ETV Bharat / sports

ಇರಾನ್ ಮಹಿಳೆಯ ಹಕ್ಕು ಬೆಂಬಲಿಸಿದ್ದ ಫುಟ್ಬಾಲ್ ಆಟಗಾರನಿಗೂ ಗಲ್ಲು ಶಿಕ್ಷೆ? - ಮಹ್ಸಾ ಅಮಿನಿ

ಇರಾನ್‌ನಲ್ಲಿ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸಿದ ಕಾರಣಕ್ಕಾಗಿ ಫುಟ್ಬಾಲ್ ಆಟಗಾರ ನಾಸರ್ ಅಜಾದಾನಿ ಅವರಿಗೂ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವರದಿಯಾಗಿದೆ.

iranian-footballer-to-be-executed-for-supporting-womens-rights-campaign-reports
ಹಿಜಾಬ್​ ವಿವಾದ... ಮಹಿಳಾ ಹಕ್ಕು ಬೆಂಬಲಿಸಿದ್ದ ಇರಾನ್​ನ ಫುಟ್ಬಾಲ್ ಆಟಗಾರನಿಗೆ ಗಲ್ಲು: ವರದಿ
author img

By

Published : Dec 13, 2022, 9:51 PM IST

ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್​ ವಿರೋಧಿ ಆಂದೋಲನದಲ್ಲಿ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸಿದ್ದ 26 ವರ್ಷದ ಫುಟ್ಬಾಲ್ ಆಟಗಾರ ನಾಸರ್ ಅಜಾದಾನಿ ಅವರಿಗೂ ಗಲ್ಲು ಶಿಕ್ಷೆ ವಿಧಿಸಲು ಇರಾನ್ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.

ಸರಿಯಾಗಿ ಸ್ಕಾರ್ಪ್​ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧನಕ್ಕೊಳಪಟ್ಟಿದ್ದ 22 ವರ್ಷದ ಯುವತಿ ಮಹ್ಸಾ ಅಮಿನಿ ಪೊಲೀಸ್ ವಶದಲ್ಲಿ ಮೃತಪಟ್ಟಿದ್ದರು. ಈಕೆಯ ಸಾವಿನ ನಂತರ ಇರಾನ್‌ನಲ್ಲಿ ಹಿಜಾಬ್​ ವಿರೋಧಿಸಿ ಮಹಿಳಾ ಹಕ್ಕಿಗಾಗಿ ದೊಡ್ಡ ಮಟ್ಟದ ಆಂದೋಲನ ನಡೆಯುತ್ತಿದೆ. ಈ ಹೋರಾಟವನ್ನು ಬೆಂಬಲಿಸಿದ್ದ ಕಾರಣಕ್ಕಾಗಿ ಫುಟ್ಬಾಲ್ ಆಟಗಾರನನ್ನೂ ಸರ್ಕಾರವು ಮರಣದಂಡನೆಗೆ ಗುರಿಪಡಿಸಲು ತೀರ್ಮಾನಿಸಿದೆ ಎಂದು ವರದಿಗಳು ತಿಳಿಸಿವೆ.

  • FIFPRO is shocked and sickened by reports that professional footballer Amir Nasr-Azadani faces execution in Iran after campaigning for women’s rights and basic freedom in his country.

    We stand in solidarity with Amir and call for the immediate removal of his punishment. pic.twitter.com/vPuylCS2ph

    — FIFPRO (@FIFPRO) December 12, 2022 " class="align-text-top noRightClick twitterSection" data=" ">

ವಿಶ್ವಾದ್ಯಂತ ವೃತ್ತಿಪರ ಫುಟ್ಬಾಲ್ ಆಟಗಾರರನ್ನು ಪ್ರತಿನಿಧಿಸುವ ಎಫ್​​ಐಎಫ್​​ಪಿಆರ್​ಓ (FIFPRO) ಸಂಸ್ಥೆ ಪ್ರತಿಕ್ರಿಯಿಸಿ, ನಾಸರ್ ಅಜಾದಾನಿ ಅವರನ್ನು ಗಲ್ಲಿಗೇರಿಸುವ ವಿಷಯ ತಿಳಿದು ಆಘಾತವಾಗಿದೆ. ನಾವು ಅವರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ. ಜೊತೆಗೆ ಅವರಿಗೆ ವಿಧಿಸಿರುವ ಈ ಕಠಿಣ ಶಿಕ್ಷೆಯನ್ನು ತಕ್ಷಣವೇ ರದ್ದು ಮಾಡುವಂತೆ ಕರೆ ನೀಡುತ್ತೇವೆ ಎಂದು ಟ್ವೀಟ್​ ಮಾಡಿದೆ.

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯಲ್ಲೂ ಇರಾನ್ ಆಟಗಾರರು ಮಹಿಳಾ ಹೋರಾಟವನ್ನು ಬೆಂಬಲಿಸಿ, ಇದರ ಭಾಗವಾಗಿ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ಪಂದ್ಯದಲ್ಲಿ ದೇಶದ ರಾಷ್ಟ್ರಗೀತೆಯನ್ನೂ ಹಾಡಿರಲಿಲ್ಲ.

ಇದನ್ನೂ ಓದಿ: ಇರಾನ್​ನ 80 ನಗರಗಳಿಗೆ ಹರಡಿದ ಹಿಜಾಬ್ ವಿರೋಧಿ​ ಕಿಚ್ಚು: 300ಕ್ಕೂ ಹೆಚ್ಚು ಮಂದಿ ಸಾವು, 14 ಸಾವಿರ ಜನರ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.