacement for Axar Patel; Anirudha Joshi replaces injured Shreyas Iyer. #VIVOIPL @Vivo_India
— IndianPremierLeague (@IPL) April 15, 2021 " class="align-text-top noRightClick twitterSection" data="
More details 👉 https://t.co/3z7AmJrDYr pic.twitter.com/HFsx6DVjpQ
">NEWS: Shams Mulani joins @DelhiCapitals as short-term COVID-19 replacement for Axar Patel; Anirudha Joshi replaces injured Shreyas Iyer. #VIVOIPL @Vivo_India
— IndianPremierLeague (@IPL) April 15, 2021
More details 👉 https://t.co/3z7AmJrDYr pic.twitter.com/HFsx6DVjpQNEWS: Shams Mulani joins @DelhiCapitals as short-term COVID-19 replacement for Axar Patel; Anirudha Joshi replaces injured Shreyas Iyer. #VIVOIPL @Vivo_India
— IndianPremierLeague (@IPL) April 15, 2021
More details 👉 https://t.co/3z7AmJrDYr pic.twitter.com/HFsx6DVjpQ
ಜೋಶಿ ಕರ್ನಾಟಕ ಪರ 17 ಲಿಸ್ಟ್ ಪಂದ್ಯಗಳನ್ನಾಡಿದ್ದು 211 ರನ್ಗಳಿಸಿದ್ದಾರೆ. 20 ಟಿ-20 ಇನ್ನಿಂಗ್ಸ್ಗಳಿಂದ 320 ರನ್ಗಳಿಸಿದ್ದಾರೆ. ಈ ಹಿಂದೆ ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರಾದರೂ ಆಡುವ ಅವಕಾಶ ಸಿಕ್ಕಿರಲಿಲ್ಲ.
ಅಕ್ಷರ್ ಪಟೇಲ್ ಬದಲಿಗೆ ಶಾಮ್ಸ್ ಮುಲಾನಿ ಆಯ್ಕೆ
ಕೋವಿಡ್ 19 ಸೋಂಕಿನಿಂದ ಬಳಲುತ್ತಿರುವ ಆಲ್ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ಮುಂಬೈನ ಶಾಮ್ಸ್ ಮುಲಾನಿಯನ್ನು ಸೀಮಿತ ಅವಧಿಗೆ ಬದಲೀ ಆಟಗಾರನಾಗಿ ಡೆಲ್ಲಿ ತಂಡ ಆಯ್ಕೆ ಮಾಡಿದೆ. ಎಡಗೈ ಸ್ಪಿನ್ನರ್ ಆಗಿರುವ ಇವರು ಅಕ್ಷರ್ ಪಟೇಲ್ ಸಂಪೂರ್ಣ ಗುಣಮುಖರಾಗುವವರೆಗೆ ತಂಡದಲ್ಲಿರಲಿದ್ದಾರೆ.
ಇದನ್ನು ಓದಿ: ವಿಸ್ಡನ್ ದಶಕದ ಕ್ರಿಕೆಟಿಗ: ಸಚಿನ್, ರಿಚರ್ಡ್ಸ್, ಕಪಿಲ್ ದೇವ್ ಸಾಲಿಗೆ ಕಿಂಗ್ ಕೊಹ್ಲಿ ಸೇರ್ಪಡೆ