ETV Bharat / sports

10 ವರ್ಷದ ನಂತರ ಅಂತಾರಾಷ್ಟ್ರೀಯ ಏಕದಿನ ಆಡುತ್ತಿರುವ ಜಯದೇವ್​ ಉನಾದ್ಕತ್​

author img

By

Published : Feb 20, 2023, 11:14 AM IST

Updated : Feb 21, 2023, 10:52 AM IST

10 ವರ್ಷದ ನಂತರ ಅಂತಾರಾಷ್ಟ್ರೀಯ ವೈಟ್​ಬಾಲ್​ ಬೌಲಿಂಗ್​ ಮಾಡಲಿರುವ ರಣಜಿ ವಿಜೇತ ನಾಯಕ - ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಉನಾದ್ಕತ್​ ಆಯ್ಕೆ - ರಣಜಿಯಲ್ಲಿ ಉತ್ತಮ ಬೌಲಿಂಗ್​ ಮಾಡಿರುವ ಜಯದೇವ

Jaydev Unadkat
ಜಯದೇವ ಉನಾದ್ಕತ್​

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳು ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಬಿಸಿಸಿಐ ಒಟ್ಟು 18 ಆಟಗಾರರ ಹೆಸರನ್ನು ಪ್ರಕಟಿಸಿದ್ದು, ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ವೇಗಿ ಜಯದೇವ್ ಉನಾದ್ಕತ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಜಯದೇವ್ 10 ವರ್ಷಗಳ ನಂತರ ಮತ್ತೊಮ್ಮೆ ಏಕದಿನ ಪಂದ್ಯ ಆಡಲಿದ್ದಾರೆ. ಇದಕ್ಕೂ ಮೊದಲು, ಅವರು ತಮ್ಮ ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ 21 ನವೆಂಬರ್ 2013 ರಂದು ಆಡಿದ್ದರು. ಜಯದೇವ್​ ಭಾರತ ಪರ ಇದುವರೆಗೆ 7 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ತಮ್ಮ ಏಕದಿನ ವೃತ್ತಿಜೀವನದ 8 ನೇ ಪಂದ್ಯವನ್ನು ಆಡಲಿದ್ದಾರೆ.

ಭಾರತದ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಕ್ಕೂ ಜಯದೇವ್​ ಉನಾದ್ಕತ್​ ಆಯ್ಕೆ ಆಗಿದ್ದರು. ಆದರೆ ಮೊದಲ ಪಂದ್ಯದಲ್ಲಿ ಶಮಿ ಮತ್ತು ಸಿರಾಜ್​ ವೇಗದ ಪಡೆಯನ್ನು ನಿರ್ವಹಿಸಿದ್ದರು. ಎರಡನೇ ಪಂದ್ಯದ ವೇಳೆಗೆ ಸೌರಾಷ್ಟ್ರ ಫೈನಲ್​ ಪ್ರವೇಶ ಪಡೆದ ಕಾರಣ ಉನಾದ್ಕತ್​ ಅವರಿಗೆ ಬಿಸಿಸಿಐ ಬಾರ್ಡರ್​ ಗವಾಸ್ಕರ್​ ಟ್ರೋಫಿಯಿಂದ ಬಿಡುಗಡೆ ನೀಡಿತ್ತು.

ರಣಜಿ ಟ್ರೋಫಿಯ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಈಡನ್ ಗಾರ್ಡನ್​ನಲ್ಲಿ ಬಂಗಾಳವನ್ನು 9 ವಿಕೆಟ್​ಗಳಿಂದ ಮಣಿಸಿ ಎರಡನೇ ಬಾರಿಗೆ ಕಪ್​ ಜಯಿಸಿದೆ. ಸೌರಾಷ್ಟ್ರದ ನಾಯಕ ಉನಾದ್ಕತ್​ ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್​ನ 6 ವಿಕೆಟ್​ ಪಡೆದ ಕಾರಣ ಬಂಗಾಳ ಅಲ್ಪಮೊತ್ತಕ್ಕೆ ಕುಸಿಯಿತು. ಇದರಿಂದ 12 ರನ್​ನ ಗುರಿಯನ್ನು ಸುಲಭವಾಗಿ ಸೌರಾಷ್ಟ್ರ ಸಾಧಿಸಿತು.

ಉನಾದ್ಕತ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 12 ವರ್ಷ: 31 ವರ್ಷ ವಯಸ್ಸಿನ ವೇಗದ ಬೌಲರ್ ಜಯದೇವ್ ಉನದ್ಕತ್ 20 ಡಿಸೆಂಬರ್ 2010 ರಂದು ತಮ್ಮ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಭಾರತದ ಸರಣಿಯಲ್ಲಿ ಸೆಂಚುರಿಯನ್‌ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದರು. ಆದರೆ, ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ಟೆಸ್ಟ್ ಪಂದ್ಯದಿಂದ ದೂರ ಸರಿದಿದ್ದರು. ಇದರ ನಂತರ, 22 ಡಿಸೆಂಬರ್ 2022 ರಂದು ಮಿರ್ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯವನ್ನು ಆಡಿದರು. ಸುಮಾರು 12 ವರ್ಷಗಳ ನಂತರ ರೆಡ್​ಬಾಲ್​ನಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತ್ತು.

ಉನಾದ್ಕತ್​ 24 ಜುಲೈ 2013 ರಂದು ಜಿಂಬಾಬ್ವೆ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದರು. ಆದರೆ, 21 ನವೆಂಬರ್ 2013 ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ್ದರು. ಇದಲ್ಲದೇ, 18 ಜೂನ್ 2016 ರಂದು ಜಿಂಬಾಬ್ವೆ ವಿರುದ್ಧ ತಮ್ಮ ಟಿ-20 ಚೊಚ್ಚಲ ಪಂದ್ಯವನ್ನು ಆಡಿದರು. 18 ಮಾರ್ಚ್ 2018 ರಂದು ಬಾಂಗ್ಲಾದೇಶದ ವಿರುದ್ಧ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು.

ಜಯದೇವ್ ಉನಾದ್ಕತ್ ಭಾರತ ಆಡಿದ ಎರಡು ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ 3.29 ಎಕಾನಮಿ ದರದಲ್ಲಿ 3 ವಿಕೆಟ್​ಗಳನ್ನು ಪಡೆದಿದ್ದಾರೆ. 7 ಏಕದಿನ ಪಂದ್ಯಗಳನ್ನು ಆಡಿರುವ ಉನಾದ್ಕತ್​ 4.01 ಎಕಾನಮಿ ದರದಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ. 10 ಟಿ-20 ಪಂದ್ಯಗಳಲ್ಲಿ 8.68 ಎಕಾನಮಿ ದರದಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ ಸಾಧನೆ: ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 100 ಪಂದ್ಯಗಳಲ್ಲಿ 2.94ರ ಎಕಾನಮಿಯಲ್ಲಿ 373 ವಿಕೆಟ್​ ಪಡೆದಿದ್ದಾರೆ. ಲಿಸ್ಟ್ ಎ ಪಂದ್ಯದಲ್ಲಿ ಜಯದೇವ್ 116 ಪಂದ್ಯಗಳನ್ನು ಆಡಿದ್ದು, 4.76 ಎಕಾನಮಿಯಲ್ಲಿ 168 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಎಸ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಹಾರ್ದಿಕ್ ಪಾಂಡ್ಯ, ವೈ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಆರ್ ಜಡೇಜಾ, ಕುಲದೀಪ್ ಯಾದವ್, ಡಬ್ಲ್ಯೂ ಸುಂದರ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನಾದ್ಕತ್.

ಇದನ್ನೂ ಓದಿ: ಸೆಮಿಸ್​ಗಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕೌರ್​ ಪಡೆ: ಐರ್ಲೆಂಡ್ ಮೇಲೆ ಗೆಲುವಿನ ಇತಿಹಾಸ

Last Updated : Feb 21, 2023, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.