ETV Bharat / sports

ಟೀಂ ಇಂಡಿಯಾ ಕೋಚ್​ ಸ್ಥಾನದಿಂದ ರವಿಶಾಸ್ತ್ರಿ ತೆಗೆದು ಹಾಕಲು ಕಾರಣವಿಲ್ಲ: ಕಪಿಲ್​​ ದೇವ್​

author img

By

Published : Jul 5, 2021, 6:25 PM IST

ಟಿ-20 ವಿಶ್ವಕಪ್​ ಮುಕ್ತಾಯಗೊಳ್ಳುತ್ತಿದ್ದಂತೆ ರವಿಶಾಸ್ತ್ರಿ ಕೋಚ್​ ಅವಧಿ ಮುಕ್ತಾಯಗೊಳ್ಳಲಿದ್ದು, ಟೀಂ ಇಂಡಿಯಾಗೆ ಮುಂದಿನ ಕೋಚ್​ ಯಾರಾಗಬೇಕು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ವಿಚಾರವಾಗಿ ಕಪಿಲ್​ ದೇವ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Team india coach
Team india coach

ಮುಂಬೈ: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕೋಚ್​ ಆಗಿ ರಾಹುಲ್​ ದ್ರಾವಿಡ್​​ ಆಯ್ಕೆಯಾಗುತ್ತಿದ್ದಂತೆ ಭವಿಷ್ಯದಲ್ಲಿ ಅವರು ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಕಪಿಲ್​ ದೇವ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.​

ಬರುವ ದಿನಗಳಲ್ಲೂ ರವಿಶಾಸ್ತ್ರಿ ಉತ್ತಮ ಫಲಿತಾಂಶ ನೀಡಿದರೆ ಅವರನ್ನು ಟೀಂ ಇಂಡಿಯಾ ಕೋಚ್​​ ಸ್ಥಾನದಿಂದ ತೆಗೆದುಹಾಕುವ ಅವಶ್ಯಕತೆ ಇಲ್ಲ ಎಂದು ಕಪಿಲ್​ ದೇವ್ ಹೇಳಿದ್ದಾರೆ.

ವಿಶ್ವಕಪ್​​ ವಿಜೇತ ತಂಡದ ನಾಯಕ ಕಪಿಲ್​ ದೇವ್​ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಕೋಚ್​​ ವಿಚಾರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ರವಿಶಾಸ್ತ್ರಿ ಸದ್ಯ ಉತ್ತಮ ಫಲಿತಾಂಶ ನೀಡುತ್ತಿದ್ದಾರೆ. ಅವರನ್ನ ತೆಗೆದು ಹಾಕುವ ಯಾವುದೇ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದಿರುವ ಕಪಿಲ್​​ ದೇವ್​, ತಂಡದಲ್ಲಿನ ಕೋಚ್​ ಹಾಗೂ ಆಟಗಾರರ ಮೇಲೆ ಯಾವುದೇ ರೀತಿಯ ಒತ್ತಡ ಹಾಕಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಮೈದಾನದಲ್ಲೇ ಲವರ್​ಗೆ ಪ್ರಪೋಸ್​ ಮಾಡಿದ ಫುಟ್ಬಾಲ್​ ಪ್ಲೇಯರ್​!!

ಟೀಂ ಇಂಡಿಯಾ ಕೋಚ್​ ಆಗಿರುವ ರವಿಶಾಸ್ತ್ರಿ ಅಧಿಕಾರ ಅವಧಿ ಟಿ-20 ವಿಶ್ವಕಪ್​ ಮುಕ್ತಾಯಗೊಳ್ಳುತ್ತಿದ್ದಂತೆ ಅಂತ್ಯವಾಗಲಿದೆ. ಇದರ ಮಧ್ಯೆ ಶ್ರೀಲಂಕಾದಲ್ಲಿರುವ ಟೀಂ ಇಂಡಿಯಾಗೆ ದಿ ವಾಲ್​ ಖ್ಯಾತಿಯ ರಾಹುಲ್​ ದ್ರಾವಿಡ್ ಕೋಚ್​ ಆಗಿದ್ದಾರೆ. ಮುಂದಿನ ದಿನಗಳಲ್ಲೂ ತಂಡಕ್ಕೆ ರಾಹುಲ್​ ಕೋಚ್​ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಕೇಳಿ ಬರಲು ಶುರುವಾಗಿವೆ.

ಈ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ. ಸದ್ಯ ಶ್ರೀಲಂಕಾ ಸರಣಿ ಮುಕ್ತಾಯಗೊಳ್ಳಲಿ. ಅಲ್ಲಿ ನಮ್ಮ ತಂಡ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಒಂದೇ ವೇಳೆ ಹೊಸ ಕೋಚ್​ಗೆ ಜವಾಬ್ದಾರಿ ನೀಡುವುದಾದರೆ ಅದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.