ETV Bharat / sports

ಇದೊಂದು ಕಠಿಣ ಸವಾಲಿನ ಪಂದ್ಯ.. ಬ್ಯಾಟಿಂಗ್​ ವೈಫಲ್ಯ ಸೋಲಿಗೆ ಕಾರಣ: ರೋಹಿತ್​ ಶರ್ಮಾ - ETV Bharath Kannada news

ಮೂರನೇ ಟೆಸ್ಟ್​ನಲ್ಲಿ ಭಾರತಕ್ಕೆ 9 ವಿಕೆಟ್​ಗಳಿಂದ ಸೋಲು - ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪ್ರವೇಶಿಸಿದ ಆಸಿಸ್​ - ಪಂದ್ಯದಲ್ಲಿ 11 ವಿಕೆಟ್​ ಪಡೆದ ನಾಥನ್​ ಲಿಯಾನ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

Rohit
ರೋಹಿತ್​ ಶರ್ಮಾ
author img

By

Published : Mar 3, 2023, 4:24 PM IST

ಇಂದೋರ್: ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ಗೆ ತಲುಪುವ ಗುರಿಯೊಂದಿಗೆ ಕಣಕ್ಕಿಳಿದ ಭಾರತ ಮೂರನೇ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ. ತವರಿನ ಸ್ಪಿನ್​ ಪಿಚ್​ನಲ್ಲಿ ನಮ್ಮವರೇ ಬ್ಯಾಟಿಂಗ್​ ಮಾಡಲು ತಿಣುಕಾಡಿದರು. ಬ್ಯಾಟಿಂಗ್​ನಲ್ಲಿ ಪೆವಿಲಿಯನ್​ ಪರೇಡ್​ ಪ್ರಾರಂಭಿಸಿದರು. ಎರಡು ದಿನ ಬರೋಬ್ಬರಿ ಒಂದೇ ಪಿಚ್​ನಲ್ಲಿ 30 ವಿಕೆಟ್​ಗಳ ಪತನವಾಯಿತು. ಆಸಿಸ್ 9 ವಿಕೆಟ್​ಗಳಿಂದ ಮೂರನೇ ಪಂದ್ಯಗೆದ್ದು ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ಗೆ ಅಧಿಕೃತ ಪ್ರವೇಶ ಪಡೆದುಕೊಂಡಿತು. ಭಾರತಕ್ಕೆ ನಾಲ್ಕನೇ ಪಂದ್ಯ WTCಗೆ ನಿರ್ಣಾಯವಾಗಿದೆ.

ಟೆಸ್ಟ್​ ಸೋಲಿನ ಬಗ್ಗೆ ಮಾತನಾಡಿದ ಭಾರತದ ನಾಯಕ ರೋಹಿತ್​ ಶರ್ಮಾ,' ಒಂದು ಕಹಿ ನೆನಪಿನ ಪಂದ್ಯವಾಗಿದೆ. ಸವಾಲಿನ ಪಿಚ್‌ಗಳಲ್ಲಿ ಆಡುವಾಗ, ನಾವು ಧೈರ್ಯಶಾಲಿಗಳಾಗಿರಬೇಕು. ನಾಥನ್​ ಲಿಯಾನ್​ ಈ ಪಿಚ್​ನಲ್ಲಿ ತುಂಬಾ ಕಠಿಣವಾದರು. ಅವರ ಲೈನ್​ ಮತ್ತು ಲೆಂಥ್​ನ್ನು ಅರಿಯಲು ಕಷ್ಟವಾಯಿತು. ಬೌಲಿಂಗ್​ ಕ್ರೆಡಿಟ್ ಲಿಯಾನ್​ಗೆ ಸಲ್ಲುತ್ತದೆ. ನಾವು ಧೈರ್ಯವಾಗಿ ಎದುರಿಸುವಲ್ಲಿ ವಿಫಲರಾದೆವು' ಎಂದಿದ್ದಾರೆ.

ಭಾರತವನ್ನು ಆಸಿಸ್​ನ ಸ್ಪಿನ್ನರ್​ಗಳಾದ ಮ್ಯಾಥ್ಯೂ ಕುಹ್ನೆಮನ್ ಮತ್ತು ನಾಥನ್​ ಲಿಯಾನ್ ಹೋಳ್ಕರ್​ ಪಿಚ್​ನಲ್ಲಿ ಪ್ರಾಬಲ್ಯ ಸಾಧಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಮ್ಯಾಥ್ಯೂ ಕುಹ್ನೆಮನ್ 5 ವಿಕೆಟ್​ ಪಡೆದರೆ, ಎರಡನೇ ಇನ್ನಿಂಗ್ಸ್​ನಲ್ಲಿ ಲಿಯಾನ್​ 8 ವಿಕೆಟ್​ ಪಡೆದರು. ಪಂದ್ಯದಲ್ಲಿ ಒಟ್ಟು 11 ವಿಕೆಟ್​ ಕಬಳಿಸಿದ ನಾಥನ್​ ಲಿಯಾನ್​ ಅವರಿಗೆ ಪಂದ್ಯ ಶ್ರೆಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

'ನಾವು 1 ನೇ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟ್ ಮಾಡಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್​ ರನ್‌ಗಳನ್ನು ಕಲೆ ಹಾಕುವುದು ಎಷ್ಟು ಮುಖ್ಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆಸಿಸ್​ ಮೊದಲ ಇನ್ನಿಂಗ್ಸ್​ನಲ್ಲಿ ಅವರನ್ನು ಕಟ್ಟಿ ಹಾಕುವಲ್ಲಿ ವಿಫಲರಾದೆವು. ಅವರು 80-90 ರನ್ ಲೀಡ್ ಪಡೆದಾಗ, ನಾವು ಎರಡನೇ ಇನ್ನಿಂಗ್ಸ್​ನಲ್ಲಿ ಹೆಚ್ಚಿನ ರನ್​ ಗಳಿಸುವ ಅಗತ್ಯ ಇತ್ತು ಆದರೆ, ಟಫ್​ ಲಕ್​ ನಾವು ಕೇವಲ 70-80ರನ್​ಗಳ ಗುರಿ ಅವರಿಗೆ ನೀಡಿದೆವು. ನಮ್ಮ ಈ ಬ್ಯಾಟಿಂಗ್​ ವೈಫಲ್ಯ ಪಂದ್ಯದ ಸೋಲಿಗೆ ಕಾರಣವಾಯಿತು' ಎಂದು ರೋಹಿತ್​ ಹೇಳಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಬಗ್ಗೆ ಇನ್ನೂ ನಾವು ಯೋಚಿಸಿಲ್ಲ. ನಮ್ಮ ಮುಂದೆ ನಾಲ್ಕನೇ ಟೆಸ್ಟ್​ ಮತ್ತು ಸರಣಿ ಗೆಲ್ಲುವ ತವಕ ಇದೆ. ಇನ್ನಷ್ಟು ತಂಡವನ್ನು ಬಲಿಷ್ಟವಾಗಿಸಿ ಕಣಕ್ಕಿಳಿಯುವ ಯೋಜನೆ ಇದೆ. ಅಹಮದಾಬಾದ್​ ಟೆಸ್ಟ್​ಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಮೊದಲೆರಡು ಟೆಸ್ಟ್​ನಲ್ಲಿ ನಾವು ಏನು ಮಾಡಿದ್ದೆವೋ ಅದರ ಬಗ್ಗೆ ಹೆಚ್ಚು ಗಮನ ಹರಿಸಿ ಮುಂದಿನ ಪಂದ್ಯಕ್ಕೆ ಅಳವಡಿಸಿಕೊಳ್ಳುತ್ತೆವೆ ಎಂದರು.

ತಾಯಿಯ ಅನಾರೋಗ್ಯದ ಕಾರಣ ಪಂದ್ಯದಿಂದ ಕಮಿನ್ಸ್​ ಹೊರಗುಳಿದಿದ್ದು ಅವರ ಬದಲಿಯಾಗಿ ಆಸಿಸ್​ ನಾಯಕತ್ವ ವಹಿಸಿದ್ದ ಸ್ಟೀವ್​ ಸ್ಮಿತ್​ ಮಾತನಾಡಿ,' ನಮ್ಮ ಬೌಲರ್‌ಗಳು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದರು, ವಿಶೇಷವಾಗಿ ಮ್ಯಾಥ್ಯೂ ಕುಹ್ನೆಮನ್ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಲಿಯಾನ್​. ಮೊದಲ ಇನ್ನಿಂಗ್ಸ್​​ನಲ್ಲಿ ಉಸ್ಮಾನ್ ಖವಾಜಾರ ರನ್​ ತಂಡಕ್ಕೆ ಹೆಚ್ಚಿನ ಬಲ ನೀಡಿತು ಇದು ಕೂಡ ಗೆಲುವಿಗೆ ಕಾರಣ. ನಾವು ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ಗೆ ತಲುಪಿರುವುದು ಸಂತಸ ತಂದಿದೆ' ಎಂದಿದ್ದಾರೆ.

ಇದನ್ನೂ ಓದಿ: IND Vs AUS 3rd Test: ಆಸೀಸ್​ ಸ್ಪಿನ್ನರ್​ಗಳೆದುರು ಎಡವಿಡ ಭಾರತ, 109ಕ್ಕೆ ಸರ್ವ ಪತನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.