ಚೆನ್ನೈ: 2 ವರ್ಷಗಳ ನಂತರ ರಣಜಿ ಕ್ರಿಕೆಟ್ ಮರಳಿದ್ದು, ಕರ್ನಾಟಕ ತನ್ನ ಮೊದಲ ಪಂದ್ಯದಲ್ಲೇ ಭರ್ಜರಿ ಆರಂಭ ಪಡೆದುಕೊಂಡಿದೆ. ರೈಲ್ವೇಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಾಯಕ ಮನೀಶ್ ಪಾಂಡೆ ಮತ್ತು ಕೆ ಸಿದ್ಧಾರ್ಥ್ ಅವರ ಭರ್ಜರಿ ಶತಕದಿಂದ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಗುರುವಾರದಿಂದ ಆರಂಭವಾಗಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ರೈಲ್ವೇಸ್ ತಂಡದ ವಿರುದ್ಧ ಸೆಣಸಾಡುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಕರ್ನಾಟಕ ತಂಡ 50 ರನ್ಗಳಿಸುವಷ್ಟರಲ್ಲಿ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತ್ತು.
ಆದರೆ, 3ನೇ ವಿಕೆಟ್ಗೆ ಅನುಭವಿ ಸಮರ್ಥ್(47) ಮತ್ತು ಸಿದ್ದಾರ್ಥ್ 3ನೇ ವಿಕೆಟ್ಗೆ 60 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. 79 ಎಸೆತಗಳಲ್ಲಿ 8 ಬೌಂಡರಿ ಸಹಿತ 47 ರನ್ಗಳಿಸಿ ಸಮರ್ಥ್ ವಿಕೆಟ್ ಒಪ್ಪಿಸಿದರು.
ಸಿದ್ಧಾರ್ಥ್-ಮನೀಶ್ ಪಾಂಡೆ ದ್ವಿಶತಕದ ಜೊತೆಯಾಟ:110 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಒಂದಾದ ಕೆ ಸಿದ್ಧಾರ್ಥ್ ಮತ್ತು ಮನೀಶ್ ಪಾಂಡೆ ದ್ವಿಶತಕದ ಜೊತೆಯಾಟ ನಡೆಸಿದ್ದಾರೆ.
ಪ್ರಸ್ತುತ ಕರ್ನಾಟಕ 76 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 343 ರನ್ಗಳಿಸಿದೆ. ಸಿದ್ಧಾರ್ಥ್ 177 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 117 ರನ್ ಮತ್ತು ಮನೀಶ್ ಪಾಂಡೆ 106 ಎಸೆತಗಳಲ್ಲಿ 9 ಬೌಂಡರಿ, 10 ಸಿಕ್ಸರ್ ಸಹಿತ ಅಜೇಯ 137 ರನ್ಗಳಿಸಿ ಆಡುತ್ತಿದ್ದಾರೆ.
ಮನೀಶ್ ಪಾಂಡೆ ಐಪಿಎಲ್ ಮೆಗಾ ಹರಾಜಿನಲ್ಲಿ 4.6 ಕೋಟಿ ರೂಪಾಯಿಗೆ ಲಖನೌ ಸೂಪರ್ ಜೈಂಟ್ಸ್ ಖರೀದಿಸಿದೆ.
ಇದನ್ನೂ ಓದಿ:ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ U19 ಸ್ಟಾರ್ ಯಶ್ ಧುಲ್