ನವದೆಹಲಿ: ನಿರೀಕ್ಷೆಯಂತೆ ದೆಹಲಿಯ ಅರುಣ್ ಜೇಟ್ಲೀ ಸ್ಟೇಡಿಯಂನಲ್ಲಿ ಇಂದಿನ ಪಂದ್ಯದಲ್ಲೂ ಬೌಂಡರಿ ಸಿಕ್ಸರ್ಗಳ ಸುರಿಮಳೆಯಾಗಿದ್ದು, ರಾಜಸ್ಥಾನ್ ತಂಡ ವಿಕೆಟ್ ಕೀಪರ್ ಜೋಸ್ ಬಟ್ಲರ್ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ ಹೈದರಾಬಾದ್ಗೆ ಗೆಲ್ಲಲು 221 ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಯಲ್ಸ್ 3ನೇ ಓವರ್ನಲ್ಲೇ ಯಶಸ್ವಿ ಜೈಸ್ವಾಲ್(12) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್ಗೆ ಒಂದಾದ ನಾಯಕ ಸಂಜು ಸಾಮ್ಸನ್ ಮತ್ತು ಬಟ್ಲರ್ 2ನೇ ವಿಕೆಟ್ಗೆ 150 ರನ್ಗಳ ಬೃಹತ್ ಜೊತೆಯಾಟ ನೀಡಿ ರಾಯಲ್ಸ್ಗೆ ಬೃಹತ್ ಮೊತ್ತ ದಾಖಲಿಸಲು ನೆರವಾದರು.
-
Innings Break: A fiery 124 off just 64 balls from @josbuttler and @IamSanjuSamson's 48 powers @rajasthanroyals to a commanding 220-3 in 20 overs.
— IndianPremierLeague (@IPL) May 2, 2021 " class="align-text-top noRightClick twitterSection" data="
This is the second joint-highest total in #IPL2021. https://t.co/7vPWWkuPYu #RRvSRH #VIVOIPL pic.twitter.com/6hXpWCDuww
">Innings Break: A fiery 124 off just 64 balls from @josbuttler and @IamSanjuSamson's 48 powers @rajasthanroyals to a commanding 220-3 in 20 overs.
— IndianPremierLeague (@IPL) May 2, 2021
This is the second joint-highest total in #IPL2021. https://t.co/7vPWWkuPYu #RRvSRH #VIVOIPL pic.twitter.com/6hXpWCDuwwInnings Break: A fiery 124 off just 64 balls from @josbuttler and @IamSanjuSamson's 48 powers @rajasthanroyals to a commanding 220-3 in 20 overs.
— IndianPremierLeague (@IPL) May 2, 2021
This is the second joint-highest total in #IPL2021. https://t.co/7vPWWkuPYu #RRvSRH #VIVOIPL pic.twitter.com/6hXpWCDuww
ಸಾಮ್ಸನ್ 33 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ಗಳ ಸಹಿತ 48 ರನ್ಗಳಿಸಿ ಔಟಾದರೆ, ಬಟ್ಲರ್ 64 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ಗಳ ಸಹಿತ 124 ರನ್ಗಳಿಸಿ 19ನೇ ಓವರ್ನಲ್ಲಿ ಔಟಾದರು. ರಿಯಾನ್ ಪರಾಗ್ ಅಜೇಯ 15, ಡೇವಿಡ್ ಮಿಲ್ಲರ್ 7 ರನ್ಗಳಿಸಿದರು.
ರಶೀದ್ ಖಾನ್ 4 ಓವರ್ಗಳಲ್ಲಿ 24 ರನ್ ನೀಡಿ ಒಂದು ವಿಕೆಟ್ ಪಡೆದರೆ, ವಿಜಯ್ ಶಂಕರ್ 42ರನ್ಗಳಿಗೆ 1 ಮತ್ತು ಸಂದೀಪ್ ಶರ್ಮಾ 50 ರನ್ ನೀಡಿ ಒಂದು ವಿಕೆಟ್ ಪಡೆದರು.