ETV Bharat / sports

ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ 'ಟೆಸ್ಟ್​ ಶತಕ' ಸರಿಗಟ್ಟಿದ ಕೇನ್​ ವಿಲಿಯಮ್ಸನ್​! - Bangladesh New Zealand first test

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ನ್ಯೂಜಿಲ್ಯಾಂಡ್​ ಬ್ಯಾಟರ್​ ಕೇನ್​ ವಿಲಿಯಮ್ಸನ್​, ವಿರಾಟ್​ ಕೊಹ್ಲಿ ಶತಕಗಳನ್ನು ಸರಿಗಟ್ಟಿದರು.

ಕೊಹ್ಲಿ ಟೆಸ್ಟ್​ ಶತಕ ಸರಿಗಟ್ಟಿದ ​ಬ್ಯಾಟರ್
ಕೊಹ್ಲಿ ಟೆಸ್ಟ್​ ಶತಕ ಸರಿಗಟ್ಟಿದ ​ಬ್ಯಾಟರ್
author img

By ETV Bharat Karnataka Team

Published : Nov 29, 2023, 6:19 PM IST

ಸಿಲ್ಹೆಟ್: ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ ದಾಖಲೆಗಳನ್ನು ಸರಿಗಟ್ಟುವುದು, ಮುರಿಯುವ ವರದಿಗಳನ್ನು ನಾವು ನೋಡಿದ್ದೇವೆ. ಆದರೆ, ಈಗ ಅದು ಬದಲಾಗಿದ್ದು, ಆ ಜಾಗಕ್ಕೆ ಚೇಸಿಂಗ್ ಮಾಸ್ಟರ್​ ವಿರಾಟ್​ ಕೊಹ್ಲಿ ಬಂದಿದ್ದಾರೆ. ಯಾವುದೇ ಕ್ರಿಕೆಟಿಗರು ದಾಖಲೆ ಮಾಡಿದರೆ, ಅಲ್ಲಿ ವಿರಾಟ್​ ಹೆಸರು ಬರುತ್ತದೆ. ಸದ್ಯ ನಡೆಯುತ್ತಿರುವ ಬಾಂಗ್ಲಾದೇಶ- ನ್ಯೂಜಿಲ್ಯಾಂಡ್​ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಕಿಂಗ್​ ಶತಕಗಳನ್ನು ಕಿವೀಸ್​ ಆಟಗಾರ ಸರಿಗಟ್ಟಿದ್ದಾರೆ.

ಸಿಲ್ಹೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಗಿರುವ ಬಾಂಗ್ಲಾ ಎದುರಿನ ಟೆಸ್ಟ್​ನಲ್ಲಿ ಶತಕವನ್ನು (104) ಸಿಡಿಸಿದ ನ್ಯೂಜಿಲ್ಯಾಂಡ್​ನ ಹಿರಿಯ ಬ್ಯಾಟರ್ ಕೇನ್ ವಿಲಿಯಮ್ಸನ್, ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಕ್ರಿಕೆಟ್​ ದಿಗ್ಗಜ ಡಾನ್ ಬ್ರಾಡ್ಮನ್​ ಅವರ ಟೆಸ್ಟ್ ಶತಕಗಳನ್ನು ಸರಿಗಟ್ಟಿದರು.

ವಿಲಿಯಮ್ಸನ್ ಅವರು 95 ನೇ ಟೆಸ್ಟ್ ಪಂದ್ಯದಲ್ಲಿ 29 ಟೆಸ್ಟ್ ಶತಕವನ್ನು ಗಳಿಸುವ ಮೂಲಕ ವಿರಾಟ್​ಗಿಂತಲೂ ವೇಗವಾಗಿ ಈ ದಾಖಲೆ ಮಾಡಿದರು. ಕೊಹ್ಲಿ ವೆಸ್ಟ್ 111 ಇನ್ನಿಂಗ್ಸ್‌ಗಳಲ್ಲಿ 29 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಅಂದರೆ 26 ಇನಿಂಗ್ಸ್​​ ಅಂತರವಿದೆ. ಇದರ ಜೊತೆಗೆ ವಿಲಿಯಮ್ಸನ್, 52 ಟೆಸ್ಟ್ ಪಂದ್ಯಗಳಲ್ಲಿ 29 ಶತಕಗಳನ್ನು ಗಳಿಸಿದ ಡಾನ್ ಬ್ರಾಡ್ಮನ್ ಅವರ ಶತಕಗಳನ್ನೂ ಸರಿಗಟ್ಟಿದರು.

ಕಿವೀಸ್​ ತಂಡದ ಮಾಜಿ ನಾಯಕ 205 ಎಸೆತಗಳಲ್ಲಿ 104 ರನ್ ಗಳಿಸುವ ಮೂಲಕ ತೈಜುಲ್ ಇಸ್ಲಾಮ್‌ಗೆ ವಿಕೆಟ್ ನೀಡಿದರು. ಇದಕ್ಕೂ ಮೊದಲು ಅವರು 189 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಈ ವರ್ಷದಲ್ಲಿ ಕೇನ್​ ಬಾರಿಸಿದ ನಾಲ್ಕನೇ ಟೆಸ್ಟ್​ ಶತಕವಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ಮತ್ತು ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಶತಕಗಳು ದಾಖಲಾಗಿದ್ದವು. 2010 ರಲ್ಲಿ ನ್ಯೂಜಿಲೆಂಡ್‌ ಪರ ಪದಾರ್ಪಣೆ ಮಾಡಿದ ವಿಲಿಯಮ್ಸನ್, ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳೊಂದಿಗೆ, ಅತಿ ಹೆಚ್ಚು ರನ್ ಗಳಿಸಿದ ಕಿವೀಸ್​ ಆಟಗಾರ ಎಂಬ ದಾಖಲೆ ಕೂಡ ಬರೆದರು.

ಕುಂಟುತ್ತಾ ಸಾಗಿದ ಕಿವೀಸ್​: ಪಂದ್ಯದಲ್ಲಿ ಬಾಂಗ್ಲಾದೇಶ 310 ರನ್​ ಗುರಿ ನೀಡಿದ್ದು, ಬೆನ್ನಟ್ಟಿರುವ ನ್ಯೂಜಿಲ್ಯಾಂಡ್​ ಬ್ಯಾಟರ್​ಗಳ ವೈಫಲ್ಯದಿಂದ ಕುಂಟುತ್ತಾ ಸಾಗಿದೆ. 2ನೇ ದಿನದಾಂತ್ಯಕ್ಕೆ ವಿಲಿಯಮ್ಸನ್​ ಶತಕದ ಹೊರತಾಗಿಯೂ 8 ವಿಕೆಟ್​ ನಷ್ಟಕ್ಕೆ 266 ರನ್​ ಗಳಿಸಿದೆ. ಬಾಂಗ್ಲಾ ಗುರಿ ತಲುಪಲು ಇನ್ನೂ 44 ರನ್​ ಬಾಕಿ ಇದೆ. ಬಾಂಗ್ಲಾದೇಶದ ಬೌಲರ್‌ಗಳ ಕರಾರುವಾಕ್​ ದಾಳಿಯಿಂದಾಗಿ 2ನೇ ದಿನದ ಆರಂಭದಲ್ಲಿ 98 ರನ್‌ಗಳಿಗೆ ಅಗ್ರ ಮೂವರು ಕಿವೀಸ್ ಬ್ಯಾಟರ್‌ಗಳನ್ನು ಪೆವಿಲಿಯನ್ ಸೇರಿದರು.

ಬಳಿಕ ವಿಲಿಯಮ್ಸನ್​ (104) ಶತಕ ಬಾರಿಸಿದರೆ, ಡ್ಯಾರಿಲ್ ಮಿಚೆಲ್ (41), ಗ್ಲೆನ್​ ಫಿಲಿಪ್ಸ್​ (42) ರನ್​ ಗಳಿಸಿದರು. ಬಾಂಗ್ಲಾ ಪರವಾಗಿ ತೈಜುಲ್​ ಇಸ್ಲಾಂ 4 ವಿಕೆಟ್​ ಕಬಳಿಸಿ ಪ್ರಭಾವಿಯಾದರು. ಉಳಿದ ಬೌಲರ್​ಗಳು ತಲಾ 1 ವಿಕೆಟ್​ ಗಳಿಸಿದರು. ಇನ್ನೂ 3 ದಿನ ಆಟ ಬಾಕಿ ಇದೆ.

ಇದನ್ನೂ ಓದಿ: ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ ರಾಹುಲ್​ ದ್ರಾವಿಡ್​ ಮುಂದುವರಿಕೆ: ಬಿಸಿಸಿಐ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.