ಡಬ್ಲಿನ್ (ಐರ್ಲೆಂಡ್): ಮುಂದಿನ ವರ್ಷದ ಟಿ-20 ವಿಶ್ವಕಪ್ಗೆ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಭಾರತ ಈಗಲೇ ತಂಡದಲ್ಲಿ ಪ್ರಯೋಗ ಆರಂಭಿಸಿದೆ. ಇಂದಿನಿಂದ ಐರ್ಲೆಂಡ್ ವಿರುದ್ಧ ಆರಂಭವಾಗಲಿರುವ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಐಪಿಎಲ್ ಮತ್ತು ದೇಶೀ ಕ್ರಿಕೆಟ್ನಲ್ಲಿ ಮಿಂಚಿದ ಪ್ರತಿಭೆಗಳು ಈ ಸರಣಿಯಲ್ಲಿದ್ದು, ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ತಂಡ ಮೈದಾನಕ್ಕಿಳಿಯಲಿದೆ.
-
From emotions of an India call-up to the first flight ✈️ & Training session with #TeamIndia 😃
— BCCI (@BCCI) August 17, 2023 " class="align-text-top noRightClick twitterSection" data="
𝗪𝗵𝗲𝗻 𝗱𝗿𝗲𝗮𝗺𝘀 𝘁𝗮𝗸𝗲 𝗳𝗹𝗶𝗴𝗵𝘁 ft. @rinkusingh235 & @jiteshsharma_ 👌👌 - By @RajalArora
Full Interview 🎥🔽 #IREvINDhttps://t.co/m4VsRCAwLk pic.twitter.com/ukLnAOFBWO
">From emotions of an India call-up to the first flight ✈️ & Training session with #TeamIndia 😃
— BCCI (@BCCI) August 17, 2023
𝗪𝗵𝗲𝗻 𝗱𝗿𝗲𝗮𝗺𝘀 𝘁𝗮𝗸𝗲 𝗳𝗹𝗶𝗴𝗵𝘁 ft. @rinkusingh235 & @jiteshsharma_ 👌👌 - By @RajalArora
Full Interview 🎥🔽 #IREvINDhttps://t.co/m4VsRCAwLk pic.twitter.com/ukLnAOFBWOFrom emotions of an India call-up to the first flight ✈️ & Training session with #TeamIndia 😃
— BCCI (@BCCI) August 17, 2023
𝗪𝗵𝗲𝗻 𝗱𝗿𝗲𝗮𝗺𝘀 𝘁𝗮𝗸𝗲 𝗳𝗹𝗶𝗴𝗵𝘁 ft. @rinkusingh235 & @jiteshsharma_ 👌👌 - By @RajalArora
Full Interview 🎥🔽 #IREvINDhttps://t.co/m4VsRCAwLk pic.twitter.com/ukLnAOFBWO
ಸರಿ ಸುಮಾರು ಹನ್ನೊಂದು ತಿಂಗಳ ಬಿಡುವಿನ ನಂತರ ಜಸ್ಪ್ರೀತ್ ಬುಮ್ರಾ ಮೈದಾನಕ್ಕಿಳಿಯುತ್ತಿದ್ದು, ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಹಿನ್ನೆಲೆ ಎಲ್ಲರ ಕಣ್ಣು ಇವರ ಮೇಲೆಯೇ ಇದೆ. ಬುಮ್ರಾ ಮೇಲೆ ಈ ಸರಣಿಯಲ್ಲಿ ಕಮ್ಬ್ಯಾಕ್ ಮಾಡುವುದರ ಜೊತೆಗೆ ನಾಯಕತ್ವದ ಒತ್ತಡವೂ ಇದೆ. ಇವೆರಡರ ನಡುವ ಬುಮ್ರಾ ತಮ್ಮನ್ನು ಸಾಬೀತು ಮಾಡಿಕೊಳ್ಳಬೇಕಿದೆ. ಇವರ ಜೊತೆ ಪ್ರಸಿದ್ಧ ಕೃಷ್ಣ ಸಹ ಗಾಯದಿಂದ ಹೊರ ಬಂದ ನಂತರ ಟೀಮ್ ಇಂಡಿಯಾಗಾಗಿ ಆಡುತ್ತಿದ್ದಾರೆ. ಈ ಕನ್ನಡಿಗನ ಮೇಲೆಯೂ ನಿರೀಕ್ಷೆಗಳು ಬಹಳಷ್ಟಿವೆ.
ಭಾರತ ತಂಡದಲ್ಲಿ ಐಪಿಎಲ್ ಸ್ಟಾರ್ಗಳ ದಂಡೇ ಇದೆ. 2023 ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶೈನ್ ಆದ ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಜಿತೇಶ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಇದ್ದಾರೆ. ಇವರಲ್ಲಿ ರಿಂಕು, ಜಿತೇಶ್ ಶರ್ಮಾ ಪದಾರ್ಪಣೆಗೆ ಎದುರು ನೋಡುತ್ತಿದ್ದಾರೆ. ಗಾಯಕ್ವಾಡ್ ಮತ್ತು ದುಬೆ ತಂಡಕ್ಕೆ ಕಮ್ಬ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
-
If you're planning to come to the @joy_ebike Ireland v India Men's T20I matches here are some options on how to get here!#BackingGreen 🏏☘️ #ForTheUnbreakable #Joyebike #BharatKaJoy pic.twitter.com/GH5YOhZPJe
— Cricket Ireland (@cricketireland) August 17, 2023 " class="align-text-top noRightClick twitterSection" data="
">If you're planning to come to the @joy_ebike Ireland v India Men's T20I matches here are some options on how to get here!#BackingGreen 🏏☘️ #ForTheUnbreakable #Joyebike #BharatKaJoy pic.twitter.com/GH5YOhZPJe
— Cricket Ireland (@cricketireland) August 17, 2023If you're planning to come to the @joy_ebike Ireland v India Men's T20I matches here are some options on how to get here!#BackingGreen 🏏☘️ #ForTheUnbreakable #Joyebike #BharatKaJoy pic.twitter.com/GH5YOhZPJe
— Cricket Ireland (@cricketireland) August 17, 2023
ಅನುಭವಿ ಸಂಜು ಸ್ಯಾಮ್ಸನ್ ಮತ್ತು ಡೆಬ್ಯೂಗೆ ಎದುರು ನೋಡುತ್ತಿರುವ ಜಿತೇಶ್ ಶರ್ಮಾ ನಡುವೆ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಡಲಿದೆ. ಅಲ್ಲದೇ ಆಲ್ರೌಂಡರ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್ ಮತ್ತು ಶಿವಂ ದುಬೆ ನಡುವೆ ಪೈಪೋಟಿ ಇದೆ. ಭಾರತಕ್ಕೆ ಏಕದಿನ ಆಡಿರುವ ಅನುಭವ ಇರುವ ಶಹಬಾಜ್ ಅಹಮದ್ ಟಿ-20 ಪದಾರ್ಪಣೆ ಅವಕಾಶವನ್ನು ಈ ಸರಣಿಯಲ್ಲಿ ಎದುರು ನೋಡುತ್ತಿದ್ದಾರೆ. ವಿಂಡೀಸ್ ಪ್ರವಾಸದಲ್ಲಿ ಡೆಬ್ಯೂ ಆಗಿ ಉತ್ತಮ ಪ್ರದರ್ಶನ ನೀಡಿರುವ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ ಮತ್ತು ಮುಖೇಶ್ ಕುಮಾರ್ ಈ ಸರಣಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದಿರುವ ಐರ್ಲೆಂಡ್ ತಂಡವನ್ನು ಕಡೆಗಣಿಸುವಂತಿಲ್ಲ. ಅಲ್ಲಿಯೂ ಅನುಭವಿ ಸ್ಟಾರ್ ಆಟಗಾರರಿದ್ದು, ಭಾರತದ ಐಪಿಎಲ್ ಪ್ರತಿಭೆಗಳನ್ನು ಮಣಿಸಿ ತಮ್ಮ ಸಾಮರ್ಥ್ಯ ತೋರಲು ಅವರೂ ಸಿದ್ಧರಾಗಿದ್ದಾರೆ. ಇದರಿಂದ ಬುಮ್ರಾಗೆ ಈ ಸರಣಿಯಲ್ಲಿ ಕಠಿಣ ಪೈಪೋಟಿ ಎದುರಿಸಬೇಕಾಗಿ ಬರಬಹುದು.
ಹವಾಮಾನ ವರದಿ: ಮೈದಾನದ ಸುತ್ತಮುತ್ತ ಮಳೆ ಸಂಭವ ಇದೆ. ಅಲ್ಲಿನ ಹವಾಮಾನ ಇಲಾಖೆ ಡಬ್ಲಿನ್ನಲ್ಲಿ ಎಲ್ಲೋ ಅಲರ್ಟ್ ಘೋಷಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿ ಆಗುವ ಸಾಧ್ಯತೆ ಬಹುತೇಕ ಇದೆ ಎನ್ನಲಾಗಿದೆ. ಈ ಲೆಕ್ಕಾಚಾರದಲ್ಲಿ ಟಾಸ್ ಗೆದ್ದವರು ಮೊದಲು ಬೌಲಿಂಗ್ ಮಾಡುವುದು ಉಚಿತ. ಏಕೆಂದರೆ ಡಿಎಲ್ಎಸ್ ನಿಯಮ ಹೇರಿದರೆ ಚೇಸಿಂಗ್ ಸುಲಭವಾಗಲಿದೆ.
-
Doublin’ the intensity in Dublin ft. #TeamIndia 😎#IREvIND pic.twitter.com/xcOzf2e0oO
— BCCI (@BCCI) August 16, 2023 " class="align-text-top noRightClick twitterSection" data="
">Doublin’ the intensity in Dublin ft. #TeamIndia 😎#IREvIND pic.twitter.com/xcOzf2e0oO
— BCCI (@BCCI) August 16, 2023Doublin’ the intensity in Dublin ft. #TeamIndia 😎#IREvIND pic.twitter.com/xcOzf2e0oO
— BCCI (@BCCI) August 16, 2023
ಪಂದ್ಯ ಎಲ್ಲಿ ಮತ್ತು ಯಾವಾಗ?: ಡಬ್ಲಿನ್ನ ದ ವಿಲೆಜ್ ಮೈದಾನದಲ್ಲಿ ಸಂಜೆ 7:30ರಿಂದ ಪಂದ್ಯ ಆರಂಭವಾಗಲಿದೆ. ಜಿಯೋ ಸಿನಿಮಾ, ಸ್ಪೋರ್ಟ್ಸ್ 18 ಮತ್ತು ಡಿಡಿ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ಲಭ್ಯವಿರಲಿದೆ.
ಸಂಭಾವ್ಯ ತಂಡ ಇಂತಿದೆ: ಭಾರತ: ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ನಾಯಕ), ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್
ಐರ್ಲೆಂಡ್: ಆಂಡ್ರ್ಯೂ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್, ಹ್ಯಾರಿ ಟೆಕ್ಟರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಕರ್ಟಿಸ್ ಕ್ಯಾಂಫರ್, ಮಾರ್ಕ್ ಅಡೇರ್, ಜೋಶುವಾ ಲಿಟಲ್, ಬ್ಯಾರಿ ಮೆಕಾರ್ಥಿ, ಬೆಂಜಮಿನ್ ವೈಟ್
ಇದನ್ನೂ ಓದಿ: ಭಾರತ ತಂಡದ ನಾಲ್ಕನೇ ಕ್ರಮಾಂಕದ ಬಿಕ್ಕಟ್ಟು: ಈ ಆಟಗಾರನನ್ನು ಆಡಿಸಲು ರವಿಶಾಸ್ತ್ರಿ ಸಲಹೆ